ಶುಕ್ರವಾರ, ಮೇ 14, 2021
21 °C

ಈ ಪರಿಯ ಬಸ್ ಪಯಣ...

-ಸುಮಲತಾ ಎನ್. Updated:

ಅಕ್ಷರ ಗಾತ್ರ : | |

ಬೆಳಿಗ್ಗೆ 8 ಗಂಟೆ. ಪ್ರಯಾಣಿಕರಿಂದ ಭರ್ತಿಯಾಗಿ ಬಾಗಿಲಿನ ಬದಿಗೆ ಒಂದಿಷ್ಟು ಬಾಗಿದ್ದ ಆ ಬಸ್ಸು, ನಿಲ್ದಾಣಕ್ಕೆ ಬರುತ್ತಿದ್ದಂತೆ ಶಾಲಾ ಮಕ್ಕಳು ಧಡಧಡನೆ ಬಸ್ ಹತ್ತಲಾರಂಭಿಸಿದರು. ಕೈಯಲ್ಲಿ ಪುಸ್ತಕ ಹಿಡಿದಿದ್ದರಿಂದ ಹತ್ತುವ ಭರದಲ್ಲಿ ಬಿದ್ದ ಹುಡುಗನನ್ನು ಎತ್ತುತ್ತಲೇ ಇನ್ನೊಬ್ಬ ವಿದ್ಯಾರ್ಥಿ ಬಸ್ ಏರಿದ.ಮೊದಲೇ ತುಂಬಿಹೋಗಿದ್ದ ಬಸ್ಸಿನ ನೂಕು ನುಗ್ಗಲಿನ ನಡುವೆಯೇ ಮಣಭಾರದ ಬ್ಯಾಗ್ ಹೊತ್ತು ನಿಂತಿದ್ದ ಶಾಲಾ ಮಕ್ಕಳು ಕಂಡಕ್ಟರ್‌ಗೆ `ಪಾಸ್' ಅಂದರು. ಅವರ ಬ್ಯಾಗ್ ನೋಡಿ `ಆ ಕಡೆ ನಿಲ್ಲಿ' ಎಂದು ರೇಗಿದರು ಕಂಡಕ್ಟರ್. ಮುಖ ಸಪ್ಪೆ ಮಾಡಿಕೊಂಡು ನಿಂತಲ್ಲೇ ಸರಿದ ಮಕ್ಕಳ ಮುಖದಲ್ಲಿ ಕಾಣುತ್ತಿದ್ದುದು ಸಮಯಕ್ಕೆ ಸರಿಯಾಗಿ ಶಾಲೆ ಮುಟ್ಟುವ ಧಾವಂತವೊಂದೇ. ಶಾಲೆ ಶುರುವಾದ ದಿನದಿಂದಲೂ ಪ್ರತಿನಿತ್ಯ ಕಾಣುವ ನೋಟವಿದು.ಮನೆ ಹತ್ತಿರವೇ ಶಾಲೆ ಇದ್ದರೆ ಪೋಷಕರಿಗೆ ಚಿಂತೆ ಕಡಿಮೆ. ದೂರವಿದ್ದರೆ ಮಕ್ಕಳು ಶಾಲೆಗೆ ಸುರಕ್ಷಿತವಾಗಿ ಸಕಾಲಕ್ಕೆ ತಲುಪಲೆಂದು ದೇವರನ್ನು ಬೇಡಿಕೊಳ್ಳುತ್ತಾರೆ. ಮಕ್ಕಳೊಂದಿಗೆ ಶಾಲೆಯವರೆಗೂ ತಾವೇ ಬಸ್‌ನಲ್ಲಿ ಬೆಳಿಗ್ಗೆ ಹೋಗಿ ಸಂಜೆ ಮತ್ತೆ ಕರೆತರುವ ತಾಯಂದಿರೂ ಇದ್ದಾರೆ.ಮಕ್ಕಳು ಶಾಲೆಗೆ ಹೋಗಲು ಸಾಮಾನ್ಯವಾಗಿ ನಾಲ್ಕು ಆಯ್ಕೆಗಳಿರುತ್ತವೆ. ಒಂದು ಶಾಲಾ ವಾಹನ. ಮತ್ತೊಂದು ಖಾಸಗಿ ವಾಹನ, ಇನ್ನೊಂದು ಸ್ವಂತ ವಾಹನ. ಕೊನೆ ಆಯ್ಕೆ ಬಿಎಂಟಿಸಿ. ನಗರದಲ್ಲಿ ಒಟ್ಟು ನಾಲ್ಕೂವರೆ ಲಕ್ಷ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವುದು ಇದಕ್ಕೆ ಸಾಕ್ಷಿ.ಅಷ್ಟೇ ಅಲ್ಲದೆ ಬೆಳಿಗ್ಗೆ ಮಕ್ಕಳು ಶಾಲೆಗೆ ಹೋಗುವ ವೇಳೆ ಮತ್ತು ಕೆಲಸಕ್ಕೆ ಹೋಗುವವರ ಸಮಯವೂ ಒಂದೇ ಆದ್ದರಿಂದ ಬಸ್ಸುಗಳು ತುಂಬಿಹೋಗುವುದು ಸಹಜ. ಖಾಸಗಿ ಶಾಲೆಗಳಿರಲಿ, ಸರ್ಕಾರಿ ಶಾಲೆಗಳಿರಲಿ, ಬಸ್ಸನ್ನೇ ನೆಚ್ಚಿಕೊಂಡಿರುವ ಮಕ್ಕಳಿಗೆ ಈ ಸಮಸ್ಯೆ ತಪ್ಪಿದ್ದಲ್ಲ. ಇಂಥ ಸಮಸ್ಯೆಗಳ ನಡುವೆಯೂ ಮಕ್ಕಳು ಸುರಕ್ಷಿತವಾಗಿ ಶಾಲೆ ಹೋಗಿ ಮನೆಗೆ ಹಿಂದಿರುಗುತ್ತಾರೆನ್ನುವುದೇ ಅದೃಷ್ಟ.ಮಹಿಳಾ ವಿಶೇಷ ವಾಹನದಂತೆ ಮಕ್ಕಳಿಗೂ ಬೆಳಿಗ್ಗೆ ಮಾತ್ರ ಪ್ರತ್ಯೇಕ ವಾಹನವಿರಲಿ ಎಂಬುದು ಕೆಲವು ಪೋಷಕರ ಮಾತಾದರೆ, ಸಾರ್ವಜನಿಕರೂ ಬಸ್ಸುಗಳಲ್ಲಿ ಮಕ್ಕಳನ್ನು ಮಕ್ಕಳಂತೆಯೇ ನಡೆಸಿಕೊಳ್ಳಲಿ ಎಂಬುದು ಕೆಲವರ ಅಭಿಪ್ರಾಯ.

  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.