ಬುಧವಾರ, ಮಾರ್ಚ್ 3, 2021
21 °C
ಚನ್ನಪಟ್ಟಣ ತಾಲ್ಲೂಕಿನ ಕೆರೆಗಳಲ್ಲಿ ಹಕ್ಕಿಗಳ ಇಂಚರ * ಮನಸೆಳೆವ ಚಿತ್ತಾರ....

ಇಲ್ಲಿ ದೇವರು ರುಜು ಮಾಡುತ್ತಾನೆ..!

ಎಸ್‌. ಸಂಪತ್‌ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಲ್ಲಿ ದೇವರು ರುಜು ಮಾಡುತ್ತಾನೆ..!

ರಾಮನಗರ: ಬೊಂಬೆನಗರ ಖ್ಯಾತಿಯ ಚನ್ನಪಟ್ಟಣ ತಾಲ್ಲೂಕಿನ ಕೆಲ ಕೆರೆಗಳಲ್ಲಿ ಹಕ್ಕಿಗಳ ಕಲರವ ಆರಂಭವಾಗಿದೆ. ದೇಶ–ವಿದೇಶದ ಹಕ್ಕಿಗಳು ಆಕಾಶದಲ್ಲಿ ಹಾರಾಡುತ್ತ, ಇಲ್ಲಿನ ಕೆರೆ–ಕಟ್ಟೆಗಳಲ್ಲಿ ಬಂದು ವಿಹರಿಸಿ, ಮೀನು, ಹುಳುಗಳನ್ನು ಹಿಡಿದು ಸೇವಿಸುವ ದೃಶ್ಯ ಸಾಮಾನ್ಯವಾಗಿದೆ.ಚನ್ನಪಟ್ಟಣದ ಹೊಂಗನೂರು ಕೆರೆ, ತಿಟ್ಟಮಾ ರನಹಳ್ಳಿ ಕೆರೆ, ಸೋಗಾಲ, ಹಾರೋಕೊಪ್ಪ, ಗರಕಹಳ್ಳಿ, ನುಣ್ಣೂರು, ಇಗ್ಗಲೂರು ಕೆರೆಗಳ ಬಳಿ ಬೆಳಗ್ಗೆಯೇ ಬರುವ ವಿವಿಧ ಬಗೆಯ ಹಕ್ಕಿಗಳ ಹಾರಾಟ ಕಣ್ಮನ ಸೆಳೆಯುತ್ತವೆ.

