ಬೆಂಗಳೂರು: ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ಉಕ್ತಿಯನ್ನು ಪರಿಪಾಲಿಸಿರುವ ಬಿಬಿಎಂಪಿ ರಾಜಕಾಲುವೆಯಿಂದ ತೆಗೆದ ಹೂಳನ್ನು ಕಾಲುವೆಯಲ್ಲೇ ಹಾಕಿದೆ. ಇದಕ್ಕೆ ಆ ಹೂಳಿನ ಮೇಲೆ ಬೆಳೆದಿರುವ ಗಿಡಗಂಟಿಗಳೇ ಸಾಕ್ಷ್ಯ ಹೇಳುತ್ತಿವೆ.

ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕಾ) ಬಡಾವಣೆ, ಮೈಸೂರು ರಸ್ತೆಯ ಬಳಿಯ ರಾಜಕಾಲುವೆಯಲ್ಲಿ ಕಂಡುಬಂದ ದೃಶ್ಯ ಇದು. ಅಕ್ಷರಶಃ ತ್ಯಾಜ್ಯ ವಿಲೇವಾರಿ ಸ್ಥಳವಾಗಿ ಗೋಚರವಾಗುವ ವೃಷಭಾವತಿ ರಾಜಕಾಲುವೆ ಪಕ್ಕದಲ್ಲಿ ಕಟ್ಟಡ ತ್ಯಾಜ್ಯ ತಂದು ಸುರಿಯಲಾಗಿದೆ. ಅಲ್ಲದೆ ಕಾಲುವೆಯಲ್ಲಿ ನಿಂತ ಕಸ ತೆಗೆದು ವರ್ಷಗಳೇ ಕಳೆದಿವೆ ಎಂಬುದನ್ನು ಅಲ್ಲಿನ ಚಿತ್ರಣವೇ ಸಾರುತ್ತಿತ್ತು.

ಪ್ರತಿವರ್ಷ ಮಳೆಗಾಲದಲ್ಲಿ ವೃಷಭಾವತಿ ಕಾಲುವೆ ನೀರು, ಗಾಳಿ ಆಂಜನೇಯಸ್ವಾಮಿ ದೇವಾಲಯದೊಳಗೆ ಹರಿಯುತ್ತಿತ್ತು. ಅದನ್ನು ತಡೆಯಲು ಐದು ವರ್ಷಗಳ ಹಿಂದೆ ಇಲ್ಲಿನ ಕಾಲುವೆಯ ಸೇತುವೆ ಪುನರ್ ನಿರ್ಮಾಣಕ್ಕೆ ಬಿಬಿಎಂಪಿಯಲ್ಲಿ ₹5.47 ಕೋಟಿ ರೂ. ಮೊತ್ತದ ಟೆಂಡರ್ಗೆ ಅನುಮೋದನೆ ದೊರೆತಿತ್ತು. ನಾಲ್ಕು ವರ್ಷದ ಬಳಿಕ 2015ರ ಫೆಬ್ರುವರಿಯಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಡಿಸೆಂಬರ್ ವೇಳೆಗೆ ಒಂದು ಭಾಗದ ಸೇತುವೆ ಕಾಮಗಾರಿ ಮುಕ್ತಾಯಗೊಂಡಿತ್ತು.

ಕವಿಕಾ ಬಳಿಯ ಮತ್ತೊಂದು ಸೇತುವೆ ಕಾಮಗಾರಿ ಎರಡು ವರ್ಷದಿಂದ ನಡೆಯುತ್ತಿದೆ. ಈ ಭಾಗದಲ್ಲಿ ಕಾಲುವೆ ನಿರ್ವಹಣೆ ಸರಿಯಾಗಿ ನಡೆಸದೆ ಇರುವುದರಿಂದ ಮಳೆ ಬಂದಾಗ ನೀರು ರಸ್ತೆ ಮೇಲೆ ಹರಿಯುತ್ತದೆ. ಅಲ್ಲದೆ ಮನೆಗಳಿಗೂ ನುಗ್ಗುತ್ತದೆ.

