ಮಂಗಳವಾರ, ಜೂನ್ 15, 2021
21 °C
ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ

ಇಬ್ಬರ ಗಲ್ಲು ಶಿಕ್ಷೆಗೆ ‘ಸುಪ್ರೀಂ’ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ದೆಹಲಿ ಸಾಮೂ ಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಅಪ­ರಾಧಿ­ಗಳ ಗಲ್ಲು ಶಿಕ್ಷೆಗೆ ಸುಪ್ರೀಂ­ಕೋರ್ಟ್‌ ಮಾರ್ಚ್‌ 31 ರವರೆಗೆ ತಡೆ ನೀಡಿದೆ.2012ರ ಡಿಸೆಂಬರ್‌ 16ರಂದು ಚಲಿಸುತ್ತಿದ್ದ ಬಸ್‌ನಲ್ಲಿ ಪ್ಯಾರಾ­ಮೆಡಿ­ಕಲ್‌ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂ­ಹಿಕ ಅತ್ಯಾಚಾರ ಪ್ರಕರಣದಲ್ಲಿ ಮುಕೇಶ್‌ (27), ಪವನ್‌ ಗುಪ್ತಾ (20), ಅಕ್ಷಯ್‌ ಠಾಕೂರ್‌ (29) ಹಾಗೂ ವಿನಯ್‌ ಶರ್ಮಾಗೆ (21) ವಿಚಾ­ರಣಾ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿತ್ತು. ಎರಡು ದಿನಗಳ ಹಿಂದೆ­ಯಷ್ಟೇ ದೆಹಲಿ ಹೈಕೋರ್ಟ್‌ ಇದನ್ನು  ಎತ್ತಿಹಿಡಿದಿತ್ತು.ಹೈಕೋರ್ಟ್‌್ ಆದೇಶವನ್ನು ಪ್ರಶ್ನಿಸಿ ಮುಖೇಶ್‌್ ಹಾಗೂ ಪವನ್‌್ ಶನಿವಾರ ಸುಪ್ರೀಂ­ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿ­ಸಿ­­ದ್ದರು. ಇದನ್ನು ಪುರಸ್ಕರಿಸಿದ ನ್ಯಾಯ­­ಮೂರ್ತಿಗಳಾದ ರಂಜನಾ ಪ್ರಕಾಶ್‌ ದೇಸಾಯಿ  ಮತ್ತು ಶಿವ ಕೀರ್ತಿ­ಸಿಂಗ್‌್ ಅವ­ರನ್ನು ಒಳಗೊಂಡ  ಪೀಠ ‘ಮುಖೇಶ್‌ ಹಾಗೂ ಪವನ್‌  ಗಲ್ಲು ಶಿಕ್ಷೆಗೆ ಮಾ.31 ರವರೆಗೆ ತಡೆ ನೀಡ­ಲಾ­ಗಿದೆ’ ಎಂದು ಹೇಳಿದೆ.ಮುಕೇಶ್‌್ ಹಾಗೂ ಪವನ್‌್ ಪರವಾಗಿ ವಕೀಲ ಎಂ.ಎಲ್‌.ಶರ್ಮಾ ಮೇಲ್ಮನವಿ ಸಲ್ಲಿಸಿ­­ದ್ದರು. ‘ವಿಚಾರಣೆ ನ್ಯಾಯ­ಸಮ್ಮತ­ವಾಗಿ ನಡೆದಿಲ್ಲ. ವಾಸ್ತವ ಸಂಗ­ತಿಗೆ ವ್ಯತಿ­ರಿಕ್ತ­ವಾಗಿ ಕಟ್ಟುಕತೆ­ಯನ್ನು ಒಪ್ಪಿ­ಕೊ­ಳ್ಳು­ವಂ­ತೆ ಕಿರುಕುಳ ನೀಡ­ಲಾ­ಗಿತ್ತು’ ಎಂದು ಮುಕೇಶ್‌್ ಹಾಗೂ ಪವನ್‌್ ದೂರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.