ನೆರೆಯ ಮದ್ದೂರು ತಾಲ್ಲೂಕಿನ ಲ್ಲಿರುವ ಪ್ರಸಿದ್ಧ ಕೊಕ್ಕರೆಬೆಳ್ಳೂರಿಗೆ ಆಗಮಿಸಿರುವ ವಿದೇಶಿ ಹಕ್ಕಿಗಳು ಶಿಂಷಾ ನದಿ ಹರಿಯುವ ಚನ್ನಪಟ್ಟಣ ಭಾಗದಲ್ಲಿ ಯೂ ತಮ್ಮ ಕಲರವ ಮೂಡಿಸಿವೆ.ನವೆಂಬರ್‌ನಿಂದ ಮಾರ್ಚ್‌ವರೆಗೆ ಚಳಿ ಗಾಲದಲ್ಲಿ ಸಂತಾನೋತ್ಪತ್ತಿಗಾಗಿ ಈ ಹಕ್ಕಿಗಳು ಕೊಕ್ಕರೆ ಬೆಳ್ಳೂರಿಗೆ ದೇಶ–ವಿದೇಶಗಳಿಂದ ಹಾರಿ ಬರುತ್ತವೆ.ಅನೇಕ ಬಗೆಯ ಕೊಕ್ಕರೆಗಳು, ಪಿಲಿ ಕಾನ್‌, ನೀರು ಕೋಳಿ, ನೀರು ಕಾಗೆ, ಗ್ರೇಟ್‌ ಇಗ್ರೆಟ್‌, ಬಣ್ಣದ ಕೊಕ್ಕರೆಗಳು ಸೇರಿದಂತೆ ವಿವಿಧ ಬಗೆಯ ಹಕ್ಕಿಗಳು ಆಹಾರ ಹುಡುಕಿಕೊಂಡು ಇಲ್ಲಿನ ಕೆರೆ, ಹೊಲ, ಗದ್ದೆಗಳ ಬಳಿ ಸಂಚರಿಸುತ್ತಿವೆ ಎಂದು ಚನ್ನಪಟ್ಟಣ ಅರಣ್ಯ ವಲಯ ಸಂ ರಕ್ಷಣಾಧಿಕಾರಿ ಗಿರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಕೊಕ್ಕರೆ ಬೆಳ್ಳೂರು ಅಥವಾ ರಂಗನತಿಟ್ಟು ಪಕ್ಷಿ ಧಾಮದ ಕಡೆಯಿಂದ ಬರುವ ಈ ವಲಸೆ ಹಕ್ಕಿಗಳು ಚನ್ನಪಟ್ಟಣದ ಕೆರೆಗಳ ಬಳಿ ಸಂತಾ ನೋತ್ಪತ್ತಿಗೆ ಮುಂ ದಾಗುವುದಿಲ್ಲ. ಇಲ್ಲಿ ಗೂಡು ಗಳನ್ನೂ ಕಟ್ಟುವುದಿಲ್ಲ. ಬದಲಿಗೆ ದಿನದ 4ರಿಂದ 5 ಗಂಟೆ ಕಾಲ ಆಹಾರ ಸೇವಿಸಿ, ವಿಹರಿಸಿ, ವಿಶ್ರಮಿಸಿ ಹಾರಿ ಹೋಗುತ್ತವೆ. ಈ ಪಕ್ಷಿ ಗಳು ಈ ಭಾಗದಲ್ಲಿ ಗೂಡು ಕಟ್ಟಿರುವು ದು ಅತಿ ವಿರಳ ಎಂದು ಅವರು ಪ್ರತಿಕ್ರಿಯಿಸಿದರು.ಕಳೆದ ವರ್ಷ ಈ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಕೆಲ ಕೆರೆ–ಕಟ್ಟೆಗಳಿಗೆ ನೀರು ಬಂದಿವೆ. ಅಲ್ಲದೆ ಗರಕಹಳ್ಳಿ ಏತ ನೀರಾವರಿ ಯೋಜನೆಯಿಂದ ತಾಲ್ಲೂಕಿನ ಕೆಲ ಕೆರೆಗಳಿಗೆ ನೀರು ಹರಿದಿದೆ. ಇದರಿಂದ ಅಕ್ಕ ಪಕ್ಕದಲ್ಲಿನ ಕೃಷಿ ಚಟುವಟಿಕೆಯೂ ಗಣನೀಯವಾಗಿ ಸುಧಾರಣೆ ಕಂಡಿದೆ.

ಇದರಿಂದ ಈ ಭಾಗದಲ್ಲಿ ಅಚ್ಚ ಹಸಿರು ಆವರಿಸಿದೆ. ಹಾಗಾಗಿ ಕೊಕ್ಕರೆಬೆಳ್ಳೂರಿಗೆ ಬರುತ್ತಿರುವ ವಲಸೆ ಹಕ್ಕಿಗಳು ಆಹಾರಕ್ಕಾಗಿ ಇತ್ತ ಬರುತ್ತಿವೆ ಎಂದು ಅವರು ತಿಳಿಸಿದರು.ಹೊಂಗನೂರು ಮತ್ತು ತಿಟ್ಟಮಾರನಹಳ್ಳಿ ಕೆರೆಯಲ್ಲಿ ನೀರು ಬರಿದಾಗುತ್ತಿದ್ದು, ಹಕ್ಕಿಗಳು ಅಲ್ಲಿಂದ ಮೀನುಗಳನ್ನು ಮತ್ತು ಹುಳುಗಳನ್ನು ತಮ್ಮಉದ್ದನೆಯ ಕೊಕ್ಕಿನಿಂದ ಹೆಕ್ಕಿ ಎಳೆದು ತಿನ್ನುವ ದೃಶ್ಯಗಳು ಇಲ್ಲಿ ಕಾಣಸಿಗುತ್ತವೆ. ರೆಕ್ಕೆಗಳನ್ನು ಅಗಲವಾಗಿ ತೆರೆದುಕೊಂಡು ಹಾರಾಡುತ್ತಾ ನೀರಿನ ಬಳಿ ಬರುವ ಅವುಗಳ ಸಡಗರವನ್ನು ನೋಡುವುದೇ ಒಂದು ಚೆಂದ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.