ತುಮಕೂರು: ‘ಮುಂದಿನ ವರ್ಷದ ಜನವರಿ 15ರಿಂದ 7 ದಿನ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ ಹೇಳಿದರು.
‘ಅಥ್ಲೆಟಿಕ್ಸ್, ಟೆನಿಸ್, ಕಬಡ್ಡಿ, ಈಜು ಸ್ಪರ್ಧೆ ಸೇರಿದಂತೆ 27 ಕ್ರೀಡೆಗಳು ನಡೆಯಲಿವೆ. ರಾಜ್ಯದ ವಿವಿಧೆಡೆಯಿಂದ 4,600 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಅವರು ಮಾಹಿತಿ ನೀಡಿದರು.