ಬುಧವಾರ, ಮೇ 25, 2022
29 °C

ಈಶಾನ್ಯ ರಾಜ್ಯಗಳಲ್ಲಿ ಕ್ಯಾನ್ಸರ್ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಗರ್ತಲ/ ಐಜ್ವಾಲ್ (ಐಎಎನ್‌ಎಸ್): ದೇಶದ ಈಶಾನ್ಯ ರಾಜ್ಯಗಳಲ್ಲಿ ಕ್ಯಾನ್ಸರ್ ರೋಗದ ಪ್ರಮಾಣ ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.ಮಿಜೊರಾಂ ಕ್ಯಾನ್ಸರ್ ಪೀಡಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ ಪ್ರತಿ ವರ್ಷ ಒಂದು ಲಕ್ಷ ರೋಗಿಗಳಲ್ಲಿ 200 ಮಂದಿ ಕ್ಯಾನ್ಸರ್ ಪೀಡಿತರಿರುತ್ತಾರೆ. ಅಲ್ಲದೆ ಇತರ ಈಶಾನ್ಯ ರಾಜ್ಯಗಳಲ್ಲಿ ಒಂದು ಲಕ್ಷ ರೋಗಿಗಳಲ್ಲಿ 75- 125 ಮಂದಿ ಕ್ಯಾನ್ಸರ್ ಪೀಡಿತರಿದ್ದು, ಇದು ರಾಷ್ಟ್ರೀಯ ಸರಾಸರಿ ಕ್ಯಾನ್ಸರ್ ರೋಗಿಗಳ ಸಂಖ್ಯೆಗಿಂತಲೂ ಅಧಿಕವಾಗಿದೆ.ಪ್ರತಿ ವರ್ಷ 90 ಲಕ್ಷ ಮಂದಿ ದೇಶದಲ್ಲಿ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಈಶಾನ್ಯ ರಾಜ್ಯಗಳಲ್ಲಿ 10 ವರ್ಷಗಳ ಹಿಂದಿನ ಪ್ರಮಾಣಕ್ಕೆ ಹೋಲಿಸಿದರೆ, ಪ್ರಸ್ತುತ ಶೇ 20- 30ರಷ್ಟು ರೋಗಪೀಡಿತರ ಸಂಖ್ಯೆ ಹೆಚ್ಚಿದೆ. ಇಲ್ಲಿನ ಜನರ ಬಹುಮುಖಿ ಜೀವನ ಶೈಲಿ ಮತ್ತು ಪರಿಸರವೇ ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.`ತಂಬಾಕು ಸೇವನೆ ಹಾಗೂ ಅಸಮರ್ಪಕ ಆಹಾರ ಕ್ರಮದಿಂದ ಈ ರಾಜ್ಯಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಿದೆ~ ಎಂದು ಪ್ರಾದೇಶಿಕ ಕ್ಯಾನ್ಸರ್ ಕೇಂದ್ರದ ಮುಖ್ಯಾಧಿಕಾರಿ ಗೌತಮ್ ಮಜೂದ್ ತಿಳಿಸಿದ್ದಾರೆ.ಇಲ್ಲಿ ಶೇ 27ರಷ್ಟು ಆದಿವಾಸಿಗಳು ನೆಲೆಸಿದ್ದು, ಇವರು ವಿವಿಧ ರೀತಿಯ ತಂಬಾಕು ಉತ್ಪನ್ನಗಳನ್ನು ಬಳಸುತ್ತಾರೆ. ಮಿಜೊರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರ ರಾಜ್ಯಗಳು ದೇಶದಲ್ಲೇ ಅತಿ ಹೆಚ್ಚು ತಂಬಾಕು ಉತ್ಪನ್ನಗಳನ್ನು ಬಳಸುತ್ತವೆ ಎಂದು ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ತಿಳಿಸಿದೆ.ದೇಶದ ವಿವಿಧ ಭಾಗಗಳಿಗೆ ಹೋಲಿಸಿದರೆ ಅನ್ನನಾಳ, ಶ್ವಾಸಕೋಶ, ಸ್ತನ, ಗಂಟಲು, ಜಠರ ಕ್ಯಾನ್ಸರ್ ಪ್ರಕರಣಗಳು ಈ ರಾಜ್ಯಗಳಲ್ಲಿ ಹೆಚ್ಚಿವೆ ಎಂದು ಮಜೂದ್ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.