ಸೋಮವಾರ, ಮಾರ್ಚ್ 8, 2021
25 °C

ಈ ಗೌರವ ಅನಿರೀಕ್ಷಿತ: ಲಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಗೌರವ ಅನಿರೀಕ್ಷಿತ: ಲಿಮಾ

ರಿಯೊ ಡಿ ಜನೈರೊ (ಎಪಿ): ವಿಶ್ವದ ‘ಮಹಾ ಕ್ರೀಡಾ ಮೇಳ’ ಒಲಿಂಪಿಕ್‌ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಗೌರವ ದೊರೆಯಬಹುದು ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ ಎಂದು ಬ್ರೆಜಿಲ್‌ನ ಮ್ಯಾರಥಾನ್‌ ಓಟಗಾರ  ವಾಂಡೆರ್‌ಲೆಯಿ ಡಿ ಲಿಮಾ ಹೇಳಿದ್ದಾರೆ.ಫುಟ್‌ಬಾಲ್‌ ದಂತಕತೆ ಪೆಲೆ ಅವರು ಜ್ಯೋತಿ ಬೆಳಗಿಸುವರು ಎಂದು ಭಾವಿಸಲಾಗಿತ್ತು. ಆದರೆ ಅನಾರೋಗ್ಯದ ಕಾರಣ ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ. ಇದರಿಂದ ಸಂಘಟಕರು ಕೊನೆಯ ಕ್ಷಣದಲ್ಲಿ ತಮ್ಮ ಯೋಜನೆ ಬದಲಿಸಿದ್ದರು.  ಉದ್ಘಾಟನಾ ಸಮಾರಂಭದ ಆರಂಭಕ್ಕೆ ಕೇವಲ ಒಂದು ಗಂಟೆ ಇರುವಾಗ ಲಿಮಾ ಅವರಿಗೆ ಸಂಘಟಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಲಿಮಾ ಅಥೆನ್ಸ್‌ ಒಲಿಂಪಿಕ್‌ ಕೂಟದ ಮ್ಯಾರಥಾನ್‌ನಲ್ಲಿ ಕಂಚು ಜಯಿಸಿದ್ದರು. ಈ ಸ್ಪರ್ಧೆಯಲ್ಲಿ ಲಿಮಾ ಚಿನ್ನ ಗೆಲ್ಲುವ ಸಾಧ್ಯತೆಯಿತ್ತು. ಆದರೆ ಪ್ರೇಕ್ಷಕನೊಬ್ಬ ಅವರಿಗೆ ಅಡ್ಡಿಪಡಿಸಿದ್ದರಿಂದ ಮೂರನೆಯವರಾಗಿ ಸ್ಪರ್ಧೆ ಕೊನೆಗೊಳಿಸಿದ್ದರು.‘ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಪೆಲೆ ಬುಧವಾರ ನಮಗೆ ತಿಳಿಸಿದ್ದರು. ಇತ್ತೀಚೆಗಷ್ಟೇ ಶಸ್ತ್ರಕ್ರಿಯೆಗೆ ಒಳಗಾಗಿದ್ದರಿಂದ ವೈದ್ಯರ ಅನುಮತಿ ದೊರೆಯಬೇಕು ಎಂದಿದ್ದರು’ ಎಂದು ರಿಯೊ ಕೂಟದ ವಕ್ತಾರ ಮಾರಿಯೊ ಅಂಡ್ರಾಡ ಹೇಳಿದ್ದಾರೆ.‘ಪೆಲೆ ಅವರ ಆರೋಗ್ಯ ಸುಧಾರಿಸಲು ಕೊನೆಯ ದಿನದವರೆಗೂ ಕಾಯಲು ನಿರ್ಧರಿಸಿದ್ದೆವು. ಆದರೆ ಸಮಾರಂಭದಲ್ಲಿ ಪಾಲ್ಗೊಳ್ಳದಂತೆ ವೈದ್ಯರು ಅವರಿಗೆ ಸೂಚಿಸಿದರು. ಇದರಿಂದ ಲಿಮಾ ಅವರನ್ನು ಆಯ್ಕೆ ಮಾಡಿದೆವು’ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.