ಬುಧವಾರ, ಏಪ್ರಿಲ್ 14, 2021
31 °C

ಈಸಿ ಬಿಲ್ನಿಂದ ಗ್ರಾಹಕರಿಗೆ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಲ್ ಪಾವತಿ ಉದ್ಯಮದ ಅಗ್ರಗಣ್ಯ ಮತ್ತು ಹೀರೊ ಸಮೂಹದ  ‘ಈಸಿ ಬಿಲ್’ ಸಂಸ್ಥೆ ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಯನ್ನು ಮುಂದಿಟ್ಟಿದೆ.ಸರಿಯಾದ ಸಮಯದಲ್ಲಿ ಬಿಲ್ ಪಾವತಿ ಮಾಡಿದ ಗ್ರಾಹಕರು ಮೊಬೈಲ್ ಫೋನ್‌ಗಳನ್ನು ಬಹುಮಾನವಾಗಿ ಗೆಲ್ಲುವ ಅವಕಾಶವನ್ನು ಸಂಸ್ಥೆ ಕಲ್ಪಿಸಿದೆ.



‘ನಾವು ವಿನ್‌ಕಾಮ್ ಮೊಬೈಲ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ನಮ್ಮ ಮಳಿಗೆಗಳಲ್ಲಿ ಸರಿಯಾದ ಸಮಯಕ್ಕೆ ಬಿಲ್ ಪಾವತಿ ಮಾಡಿದ ಗ್ರಾಹಕರಿಗೆ ಮೊಬೈಲ್ ಫೋನ್‌ಗಳನ್ನು ಬಹುಮಾನವಾಗಿ ಗೆಲ್ಲುವ ಅವಕಾಶವನ್ನು ಒದಗಿಸಿದ್ದೇವೆ’ ಎಂದು ಈಸಿಬಿಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರಾಹುಲ್ ಪಿ. ಮುಂಜಲ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.