ಬುಧವಾರ, ಮಾರ್ಚ್ 29, 2023
31 °C

ಈಜು ಚಾಂಪಿಯನ್‌ಷಿಪ್‌ಗೆ ತೆರೆ: ಬಿಎಸಿ ತಂಡಕ್ಕೆ ಸಮಗ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಜು ಚಾಂಪಿಯನ್‌ಷಿಪ್‌ಗೆ ತೆರೆ: ಬಿಎಸಿ ತಂಡಕ್ಕೆ ಸಮಗ್ರ ಪ್ರಶಸ್ತಿ

ಬೆಂಗಳೂರು: ಬಸವನಗುಡಿ ಈಜು ಕೇಂದ್ರ (ಬಿಎಸಿ) ತಂಡದವರು ಮಂಗಳವಾರ ಇಲ್ಲಿ ಕೊನೆಗೊಂಡ ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು.ಜೈನ್ ಹೆರಿಟೇಜ್ ಶಾಲೆಯ ಈಜುಕೊಳದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಬಿಎಸಿ ಒಟ್ಟು 1130 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆಯಿತು. ಕೂಟದ ಅಂತಿಮ ದಿನವಾದ ಮಂಗಳವಾರ ಅರ್ಹತಾ ಮಾಘವಿ ಅವರು 25 ಮೀ. ಫ್ರೀಸ್ಟೈಲ್ ಮತ್ತು 100 ಮೀ. ಬಟರ್‌ಫ್ಲೈ ಸ್ಪರ್ಧೆಗಳಲ್ಲಿ ನೂತನ ಕೂಟ ದಾಖಲೆಗಳೊಂದಿಗೆ ಚಿನ್ನ ಗೆದ್ದರು.ಅಂತಿಮ ದಿನ ಚಿನ್ನ ಗೆದ್ದವರ ವಿವರ: ಬಾಲಕರ ವಿಭಾಗ: ಮೊದಲನೇ ಗುಂಪು: 25 ಮೀ. ಫ್ರೀಸ್ಟೈಲ್: ಚೇತನ್ ಬಿ ಆರಾಧ್ಯ (ಪಿಎಂಎಸ್‌ಸಿ; ಕಾಲ: 11.68 ಸೆ), 50 ಮೀ. ಫ್ರೀಸ್ಟೈಲ್: ಚೇತನ್ ಬಿ ಆರಾಧ್ಯ (ಪಿಎಂಎಸ್‌ಸಿ; 25.56), 400 ಮೀ. ಫ್ರೀಸ್ಟೈಲ್: ಸೌರಭ್ ಸಾಂಗ್ವೇಕರ್ (ಬಿಎಸಿ; 4:19.58 ಸೆ.), 200 ಮೀ. ಬ್ಯಾಕ್‌ಸ್ಟ್ರೋಕ್: ವರುಣ್ ರಾವ್ (ಡಿಎ; 2:24.16), 50 ಮೀ. ಬ್ರೆಸ್ಟ್‌ಸ್ಟ್ರೋಕ್: ಆಕಾಶ್ ರೋಹಿತ್ (ಡಿಎ; 32:23), 100 ಮೀ. ಬಟರ್‌ಫ್ಲೈ: ಸೌರಭ್ ಸಾಂಗ್ವೇಕರ್ (1:00.15), 400 ಮೀ. ವೈಯಕ್ತಿಕ ಮೆಡ್ಲೆ: ಆಕಾಶ್ ರೋಹಿತ್ (ಡಿಎ; 5:01.55).ಎರಡನೇ ಗುಂಪು: 50 ಮೀ. ಫ್ರೀಸ್ಟೈಲ್: ರಕ್ಷಿತ್ ಯು ಶೆಟ್ಟಿ (ಬಿಎಸಿ; 26.52), 400 ಮೀ. ಫ್ರೀಸ್ಟೈಲ್: ಅಖಿಲೇಶ್ ರಾಮ್ (ಡಿಎ; 4:33.45), 200 ಮೀ. ಬ್ಯಾಕ್‌ಸ್ಟ್ರೋಕ್: ಬಿ. ಪ್ರಣಾಮ್ (ಬಿಎಸಿ; 2:17.67), 50 ಮೀ. ಬ್ರೆಸ್ಟ್‌ಸ್ಟ್ರೋಕ್: ರಿತೇಶ್ ಆರ್. ಸೂರ್ಯವಂಶ್ (ಬಿಎಸಿ; 32.35), 100 ಮೀ. ಬಟರ್‌ಫ್ಲೈ: ರಕ್ಷಿತ್ ಯು ಶೆಟ್ಟಿ (ಬಿಎಸಿ; 1:01.78), 400 ಮೀ. ವೈಯಕ್ತಿಕ ಮೆಡ್ಲೆ: ಎಂ. ಅರವಿಂದ್ (ಬಿಎಸಿ; 5:03.03).ಮೂರನೇ ಗುಂಪು: 50 ಮೀ. ಫ್ರೀಸ್ಟೈಲ್: ರಾಜ್‌ಕುಮಾರ್ ಬ್ರಾನ್ಸನ್ (ಎಂಇಜಿ; 29.90), 100 ಮೀ. ಫ್ರೀಸ್ಟೈಲ್: ಮೊಹಮ್ಮದ್ ಯಾಕೂಬ್ (ಪಿಎಂಎಸ್‌ಸಿ; 1:04.96), 100 ಮೀ. ಬ್ರೆಸ್ಟ್‌ಸ್ಟ್ರೋಕ್: ಎಸ್.ಪಿ. ಲಿಖಿತ್ (ಬಿಎಸಿ; 1:19.21).ಬಾಲಕಿಯರ ವಿಭಾಗ: ಮೊದಲನೇ ಗುಂಪು: 25 ಮೀ. ಫ್ರೀಸ್ಟೈಲ್: ಅರ್ಹತಾ ಮಾಘವಿ (ಡಿಎ; 13.47), 50 ಮೀ. ಫ್ರೀಸ್ಟೈಲ್: ಜೆ. ಅಶ್ವಿನಿ (ವೈಎಸ್‌ಸಿ; 36.18), 200 ಮೀ. ಬ್ಯಾಕ್‌ಸ್ಟ್ರೋಕ್: ತಾನ್ಯಾ (ಪಿಎಂಎಸ್‌ಸಿ; 2:46.31), 50 ಮೀ. ಬ್ರೆಸ್ಟ್‌ಸ್ಟ್ರೋಕ್: ನಿಖಿತಾ ಪಟೇಲ್ (ಎಬಿಬಿಎ; 45.63), 100 ಮೀ. ಬಟರ್‌ಫ್ಲೈ: ಅರ್ಹತಾ ಮಾಘವಿ (ಡಿಎ; 1:06.90).ಎರಡನೇ ಗುಂಪು: 50 ಮೀ. ಫ್ರೀಸ್ಟೈಲ್: ತುಳಸಿ ಆರ್ ಎಚ್ (ಬಿಎಸಿ; 28.93), 400 ಮೀ. ಫ್ರೀಸ್ಟೈಲ್: ತುಳಸಿ ಆರ್ ಎಚ್ (ಬಿಎಸಿ; 4:49.68), 200 ಮೀ. ಬ್ಯಾಕ್‌ಸ್ಟ್ರೋಕ್: ಎಸ್.ಕೆ. ರಾಜು (ಬಿಎಸಿ; 2:47.23), 50 ಮೀ. ಬ್ರೆಸ್ಟ್‌ಸ್ಟ್ರೋಕ್: ದಿವ್ಯಾ ಗುರುಸ್ವಾಮಿ (ವೈಎಸ್‌ಸಿ; 37.90), 100 ಮೀ. ಬಟರ್‌ಫ್ಲೈ: ಎಸ್.ಕೆ. ರಾಜು (ಬಿಎಸಿ; 1:12.78), 400 ಮೀ. ವೈಯಕ್ತಿಕ ಮೆಡ್ಲೆ: ದಿವ್ಯಾ ಗುರುಸ್ವಾಮಿ (ವೈಎಸ್‌ಸಿ; 5:45.17).

