ಶುಕ್ರವಾರ, ಜೂನ್ 25, 2021
21 °C
ಬೋಧಗಯಾ ಸರಣಿ ಬಾಂಬ್‌ ಸ್ಫೋಟ

ಇಬ್ಬರು ಎನ್‌ಐಎ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ (ಐಎಎನ್‌ಎಸ್‌): ಬೋಧಗಯಾದಲ್ಲಿ 2013ರ ಜುಲೈ 7ರಂದು ನಡೆದ ಸರಣಿ ಬಾಂಬ್‌ ಸ್ಫೋಟ ಪ್ರಕ­ರ­ಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌­ಐಎ) ಇಲ್ಲಿನ ಅರ್ವಾಲ್‌ ಜಿಲ್ಲೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆ­ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎನ್‌ಐಎ ಕಳೆದ ವಾರವಷ್ಟೇ ಒಬ್ಬನನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆಗೆ ಒಳಪಡಿಸಿತ್ತು ಎಂದು ಅವರು ತಿಳಿಸಿದರು.ಬೋಧಗಯಾದ ಮಹಾಬೋಧಿ ದೇವ­ಸ್ಥಾನ­ದಲ್ಲಿ ಹತ್ತು ಬಾಂಬ್‌ಗಳು  ಸ್ಫೋಟ­ಗೊಂಡಿ­ದ್ದರಿಂದ  ಇಬ್ಬರು ಬೌದ್ಧ ಭಿಕ್ಷುಗಳು ಗಾಯಗೊಂಡಿದ್ದರು. ನಂತರ ದೇವ­ಸ್ಥಾನದ ಆವರಣದೊಳಗಿದ್ದ ಮೂರು ಸಜೀವ ಬಾಂಬ್‌­ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.