ಪ್ರತಿ ವರ್ಷ ಮಳೆ ಬಂದಾಗಲೂ ಗಾಳಿ ಆಂಜನೇಯಸ್ವಾಮಿ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಬರುತ್ತಿತ್ತು. ಸದ್ಯ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ರಾಜಕಾಲುವೆಯನ್ನು ಎತ್ತರಿಸುವ ಕಾಮಗಾರಿ ನಡೆಯುತ್ತಿದೆ. ಇದರಿಂದ ದೇವಸ್ಥಾನ ಮತ್ತು ಸುತ್ತಲಿನ ಪ್ರದೇಶಗಳಿಗೆ ಕೊಳಚೆ ನೀರು ಹರಿಯುವುದು ತಪ್ಪಿದೆ.

‘ಕವಿಕಾ ಹಿಂಭಾಗ ರಾಜಕಾಲುವೆಗೆ ಯಾವುದೇ ಗೋಡೆ ಇರಲಿಲ್ಲ. ಆಗ ಕಾಲುವೆ ನೀರು ರಸ್ತೆ, ದೇವಸ್ಥಾನಕ್ಕೆ ನುಗ್ಗುತ್ತಿತ್ತು. ಅದನ್ನು ತಪ್ಪಿಸಲೆಂದೇ ಈಗ ಎತ್ತರದ ಗೋಡೆ ಕಟ್ಟಲಾಗಿದೆ. ನಮ್ಮ ಬಡವಾಣೆಗೆ ರಾಜಕಾಲುವೆಯ ನೀರು ನುಗ್ಗುವುದಿಲ್ಲ. ಆದರೆ ಕಾಲುವೆಯಿಂದ ಹೂಳೆತ್ತುವ ಬಿಬಿಎಂಪಿ ಸಿಬ್ಬಂದಿ ಅದನ್ನು ಅಲ್ಲೇ ಪಕ್ಕದಲ್ಲಿ ಹಾಕಿ ಹೋಗುತ್ತಾರೆ. ನಿರ್ವಹಣೆ ಸರಿಯಾಗಿ ಮಾಡುವುದಿಲ್ಲ’ ಎಂದು ಕವಿಕಾ ಬಡಾವಣೆಯ ಕೃಷ್ಣ ಅವರು ತಿಳಿಸಿದರು.

‘ಆರೇಳು ತಿಂಗಳ ಹಿಂದೆ ನಗರದಲ್ಲಿ ಬಿದ್ದ ಜೋರು ಮಳೆಗೆ ಇಲ್ಲಿನ ರಾಜಕಾಲುವೆ ತುಂಬಿ 10–15 ಮನೆಗಳಿಗೆ ನೀರು ಬಂದಿತ್ತು. ಆಗ ಕಾರ್ಪೊರೇಟರ್ ಬಂದು ಪರಿಹಾರ ನೀಡಿದ್ದರು. ಇದು ಪ್ರತಿ ವರ್ಷವೂ ಪುನರಾವರ್ತನೆ ಆಗುತ್ತದೆ. ಅದರ ಬದಲು ನೀರು ನುಗ್ಗದಂತೆ ಕ್ರಮಕೈಗೊಳ್ಳಬೇಕು.

ಕಸ ತೆರವುಗೊಳಿಸದೆ ಬಡಾವಣೆಯಲ್ಲಿ ಸೊಳ್ಳೆಗಳು ವಿಪರೀತ ವಾಗಿವೆ. ಸಾಂಕ್ರಾಮಿಕ ರೋಗಗಳ ಭೀತಿಯಿಂದಲೇ ಇಲ್ಲಿ ವಾಸವಾಗಿದ್ದೇವೆ’ ಎಂದು ಬಾಪೂಜಿ ನಗರದ ನಿವಾಸಿ ಸುನಂದಮ್ಮ ಅವರು ದೂರಿದರು.

‘77 ವರ್ಷದಿಂದ ಇಲ್ಲೇ ನೆಲೆಸಿದ್ದೇವೆ. ಈಗಲೂ ಜೋರಾಗಿ ಮಳೆ ಬಂದರೆ ರಸ್ತೆಯಲ್ಲಿ ನೀರು ನಿಲ್ಲುತ್ತದೆ. ಆಗ ಮೈದಡವಿಕೊಂಡು ಬರುವ ಬಿಬಿಎಂಪಿ ಸಿಬ್ಬಂದಿ ಹೂಳನ್ನು ತೆರವುಗೊಳಿಸುತ್ತಾರೆ.

