ಭಾನುವಾರ, ಜೂನ್ 13, 2021
23 °C

ಈ ವಾರ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ದಿಲ್‌ರಂಗೀಲಾ’

ಕೆ. ಮಂಜು ನಿರ್ಮಿಸಿರುವ ‘ದಿಲ್‌ರಂಗೀಲಾ’ ಚಿತ್ರ ಬಿಡುಗಡೆಯಾಗುತ್ತಿದೆ. ಗಣೇಶ್ ನಾಯಕರಾಗಿರುವ ಈ ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ. ರಚಿತಾ ರಾಂ, ಪ್ರಿಯಾಂಕಾ ರಾವ್, ದತ್ತಣ್ಣ, ರಂಗಾಯಣ ರಘು, ಅಚ್ಯುತ್ ಕುಮಾರ್, ಜಯಶ್ರೀ, ಭಾರ್ಗವಿ ನಾರಾಯಣ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಎಚ್.ಸಿ. ವೇಣು ಛಾಯಾಗ್ರಹಣ, ಅರ್ಜುನ್‌ಜನ್ಯ ಸಂಗೀತ,  ಜೋ.ನಿ. ಹರ್ಷ ಸಂಕಲನ, ಪ್ರಶಾಂತ್ ಸಂಭಾಷಣೆ ಚಿತ್ರಕ್ಕಿದೆ.‘ಚಂದ್ರಲೇಖ’

ಎನ್. ಓಂ ಪ್ರಕಾಶ್ ರಾವ್ ನಿರ್ದೇಶನದ ‘ಚಂದ್ರಲೇಖ’ ಚಿತ್ರ ತೆರೆಗೆ ಬರುತ್ತಿದೆ. ಚಿರಂಜೀವಿ ಸರ್ಜಾ, ಶಾನ್ವಿ ಶ್ರೀವಾಸ್ತವ ಮುಖ್ಯಭೂಮಿಕೆ ಯಲ್ಲಿದ್ದಾರೆ. ಕೆ.ವಿ. ಶ್ರೀಧರ್ ರೆಡ್ಡಿ ಚಿತ್ರದ ನಿರ್ಮಾಪಕ. ಜೆ.ಬಿ. ಸಂಗೀತ ನಿರ್ದೇಶನ, ಬಿ. ರವಿ ಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ, ಎಂ.ಎಸ್. ರಮೇಶ್ ಸಂಭಾಷಣೆ ‘ಚಂದ್ರಲೇಖ’ ಚಿತ್ರಕ್ಕೆ ಇದೆ.‘ಲೈಟ್ಸ್ ಕ್ಯಾಮರಾ ಆಕ್ಷನ್’

ಗುರುದರ್ಶನ್ ನಿರ್ದೇಶನ ಮತ್ತು ನಿರ್ಮಾಣದ ‘ಲೈಟ್ಸ್ ಕ್ಯಾಮರಾ ಆಕ್ಷನ್’ ಚಿತ್ರ ಬಿಡುಗಡೆಯಾಗುತ್ತಿದೆ. ಶಿವಶಂಕರನ್ ಛಾಯಾಗ್ರಹಣ, ತಿರುಪತಿ ರೆಡ್ಡಿ ಸಂಕಲನ, ಹಿತನ್ ಕೆ.ಟಿ. ಸಂಗೀತ ಚಿತ್ರಕ್ಕಿದೆ. ಬಾಲು ನಾಗೇಂದ್ರ, ಅರ್ಚನಾ ರೆಡ್ಡಿ, ವಿಜಯ್, ಚೇತನ್, ಮುರುಳಿ ಶೃಂಗೇರಿ, ನಂದೀಶ್, ಹರೀಶ್ ಮತ್ತಿತರರು ನಟಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.