ಮಂಗಳವಾರ, ಮೇ 17, 2022
27 °C

ಉಗ್ರರ ದಾಳಿಗೆ ಮಲ್ಪೆ ಮೂಲದ ವ್ಯಕ್ತಿ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಆಫ್ಘಾನಿಸ್ತಾನದ ಕಾಬೂಲ್‌ನಲ್ಲಿ ತಾಲಿಬಾನ್ ಉಗ್ರರು ಮಂಗಳವಾರ ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ ಮಲ್ಪೆಯ ಬೈಲಕೆರೆ ವಡಭಾಂಡೇಶ್ವರದ ಜಾನ್ ವಿಕ್ರಮ್ ಮಾರ್ಟಿಸ್ (36) ಎಂಬುವವರು ಮೃತಪಟ್ಟಿದ್ದಾರೆ.ಇಗ್ನೇಶಿಯಸ್ ಮಾರ್ಟಿಸ್ ಮತ್ತು ಜೆಸ್ಸಿ ಇಗ್ನೇಶಿಯಸ್ ದಂಪತಿಯ ಪುತ್ರ ಜಾನ್ ವಿಕ್ರಮ್, ಒಂದೂವರೆ ವರ್ಷಗಳಿಂದ ಅಮೆರಿಕ ಮೂಲದ ಡೈನೊಕಾರ್ಪ್ ಎಂಬ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಉಗ್ರರ ದಾಳಿಗೆ ಸಿಕ್ಕಿದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಇನ್ನು ಎರಡು ಮೂರು ದಿನಗಳಲ್ಲಿ ಅವರ ಶವವನ್ನು ಮಲ್ಪೆಗೆ ತರಲಾಗುತ್ತದೆ ಎಂದು ತಿಳಿದುಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.