ಈಜು: ರೆಹಾನ್ ಪೂಂಚಾ ನಾಲ್ಕು ದಾಖಲೆ, ಬಿಎಸಿ ತಂಡದವರ ಪಾರಮ್ಯ...

ಭಾನುವಾರ, ಮೇ 19, 2019
34 °C

ಈಜು: ರೆಹಾನ್ ಪೂಂಚಾ ನಾಲ್ಕು ದಾಖಲೆ, ಬಿಎಸಿ ತಂಡದವರ ಪಾರಮ್ಯ...

Published:
Updated:

ಬೆಂಗಳೂರು: ಬಸವನಗುಡಿ ಈಜು ಕೇಂದ್ರದ (ಬಿಎಸಿ) ಆ್ಯರನ್ ಡಿಸೋಜಾ ಸೋಮವಾರ ಇಲ್ಲಿ ಆರಂಭವಾದ ಕರ್ನಾಟಕ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನ 200 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.



ಬಸವನಗುಡಿ ಈಜು ಕೇಂದ್ರದಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಆ್ಯರನ್ 1:52.87 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಈ ಮೂಲಕ 2009ರಲ್ಲಿ ತಾವೇ ನಿರ್ಮಿಸಿದ್ದ ರಾಷ್ಟ್ರೀಯದ ದಾಖಲೆ (1:53.36) ಅಳಿಸಿ ಹೋಯಿತು. ಪುರುಷರ 4x200 ಮೀ.ಫ್ರೀಸ್ಟೈಲ್ ರಿಲೇ (ಬಿಎಸಿ `ಎ~; 7:59.98) ಹಾಗೂ 4x100 ಮೀ. ಫ್ರೀಸ್ಟೈಲ್ ರಿಲೇಯಲ್ಲೂ (ಬಿಎಸಿ `ಎ~; 3:37.35 ಸೆ.) ರಾಷ್ಟ್ರೀಯ ದಾಖಲೆ ನಿರ್ಮಾಣವಾಯಿತು.



ಅಷ್ಟು ಮಾತ್ರವಲ್ಲದೇ, ಈ ಚಾಂಪಿಯನ್‌ಷಿಪ್‌ನ ಮೊದಲ ದಿನ ಏಳು ನೂತನ ಕೂಟ ದಾಖಲೆಗಳು ನಿರ್ಮಾಣವಾದವು. ಬಿಎಸಿಯ ರೆಹಾನ್ ಪೂಂಚಾ 100 ಮೀ.ಬ್ರೆಸ್ಟ್‌ಸ್ಟ್ರೋಕ್ (59.80), 400 ಮೀ. ವೈಯಕ್ತಿಕ ಮೆಡ್ಲೆ (4:39.68), 200 ಮೀ.ಫ್ರೀಸ್ಟೈಲ್ ಹಾಗೂ 4್ಡ100 ಮೀ. ಫ್ರೀಸ್ಟೈಲ್‌ರಿಲೇನಲ್ಲಿ ಈ ಸಾಧನೆ ಮಾಡಿದರು.



ಅಕ್ಟೋಬರ್ 10ರಂದು ಜಕಾರ್ತದಲ್ಲಿ ಆರಂಭವಾಗಲಿರುವ ಏಷ್ಯನ್ ಏಜ್ ಗ್ರೂಪ್ ಈಜು ಚಾಂಪಿಯನ್‌ಷಿಪ್ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಮಹತ್ವ ಪಡೆದುಕೊಂಡಿದೆ. ಆ ಚಾಂಪಿಯನ್‌ಷಿಪ್ ಒಲಿಂಪಿಕ್ಸ್‌ಗೆ ಅರ್ಹತಾ ಗಿಟ್ಟಿಸಲು ಪ್ರಮುಖ ವೇದಿಕೆಯಾಗಿದೆ.



ಫಲಿತಾಂಶ ಇಂತಿವೆ: ಪುರುಷರ ವಿಭಾಗ: 800 ಮೀ. ಫ್ರೀಸ್ಟೈಲ್: ಎ.ಪಿ.ಗಗನ್ (ಬಿಎಸಿ; 8:26.03)-1, ಸೌರಭ್ ಸಾಂಗ್ವೇಕರ್ (ಬಿಎಸಿ; 8:29.03)-2. ಎ.ಅಜಯ್ (ಬಿಎಸಿ; 9:07.00)-3. 100 ಮೀ. ಬ್ರೆಸ್ಟ್ ಸ್ಟ್ರೋಕ್: ಆದಿತ್ಯ ರೋಶನ್ (ಡಾಲ್ಫಿನ್; 1:10.10)-1, ಎಸ್.ಪಿ.ಲಿಖಿತ್ (ಬಿಎಸಿ; 1:10.55)-2, ಆಕಾಶ್ ರೋಹಿತ್ (ಡಾಲ್ಫಿನ್; 1:12.84)-3. 100 ಮೀ.



