ಸೋಮವಾರ, ಮೇ 10, 2021
26 °C

ಈಜು: ಬಿಎಲ್‌ಡಿಇಎ ಕಾಲೇಜಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈಜು: ಬಿಎಲ್‌ಡಿಇಎ ಕಾಲೇಜಿಗೆ ಪ್ರಶಸ್ತಿ

ಜಮಖಂಡಿ: ಗದುಗಿನ ಮನೋರಮಾ ಬಿಸಿಎ ಮತ್ತು ಬಿಬಿಎ ಕಾಲೇಜು ಅಶ್ರಯದಲ್ಲಿ ಇದೇ 9 ರಿಂದ 11 ವರೆಗೆ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯ ಏಕವಲಯ ಈಜು ಸ್ಪರ್ಧೆಯಲ್ಲಿ ಸ್ಥಳೀಯ ಬಿಎಲ್‌ಡಿಇಎ ಕಾಲೇಜು ತಂಡ ಸಮಗ್ರ ಚಾಂಪಿಯನ್‌ಷಿಪ್ ಅನ್ನು ತನ್ನ ಮುಡಿಗೇರಿಸಿಕೊಂಡಿದೆ.ಈಜುತಂಡ ಒಟ್ಟು 144 ಅಂಕ ಗಳಿಸಿ ಪ್ರಸಕ್ತ ಸಾಲಿನ ಕವಿವಿ ಚಾಂಪಿಯನ್‌ಷಿಪ್ ಬಾಚಿಕೊಂಡಿದೆ. ಕಾಲೇಜಿನ ಈಜು ತಂಡ ಪುರುಷರ ವಿಭಾಗದ ಪ್ರಶಸ್ತಿಗೆ ಭಾಜನವಾಗಿದೆ. ಶ್ರೀಕಾಂತ ಧಾರಣೆ ಪುರುಷರ ವಿಭಾಗದ ವೈಯಕ್ತಿಕ ಚಾಂಪಿಯನ್‌ಷಿಪ್ ತಮ್ಮದಾಗಿಸಿಕೊಂಡಿದ್ದಾರೆ.ಪುರುಷರ ವಿಭಾಗದಲ್ಲಿ ವಿನೋದ ಮುದಿಬಸನಗೌಡರ, ಮಲ್ಲಪ್ಪ ಮರೇಗುದ್ದಿ, ಮಹೇಶ ಹಿರೇಮಠ, ಶ್ರೀಶೈಲ ಔರಸಂಗ ಹಾಗೂ ಮಹಿಳೆಯರ ವಿಭಾಗದಲ್ಲಿ ಬೌರವ್ವ ಮಗದುಮ, ತಾರಾಬಾಯಿ ಉಪ್ಪಿನ ಉತ್ತಮ ಸಾಧನೆಗೈದು ಈಜುತಂಡ ಸಮಗ್ರ ಪ್ರಶಸ್ತಿ ಗಳಿಸುವಲ್ಲಿ ತಮ್ಮ ಕಾಣಿಕೆ ನೀಡಿದ್ದಾರೆ.ಪ್ರಾಚಾರ್ಯ ಡಾ.ಎಸ್.ಎಸ್.ಸುವರ್ಣಖಂಡಿ, ಕ್ರೀಡಾ ವಿಭಾಗದ ಉಪಾಧ್ಯಕ್ಷ ಡಾ.ಎಸ್.ಜಿ.ಹಿರೇಮಠ, ಈಜು ವಿಭಾಗದ ಕಾರ್ಯಾಧ್ಯಕ್ಷ ಪ್ರೊ.ಕೆ.ಚನ್ನಬಸಪ್ಪ, ಆಡಳಿತಾಧಿಕಾರಿ ಪ್ರೊ.ಎಸ್.ಎಚ್.ಲಗಳಿ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಅರುಣಕುಮಾರ ಶಹಾ ಚಾಂಪಿಯನ್ ತಂಡದ ಸದಸ್ಯರನ್ನು ಹಾಗೂ ಮುಖ್ಯ ತರಬೇತುದಾರ ರಾಜು ಪೂಜಾರಿ, ತರಬೇತುದಾರ ಕೆ.ಎಂ.ಶಿರಹಟ್ಟಿ ಅವರನ್ನು ಅಭಿನಂದಿಸಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳುಬಾಗಲಕೋಟೆ: ಮಹಾರಾಷ್ಟ್ರದ ಸೋಲ್ಲಾಪುರದಲ್ಲಿ ಇತ್ತೀಚಿಗೆ ನಡೆದ ರಾಜ್ಯ ಫುಟಬಾಲ್ ಟೆನ್ನಿಸ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಫುಟಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕದ ಪರ ಬಾಗಲಕೋಟೆ ನಗರದ ಬಸವೇಶ್ವರ ಅಂತರರಾಷ್ಟ್ರೀಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ.

  

ಈ ಕ್ರೀಡಾಕೂಟದಲ್ಲಿ ಬಸವೇಶ್ವರ ಪಬ್ಲಿಕ್ ಸ್ಕೂಲಿನ ವಿದ್ಯಾರ್ಥಿಗಳಾದ ಕಿರಣ್ ಬಾವಿ, ಉಷಾ. ಟಿ.ಪ್ರಿಯಾಂಕ್, ಎನ್.ಪ್ರೀತಿ,  ರೀನಾಡಿ,  ಪಿ. ಲಕ್ಷ್ಮೀ, ಸವಿತಾ, ನಾಗರಾಜ ಟಿ,  ಸಿ. ಪೃಥ್ವಿ,  ಆರ್. ಅಜೀತ್,  ಎಚ್.  ಗಗನ್,  ಡಿ. ಭರತ್ ಅವರು ಭಾಗವಹಿಸಿ ಉತ್ತಮ ಸಾಧನೆಯನ್ನು ಮಾಡುವ ಮೂಲಕ ರಾಜ್ಯಕ್ಕೆ   ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.