ಸೋಮವಾರ, ಮೇ 16, 2022
29 °C

ಈಜು: ಗಗನ್ ದಾಖಲೆಯೊಂದಿಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ: ಕರ್ನಾಟಕದ ಎ.ಪಿ.ಗಗನ್ ಇಲ್ಲಿ ನಡೆಯುತ್ತಿರುವ 34ನೇ ರಾಷ್ಟ್ರೀಯ ಕ್ರೀಡಾಕೂಟದ ಈಜು ವಿಭಾಗದಲ್ಲಿ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರಿಸಿದ್ದಾರೆ.

ಗಗನ್ ಗುರುವಾರ ವೈಯಕ್ತಿಕ ವಿಭಾಗದಲ್ಲಿ ತಮ್ಮ ಮೂರನೇ ಚಿನ್ನದ ಪದಕ ಜಯಿಸಿದರು. 800 ಮೀ. ಫ್ರೀಸ್ಟೈಲ್‌ನಲ್ಲಿ ಅವರು ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಎ.ಪಿ. ಗಗನ್ ಐದು ಚಿನ್ನ, ಒಂದು ಕಂಚಿನ ಪದಕ ಗಳಿಸಿ ಒಟ್ಟು ಆರು ಪದಕಗಳನ್ನು ತಮ್ಮ ದಾಗಿಸಿಕೊಂಡಿ ದ್ದಾರೆ. ಇದರೊಂದಿಗೆ ಗಗನ್ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.  ಮಹಿಳೆಯರ ವಿಭಾಗದ 50 ಮೀ. ಬಟರ್‌ಫ್ಲೈನಲ್ಲಿ ಕರ್ನಾಟಕದ ಪೂಜಾ ಆರ್.ಆಳ್ವಾ ಬಂಗಾರದ ಪದಕ ತಮ್ಮದಾಗಿಸಿಕೊಂಡರು.ಫಲಿತಾಂಶ: ಪುರುಷರ ವಿಭಾಗ: 800 ಮೀ. ಫ್ರೀಸ್ಟೈಲ್: ಎ.ಪಿ.ಗಗನ್ (ಕರ್ನಾಟಕ; 8:27.22)-1, ಮಂದರ್ ದಿವಸೆ (ಮಹಾರಾಷ್ಟ್ರ; 8:38.38)-2, ಮೆರ್ವಿನ್ ಚೆನ್ (ದೆಹಲಿ; 8:44.96)-3100 ಮೀ. ಬ್ಯಾಕ್‌ಸ್ಟ್ರೋಕ್: ವೀರ್‌ಧವಲ್ ಖಾಡೆ (ಮಹಾರಾಷ್ಟ್ರ; 59.89 ಸೆ.)-1, ರೋಹಿತ್ ಆರ್.ಹವಲ್ದಾರ್ (ಕರ್ನಾಟಕ; 59.97ಸೆ.)-2, ಅಶ್ವಿನ್ ಮೆನನ್ (ಕರ್ನಾಟಕ; 1:00.23)-3.ಮಹಿಳೆಯರ ವಿಭಾಗ: 50 ಮೀ. ಬಟರ್‌ಫ್ಲೈ: ಪೂಜಾ ಆರ್ ಆಳ್ವಾ (ಕರ್ನಾಟಕ; 29.87)-1, ರಿಚಾ ಮಿಶ್ರಾ (ದೆಹಲಿ; 29.98)-2, ತಲಾಶಾ ಪ್ರಭು (ಗೋವಾ; 30.14)-3

1500 ಮೀ. ಫ್ರೀಸ್ಟೈಲ್: ರಿಚಾ ಮಿಶ್ರಾ (ದೆಹಲಿ; 18:14.79)-1, ಸುಶಾಕಾ ಪ್ರತಾಪ್ (ಕರ್ನಾಟಕ; 18:43.01)-2, ಅನುಷ್ಕಾ ಮೆಹ್ತಾ (ತಮಿಳುನಾಡು; 19.24.01)-3

ವಾಟರ್ ಪೋಲೊ: ಪುರುಷರು: ಕರ್ನಾಟಕ (01) ವಿರುದ್ಧ ಪಶ್ಚಿಮ ಬಂಗಾಳಕ್ಕೆ (12) ಜಯ. ಮಹಿಳೆಯರು: ಕರ್ನಾಟಕ (05) ವಿರುದ್ಧ ದೆಹಲಿಗೆ (10) ಗೆಲುವು.

ಡೈವಿಂಗ್: ಮಹಿಳೆಯರ ವಿಭಾಗ: 3ಮೀ ಸ್ಪ್ರಿಂಗ್‌ಬೋರ್ಡ್: ಹೃತಿಕಾ ಶ್ರೀರಾಮ್ (ಮಹಾರಾಷ್ಟ್ರ; 205.35 ಪಾಯಿಂಟ್ಸ್)-1. ಸ್ವಾತಿ ವಿದಾಪ್ (ಮಹಾರಾಷ್ಟ್ರ; 156.10 ಪಾಯಿಂಟ್ಸ್)-2, ಕರಿಷ್ಮಾ ಎಂ. ಮೋಹಿತೆ (ಕರ್ನಾಟಕ; 155.85 ಪಾಯಿಂಟ್ಸ್)-3.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.