ಸೋಮವಾರ, ಮಾರ್ಚ್ 1, 2021
23 °C

ಈಜಿಫ್ಟ್‌ನ ಗಿಜಾ ಫಿರಮಿಡ್ ಬಳಿ ಸ್ಫೋಟ; 9 ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಜಿಫ್ಟ್‌ನ ಗಿಜಾ ಫಿರಮಿಡ್ ಬಳಿ ಸ್ಫೋಟ; 9 ಬಲಿ

ಕೈರೊ (ಪಿಟಿಐ):  ಪ್ರಾಚೀನ ವಿಶ್ವದ 7 ಅದ್ಭುತಗಳಲ್ಲಿ ಒಂದಾದ ಈಜಿಫ್ಟ್‌ನ ಗಿಜಾದ ಮಹಾ ಪಿರಾಮಿಡ್ ಬಳಿ ಗುರುವಾರ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಪೊಲೀಸರು ಸೇರಿ 9 ಮಂದಿ ಬಲಿಯಾಗಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. 



ಪಿರಮಿಡ್‌ ಸಮೀಪ ಅಡಗಿಕೊಂಡಿದ್ದ ಉಗ್ರನೊಬ್ಬನನ್ನು ಹತ್ಯೆಗೈಯಲು ಪೊಲೀಸರು ಶೋಧ ಕಾರ್ಯಾಚರಣೆಗೆ ಮುಂದಾದಾಗ ಈ ಸ್ಫೋಟ ಸಂಭವಿಸಿದೆ.   ಪೊಲೀಸರು ಗುಂಡಿನ ದಾಳಿ ನಡೆಸಿದಾಗ ಪ್ರತಿಯಾಗಿ ಉಗ್ರರು ಅವರತ್ತ ಎಸೆದ ಬಾಂಬ್‌ ಸ್ಫೊಟಗೊಂಡಿತು ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ  ತಿಳಿಸಿದ್ದಾರೆ.



2011ರ ಈಜಿಫ್ಟ್‌ ಕ್ರಾಂತಿಯ ವರ್ಷಾಚರಣೆ ಬೆನ್ನಲ್ಲೇ ಈ ದಾಳಿ ನಡೆದಿರುವುದರಿಂದ ದೇಶದಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ.



ಬುಧವಾರ ಉತ್ತರ ಸಿನಾಯ್‌ ಬಳಿ ನಡೆದ ಮತ್ತೊಂದು ಉಗ್ರರ ದಾಳಿಯಲ್ಲಿ  ಕನಿಷ್ಠ ಐವರು ಪೊಲೀಸರು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.