ಬ್ಯಾಕ್ ಸ್ಟ್ರೋಕ್: ರೆಹಾನ್ ಪೂಂಚಾ (ಬಿಎಸಿ; 0:59.80)-1, ರೋಹಿತ್ ಆರ್.ಹವಾಲ್ದಾರ್ (ಡಾಲ್ಫಿನ್; 1:00.03)-2, ಅಶ್ವಿನ್ ಮೆನನ್ (ಡಾಲ್ಫಿನ್; 1:00.96)-3. 4್ಡ200 ಮೀ.ಫ್ರೀಸ್ಟೈಲ್ ರಿಲೇ: ಬಿಎಸಿ `ಎ~ ತಂಡ (ಎ.ಪಿ.ಗಗನ್, ಸೌರವ್ ಸಾಂಗ್ವೇಕರ್, ರೆಹಾನ್ ಪೂಂಚಾ, ಆ್ಯರನ್ ಡಿಸೋಜಾ; 7:59.98)-1, ಡಾಲ್ಫಿನ್ ಈಜು ತಂಡ (ಅಶ್ವಿನ್ ಮೆನನ್, ಆದಿತ್ಯ ರೋಶನ್, ಆಕಾಶ್ ರೋಹಿತ್, ರೋಹಿತ್ ಆರ್.ಹವಾಲ್ದಾರ್; 8:24.03)-2, ಬಿಎಸಿ `ಬಿ~ (ರಕ್ಷಿತ್ ಯು. ಶೆಟ್ಟಿ, ಕೆ.ಎಸ್.ಪ್ರಜ್ವಲ್, ಮಿತೇಶ್ ಕುಂಟೆ,



ಎ.ಅಜಯ್; 8:24.47)-3. 400 ಮೀ. ವೈಯಕ್ತಿಕ ಮೆಡ್ಲೆ: ರೆಹಾನ್ ಪೂಂಚಾ (ಬಿಎಸಿ; 4:39.68)-1, ಎ.ಪಿ.ಗಗನ್ (ಬಿಎಸಿ; 4:41.22)-2, ಎಂ.ಅರವಿಂದ್ (ಬಿಎಸಿ; 5:01.11)-3. 200 ಮೀ. ಫ್ರೀಸ್ಟೈಲ್: ಆ್ಯರನ್ ಡಿಸೋಜಾ (ಬಿಎಸಿ; 1:52.87)-1, ಸೌರಭ್ ಸಾಂಗ್ವೇಕರ್ (ಬಿಎಸಿ; 1:55.69)-2, ರೋಹಿತ್ ಆರ್.ಹವಾಲ್ದಾರ್ (ಡಾಲ್ಫಿನ್; 1:56.41)-3. 4x100 ಮೀ. ಫ್ರೀಸ್ಟೈಲ್



ರಿಲೇ: ಬಿಎಸಿ `ಎ~ (3:37.35)-1, ಡಾಲ್ಫಿನ್ಸ್ ತಂಡ (3:44.79)-2, ಬಿಎಸಿ `ಬಿ~ (3:50.90)-3.

ಮಹಿಳೆಯರ ವಿಭಾಗ: 800 ಮೀ. ಫ್ರೀಸ್ಟೈಲ್: ಸುರಭಿ ತಿಪ್ರೆ (ಬಿಎಸಿ; 9:26.30)-1, ಸುಷಾಕಾ ಪ್ರತಾಪ್ (ಬಿಎಸಿ: 9:58.74)-2, ಆಶ್ರಿತಾ ಎನ್.ಭಾರದ್ವಾಜ್ (ಪಿಎಂಎಸ್‌ಸಿ; 10:05.54)-3. 100 ಮೀ.ಬ್ರೆಸ್ಟ್‌ಸ್ಟ್ರೋಕ್: ಭೂಮಿ ಆರ್.ಮೊತ್ವಾನಿ (ಬಿಎಸಿ; 1:22.89)-1, ಡಿ.ಎ.ಚಾರು ಹಂಸಿನಿ (ಬಿಎಸಿ; 1:25.64)-2, ಮಿನಾಲ್ ಬಿ. ಶಿವಪ್ರಕಾಶ್ (ಪಿಎಂಎಸ್‌ಸಿ; 1:31.96)-3. 100 ಮೀ.ಬ್ಯಾಕ್ ಸ್ಟ್ರೋಕ್: ಕ್ಷಿಪ್ರ ಮಹಾಜನ್ (ಬಿಎಸಿ; 1:12.45)-1, ಮೇಘನಾ ಶ್ರೀವತ್ಸ (ಬಿಎಸಿ; 1:13.10)-2, ಫರಿಹಾ ಜಮಾನ್ (ಬಿಎಸಿ; 1.13.35)-3. 4x100 ಮೀ.



