ತಿ.ನರಸೀಪುರ: ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ದಿವಂಗತ ಡಾ. ಜಿ. ಗೋದಾವರಿಯಮ್ಮ ಅವರ ಸ್ಮರಣಾರ್ಥ ಪಟ್ಟಣದ ಸುರಕ್ಷಾ ಮೆಡಿಕಲ್ ಕೇರ್ ಆಶ್ರಯದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಜಯಶೀಲ ಮಾತನಾಡಿ, `ಡಾ. ಗೋದಾವರಿಯಮ್ಮ ರೋಟರಿ ಕ್ಲಬ್ಗೆ ಸ್ಥಳಾವಕಾಶ ಮಾಡುವುದರ ಜತೆಗೆ ಕ್ಲಬ್ನ ಚಟುವಟಿಕೆಗಳಿಗೆ ಸಹಾಯ ಮಾಡಿದ್ದಾರೆ. ಅವರ ಸ್ಮರಣಾರ್ಥ ಬಡಜನರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಮೈಸೂರಿನ ಕಾವೇರಿ ಆಸ್ಪತ್ರೆ ಹಾಗೂ ಇಲ್ಲಿನ ