ಮಂಗಳವಾರ, ಮಾರ್ಚ್ 9, 2021
18 °C

ಇರೋಮ್‌ ಶರ್ಮಿಳಾ ಉಪವಾಸ ಇಂದು ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇರೋಮ್‌ ಶರ್ಮಿಳಾ ಉಪವಾಸ ಇಂದು ಅಂತ್ಯ

ಇಂಫಾಲ (ಪಿಟಿಐ): ಮಣಿಪುರದಲ್ಲಿ ಜಾರಿಯಲ್ಲಿರುವ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ರದ್ದುಮಾಡಬೇಕೆಂದು ಆಗ್ರಹಿಸಿ 16 ವರ್ಷಗಳಿಂದ  ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹಕ್ಕೆ ಇರೋಮ್‌ ಶರ್ಮಿಳಾ ಮಂಗಳವಾರ ಅಂತ್ಯ ಹಾಡಲಿದ್ದಾರೆ.ಮಣಿಪುರದ ಉಕ್ಕಿನ ಮಹಿಳೆ ಎಂದೇ ಖ್ಯಾತರಾಗಿರುವ ಶರ್ಮಿಳಾ ಅವರಿಗೆ 2000 ಇಸವಿಯಿಂದ ದ್ರವರೂಪದ ಆಹಾರವನ್ನು ಮೂಗಿನ ಮೂಲಕ ಅಳವಡಿಸಲಾಗಿರುವ ನಳಿಕೆಯಿಂದ ನೀಡಲಾಗುತ್ತಿದೆ. ‘ಶರ್ಮಿಳಾ ಅವರನ್ನು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಗುವುದು. ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸುವ ಘೋಷಣೆ ಮಾಡಿದ  ನಂತರ ನ್ಯಾಯಾಂಗ ಬಂಧನದಿಂದ ಅವರು ಬಿಡುಗಡೆಯಾಗಲಿದ್ದಾರೆ’ ಎಂದು ಶರ್ಮಿಳಾ ಸಹೋದರ ಇರೋಮ್‌ ಸಿಂಗ್‌ಜಿತ್‌ ಹೇಳಿದ್ದಾರೆ.‘ಶರ್ಮಿಳಾ ಕುಂಭ ಲೂಪ್‌’ ವೇದಿಕೆಯಡಿ ಅವರ ಬೆಂಬಲಿಗರು ಮತ್ತು ಹೋರಾಟಗಾರರು ಒಂದಾಗಿ ಶರ್ಮಿಳಾ ಅವರ ಹೊಸ ಪಯಣಕ್ಕೆ ಸಾಥ್‌  ನೀಡಲಿದ್ದಾರೆ. ‘ನ್ಯಾಯಾಂಗ ಬಂಧನದಿಂದ ಬಿಡುಗಡೆಯಾದ ನಂತರ ಅವರು (ಶರ್ಮಿಳಾ) ಎಲ್ಲಿ ಹೋಗುತ್ತಾರೆ ಎಂಬುದು ಗೊತ್ತಿಲ್ಲ.  ಮನೆಗೆ ಬಂದು ಕುಟುಂಬದವರೊಂದಿಗೆ ಇರಲು ಬಯಸಿದಲ್ಲಿ ಸ್ವಾಗತಕ್ಕೆ ನಾವು ಸಿದ್ಧ’ ಎಂದು ಸಿಂಗ್‌ಜಿತ್‌ ತಿಳಿಸಿದ್ದಾರೆ.ಈಶಾನ್ಯ ರಾಜ್ಯಗಳು ಮತ್ತು ಕಾಶ್ಮೀರದಲ್ಲಿ  ಸೇನಾ ಯೋಧರು ನಡೆಸುತ್ತಿದ್ದ ದಬ್ಬಾಳಿಕೆ ಮತ್ತು ದೌರ್ಜನ್ಯವನ್ನು ಖಂಡಿಸಿ ಇರೋಮ್‌ ಶರ್ಮಿಳಾ  2000ನೇ ವರ್ಷದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.