ಶುಕ್ರವಾರ, ಮೇ 14, 2021
29 °C

ಉಕ್ಕು ಕಾರ್ಮಿಕರ ಒಕ್ಕೂಟಕ್ಕೆ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ಭಾರತೀಯ ಉಕ್ಕು ಪ್ರಾಧಿಕಾರದ (ಸೈಲ್) ಅಂಗಸಂಸ್ಥೆಗಳ ಉಕ್ಕು ಕಾರ್ಮಿಕರ ಒಕ್ಕೂಟ ಕಾರ್ಮಿಕರ ಹಿತ ಕಾಯ್ದುಕೊಳ್ಳುವ ಜತೆಗೆ ಗುತ್ತಿಗೆ ಕಾರ್ಮಿಕರ ರಕ್ಷಣೆಗೂ ಸಹ ಮುಂದಾಗಿದೆ ಎಂದು ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್. ಚಂದ್ರಹಾಸ ಹೇಳಿದರು.ಇಲ್ಲಿನ ಕಾರ್ಖಾನೆ ಮುಂಭಾಗದಲ್ಲಿ ಶುಕ್ರವಾರ ಜರುಗಿದ ಕಾರ್ಮಿಕರ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.2007ರಿಂದ ಸೈಲ್ ಕಾರ್ಮಿಕರ ವೇತನ ಒಪ್ಪಂದ ಕುರಿತಂತೆ ನಡೆಯುತ್ತಿದ್ದ ಮಾತುಕತೆ ಹೋರಾಟ, ಮುಷ್ಕರ ಹಾಗೂ ಪ್ರತಿಭಟನೆಗಳ ನಂತರ ಇತ್ಯರ್ಥವಾದ ಹಿನ್ನೆಲೆಯಲ್ಲಿ ಉಕ್ಕು ಕಾರ್ಮಿಕರ ಒಕ್ಕೂಟಕ್ಕೆ ಜಯ ಸಿಕ್ಕಿದೆ. ಹೀಗಾಗಿ ಅವರನ್ನು ಅಭಿನಂದಿಸುವುದು ಸಂಘದ ಕರ್ತವ್ಯ.ಈ ಹೋರಾಟ ಫಲವಾಗಿ ಗುತ್ತಿಗೆ ಕಾರ್ಮಿಕರಿಗೂ ಸಹ ಹೆಚ್ಚುವರಿ ್ಙ 1,000ನಗದು ದೊರೆಯಿತು. ಇದಕ್ಕೆ ಸಂಪೂರ್ಣವಾಗಿ ಸಿಐಟಿಯು ನೇತೃತ್ವ ಒಕ್ಕೂಟ ಕಾರಣ ಹಾಗಾಗಿ ಇದರ ಮುಖಂಡರು ನಮ್ಮ ಅಭಿನಂದನೆಗೆ ಅರ್ಹರು ಎಂದರು.ರಾಜ್ಯ ಸರ್ಕಾರ ಮೂರನೇ ಬಾರಿಗೆ ಕೇಂದ್ರ ಗಣಿ ಮಂತ್ರಾಲಯಕ್ಕೆ ಸಂಡೂರು ತಾಲ್ಲೂಕು ಬಾವಿಹಳ್ಳಿ ಪ್ರದೇಶದ 140ಹೆಕ್ಟೇರ್ ಭೂಮಿ ಶಿಫಾರಸು ಮಾಡಿದೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬಾಕಿ ಇದೆ ಎಂದರು.ಇದೇ ಸಂದರ್ಭದಲ್ಲಿ ಕಾರ್ಮಿಕರಿಂದ ಸಂಗ್ರಹಿಸಿದ ್ಙ 2.75ಲಕ್ಷ ಮೊತ್ತದ ಚೆಕ್ಕನ್ನು ಪದಾಧಿಕಾರಿಗಳು ಸಿಐಟಿಯು ಮುಖಂಡರಿಗೆ ಸಮರ್ಪಿಸಿದರು. ಗುತ್ತಿಗೆ ಕಾರ್ಮಿಕರಿಂದ ಸಂಗ್ರಹವಾಗಿದ್ದ  ್ಙ  25 ಸಾವಿರವನ್ನು ಎಲ್. ರಂಗೇಗೌಡ ನೀಡಿದರು.    ಜಾಗೃತಿ ಜಾಥಾ         

ಶಿವಮೊಗ್ಗ: ಎನ್.ಸಿ.ಸಿ. ಸೋಮವಾರ ಪರಿಸರ ಜಾಗೃತಿ ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.ಕರ್ನಾಟಕ ಸಂಘದಿಂದ ಸಹ್ಯಾದ್ರಿ ಕಾಲೇಜಿನವರೆಗೆ ಪರಿಸರ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು. ನಗರದ ಶಾಲಾ -ಕಾಲೇಜಿನಿಂದ 350ಕ್ಕೂ  ಹೆಚ್ಚು ವಿದ್ಯಾರ್ಥಿಗಳು, ಎ.ಎನ್.ಓ. ಅಧಿಕಾರಿಗಳು, ಯೋಧರು ಜಾಥಾದಲ್ಲಿ ಪಾಲ್ಗೊಂಡಿದ್ದರು. ನಂತರ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸೇರಿ 300ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟರು.ಕರ್ನಾಟಕ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಕೆ.ಎನ್.ಎನ್. ಮೂರ್ತಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.