ನಾಲ್ಕನೇ ಗುಂಪು: 50 ಮೀ. ಫ್ರೀಸ್ಟೈಲ್: ಟಿ. ಪ್ರೀತಿ (ಬಿಎಸಿ; 33.59), 100 ಮೀ. ಫ್ರೀಸ್ಟೈಲ್: ಅಕ್ಷತಾ ದೇಸಾಯಿ (ಎಸ್‌ಸಿಬಿ; 1:15.39).

ಸಮಗ್ರ ಪ್ರಶಸ್ತಿ: ಬಸವನಗುಡಿ ಈಜು ಕೇಂದ್ರ (1130 ಪಾಯಿಂಟ್).

ವೈಯಕ್ತಿಕ ಚಾಂಪಿಯನ್: ಬಾಲಕರ ವಿಭಾಗ: ಮೊದಲ ಗುಂಪು: ಆಕಾಶ್ ರೋಹಿತ್ (ಡಿಎ; 89 ಪಾಯಿಂಟ್), ಎರಡನೇ ಗುಂಪು: ಬಿ. ಪ್ರಣಾಮ್ (ಬಿಎಸಿ; 130), ಮೂರನೇ ಗುಂಪು: ಮೊಹಮ್ಮದ್ ಯಾಕೂಬ್ (ಪಿಎಂಎಸ್‌ಸಿ; 30), ನಾಲ್ಕನೇ ಗುಂಪು: ರೋಶನ್ ಉದಯ್ (ಸ್ವಿಮ್ಮರ್ಸ್ ಕ್ಲಬ್, ಬೆಳಗಾವಿ 61); ಬಾಲಕಿಯರ ವಿಭಾಗ: ಮೊದಲನೇ ಗುಂಪು: ಅರ್ಹತಾ ಮಾಘವಿ (ಡಿಎ; 192), ಎರಡನೇ ಗುಂಪು: ತುಳಸಿ ಆರ್. ಎಚ್ (ಬಿಎಸಿ; 42), ಮೂರನೇ ಗುಂಪು: ದಾಮಿನಿ ಕೆ ಗೌಡ (ಬಿಎಸಿ; 83), ನಾಲ್ಕನೇ ಗುಂಪು: ಅಕ್ಷತಾ ದೇಸಾಯಿ (ಎಸ್‌ಸಿಬಿ; 26).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.