ಸರಗೂರು: ಹಲವು ಕೊರತೆಗಳಲ್ಲಿ ನಲುಗುತ್ತಿರುವ ಸರಗೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳು ತೊಂದರೆಗೊಳಗಾಗಿದ್ದಾರೆ.

ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರ ಕೊರತೆ, ನರ್ಸ್, ಸಿಬ್ಬಂದಿಗಳ ಕೊರತೆ, ಆಂಬುಲೆನ್ಸ್, ಶೌಚಾಲಯ ವ್ಯವಸ್ಥೆ, ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಳ ಕೊರತೆ ಇವೆ. ಇಲ್ಲಿ ಬರುವ ರೋಗಿಗಳಿಗೆ ಕುಳಿತುಕೊಳ್ಳಲು ಆಸನಗಳೂ ಇಲ್ಲ.

ರಾತ್ರಿ ಸಮಯದಲ್ಲಿ ಹೆರಿಗೆ ಹಾಗೂ ಇನ್ನಿತರ ಚಿಕಿತ್ಸೆಗೆ ರೋಗಿಗಳು ಬಂದರೆ ಡಿ.ಗ್ರೂಪ್ ನೌಕರ ವೈದ್ಯರನ್ನು ಮನೆಯಿಂದ ಕರೆದು ಕೊಂಡು ಬಂದು ಚಿಕಿತ್ಸೆ ನೀಡುತ್ತಿದ್ದರು. ಇಲ್ಲಿ ರೋಗಿಗಳಿಗೆ ವ್ಯವಸ್ಥಿತವಾದ ಶೌಚಾಲಯ ಇಲ್ಲ. ಇರುವ ಶೌಚಾಲಯಕ್ಕೆ ಬಾಗಿಲೇ ಇಲ್ಲ. ಪಕ್ಕದಲ್ಲಿ ಗಿಡಗಂಟಿಗಳು ಬೆಳೆದು ಕೊಂಡಿದೆ.

ಆಸ್ಪತ್ರೆಯ ಆವರಣದಲ್ಲಿ ಆಂಬುಲೆನ್ಸ್ ಕೆಟ್ಟು 6 ವರ್ಷ ಆದರೂ ಅದರ ದುರಸ್ತಿಯಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಕೈಪಂಪ್ ಇದೆ ಅಲ್ಲಿಂದ ಬರುವ ನೀರು ಹೊರ ಹೋಗಲು ಸ್ಥಳ ಇಲ್ಲದೇ ನೀರು ನಿಂತಲ್ಲೆ ಕೊಳೆಯುತ್ತಿದೆ.

ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ 10 ವರ್ಷ ಆಗಿದೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಇನ್ನೂ ಉಳಿದಿದೆ. ಸರಗೂರು ಪಟ್ಟಣದಲ್ಲಿ 16 ಸಾವಿರ ಜನಸಂಖ್ಯೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಇರುವುದನ್ನು ಮೇಲು ದರ್ಜೆಗೆ ಏರಿಸಬೇಕು.

ಸುತ್ತ ಮುತ್ತಲಿನ ಗ್ರಾಮಾಂತರ ಪ್ರದೇಶದಿಂದ ಚಿಕಿತ್ಸೆಗೆ ಬರುತ್ತಾರೆ. ಸುಮಾರು 76 ಗ್ರಾಮಗಳ ಜನರು ಬರುತ್ತಾರೆ. ಗ್ರಾಮಾಂತರ ಪ್ರದೇಶದಿಂದ ಮಹಿಳೆಯರು ಚಿಕಿತ್ಸೆಗೆ ಆರೋಗ್ಯ ಕೇಂದ್ರಕ್ಕೆ ಬಂದರೆ ಇಲ್ಲಿ ಮಹಿಳಾ ವೈದ್ಯರಿಲ್ಲದೆ ಗರ್ಭಿಣಿಯರಿಗೆ ತೊಂದರೆ ಆಗುತ್ತಿದೆ.

ಕಳೆದ ಐದು ತಿಂಗಳ ಹಿಂದೆ ಡಾ.ಹೇಮಪ್ರಿಯ ಹೆಚ್ಚಿನ ವ್ಯಾಸಂಗಕ್ಕೆ ಹೋಗಿದ್ದು ತೆರವಾಗಿರುವ ಸ್ಥಾನಕ್ಕೆ ಇನ್ನು ಯಾರನ್ನೂ ನೇಮಕ ಮಾಡಿಲ್ಲ. ಡಿ.ಗ್ರೂಪ್ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದ ರಾಮಕೃಷ್ಣ ಹೃದಯಾಘಾತ ವಾಗಿ ನಿಧನ ಆದರು. ನಂತರ ತೆರವಾದ ಸ್ಥಾನಕ್ಕೆ ಇಲ್ಲಿಯವರೆಗೂ ಡಿ ಗ್ರುಪ್ ನೌಕರ ಬಂದಿಲ್ಲ. ಈ ಎಲ್ಲ ಕೊರತೆಗಳಿಂದ ರೋಗಿಗಳು ಪರಿತಪಿಸುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.