ಮತ್ತೆ ಅವರು ಬರುವುದು ಮಳೆ ಬಂದಾಗಲೇ. ಈಗಲೂ ಸಾಕಷ್ಟು ಕಸ ಬಂದು ಕಟ್ಟಿಕೊಂಡಿದೆ’ ಎಂದು ಅಜ್ಜೇಗೌಡ ಅವರು ಮಾಹಿತಿ ನೀಡಿದರು. ‘ಕೊಳಚೆ ನೀರು ನುಗ್ಗುವ ಆತಂಕ ಈಗ ಇಲ್ಲ. ಕಾಲುವೆಯಲ್ಲಿ ಸಂಗ್ರಹಗೊಂಡಿದ್ದ ಕಸವನ್ನು ಮೂರು ತಿಂಗಳ ಹಿಂದೆ ತೆರವುಗೊಳಿಸಲಾಗಿದೆ. ಇನ್ನೂ ಅರ್ಧಕ್ಕರ್ಧ ಕಸ ಹಾಗೆಯೇ ಇದೆ’ ಎಂದು ಮೈಸೂರು ಮುಖ್ಯ ರಸ್ತೆಯಲ್ಲಿ ಟೈಲರ್ ಅಂಗಡಿ ಮಾಲೀಕರು ತಿಳಿಸಿದರು.

ಅತಿ ಹಳೆಯ ಕಾಲುವೆ
ಸ್ಯಾಂಕಿ ಕೆರೆಯಿಂದ ಪ್ರಾರಂಭವಾಗುವ ವೃಷಭಾವತಿ ರಾಜಕಾಲುವೆ ಮಲ್ಲೇಶ್ವರ, ಮಾಗಡಿ ರಸ್ತೆ, ಗುಡ್ಡದ ಹಳ್ಳವಾಗಿ ಗಾಳಿ ಆಂಜನೇಯ ಸ್ವಾಮಿ ದೇವಾಸ್ಥಾನದ ಪಕ್ಕದಲ್ಲಿ ಹರಿದು ಕೊನೆಗೆ ಬೈಂದೂರು ಕರೆಗೆ ಸೇರುತ್ತದೆ.

ವೃಷಭಾವತಿ ಮತ್ತು ಪಶ್ಚಿಮವಾಹಿನಿ ನದಿಗಳು ಒಟ್ಟಿಗೆ ಸೇರುವ ಕಡೆ ನೂರಾರು ಶತಮಾನಕ್ಕೂ ಹಿಂದೆ ಜನರು ವಾಸಮಾಡಲು ಪ್ರಾರಂಭಿಸಿದರು. ಇದೇ ನದಿಯ ನೀರು ಬಳಸಿಕೊಂಡು ಬೇಸಾಯ ಮಾಡಲು ಪ್ರಾರಂಭಿಸಿದರು. ಆ ಕಾಲದಲ್ಲಿ ಇಲ್ಲಿ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಸ್ಥಾಪಿಸಲಾಯಿತು.

ನಿಯಮಿತವಾಗಿ ಹೂಳು, ಕಸ ತೆಗೆಯಬೇಕು
‘ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಮುಂದಿನ ರಸ್ತೆ ಎತ್ತರಿಸಿದ್ದರಿಂದ ಸದ್ಯ ನೀರು ನುಗ್ಗುವ ತೊಂದರೆ ಇಲ್ಲ. ಆದರೆ ಬಿಬಿಎಂಪಿ ಸಿಬ್ಬಂದಿ ನಿಯಮಿತವಾಗಿ ಹೂಳು, ಕಸ ತೆರವುಗೊಳಿಸದಿದ್ದರೆ ತಡೆಗೋಡೆಯನ್ನು ಎಷ್ಟೇ ಎತ್ತರಿಸಿದರೂ ಸಮಸ್ಯೆ ತಪ್ಪಿದ್ದಲ್ಲ. ಇಲ್ಲಿನ ಸುತ್ತಮುತ್ತಲಿನ ಹೋಟೆಲ್ನವರು ಕಾಲುವೆಗೆ ಕಸ ತಂದು ಸುರಿಯುತ್ತಾರೆ.

ಕಟ್ಟಡ ತ್ಯಾಜ್ಯಗಳನ್ನು ರಾತ್ರೋರಾತ್ರಿ ತಂದು ಇಲ್ಲಿ ಹಾಕಿ ಹೋಗುತ್ತಾರೆ. ಬಿಬಿಎಂಪಿ ಇದಕ್ಕೆ ಕಡಿವಾಣ ಹಾಕಬೇಕು. ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ಸಾಜಿದ್ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.