ಫ್ರೀಸ್ಟೈಲ್ ರಿಲೇ: ಬಿಎಸಿ `ಎ~ (ಪೂಜಾ ಆರ್.ಆಳ್ವಾ, ಕ್ಷಿಪ್ರ ಮಹಾಜನ್,ಟಿ.ಸ್ನೇಹಾ, ಸುರಭಿ ತಿಪ್ರೆ; 4:32.91)-1, ಬಿಎಸಿ `ಬಿ~ (ಡಿ.ಎ.ಶರಣ್ಯ, ದಾಮಿನಿ ಕೆ.ಗೌಡ, ಸುಷಾಕ ಪ್ರತಾಪ್, ವಿ.ಮಾಳವಿಕಾ)-2. 400 ಮೀ. ವೈಯಕ್ತಿಕ ಮೆಡ್ಲೆ: ಪೂಜಾ ಆರ್.ಆಳ್ವಾ (ಬಿಎಸಿ; 5:26.71)-1, ಭೂಮಿ ಆರ್.ಮೊತ್ವಾನಿ (ಬಿಎಸಿ; 5:33.39)-2, ಸುಷಾಕ ಪ್ರತಾಪ್ (ಬಿಎಸಿ; 5:43.51)-3. 200 ಮೀ.



ಫ್ರೀಸ್ಟೈಲ್: ಸುರಭಿ ತಿಪ್ರೆ (ಬಿಎಸಿ; 2:10.98)-1, ಕ್ಷಿಪ್ರ ಮಹಾಜನ್ (2:14.83)-2, ಟಿ.ಸ್ನೇಹಾ (ಬಿಎಸಿ; 2:15.64)-3. 4x200 ಮೀ. ಫ್ರೀಸ್ಟೈಲ್ ರಿಲೇ: ಬಿಎಸಿ `ಎ~ (ಕ್ಷಿಪ್ರ ಮಹಾಜನ್, ಪೂಜಾ ಆರ್.ಆಳ್ವಾ, ಸುಷಾಕ ಪ್ರತಾಪ್, ಸುರಭಿ ತಿಪ್ರೆ; 9:42.99)-1, ಬಿಎಸಿ `ಬಿ~ (ಭೂಮಿ ಆರ್.ಮೊತ್ವಾನಿ, ತುಳಸಿ ಆರ್.ಹರಿತ್ಸಾ, ವಿ.ಮಾಳವಿಕಾ, ಮೇಘನಾ ಶ್ರೀವತ್ಸ).



ಡೈವಿಂಗ್(ಪುರುಷರ ವಿಭಾಗ): ಹೈಬೋರ್ಡ್ ಡೈವಿಂಗ್: ಕೆ.ಕುಮಾರ್ (ಡಿಎಸಿ; 222.85 ಪಾಯಿಂಟ್ಸ್)-1, ಅಂಕಿತ್ ದತ್ತಾ (ಎಂಇಜಿ; 51.60 ಪಾಯಿಂಟ್ಸ್)-2. 3 ಮೀ.ಸ್ಪ್ರಿಂಗ್ ಬೋರ್ಡ್ ಡೈವಿಂಗ್: ಅಂಕಿತ್ ದತ್ತಾ (ಎಂಇಜಿ; 209.55 ಪಾಯಿಂಟ್ಸ್)-1, ಎಂ.ರೋಬಿ ಸಿಂಗ್ (ಎಂಇಜಿ; 194.10 ಪಾಯಿಂಟ್ಸ್)-2.

ಮಹಿಳೆಯರ ವಿಭಾಗ: 3 ಮೀ.ಸ್ಪ್ರಿಂಗ್ ಬೋರ್ಡ್ ಡೈವಿಂಗ್: ಕರಿಷ್ಮಾ ಎಂ.ಮೋಹಿತೆ (ವೈಸಿಎಸ್‌ಸಿ; 162.30 ಪಾಯಿಂಟ್ಸ್)-1, ಜೆ.ಆಷಾ (ಡಿಎಸಿ;  158.15)-2, ಶಾಲಿನಿ ತುಳಸಿ (ಡಿಎಸಿ; 130.80)-3.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry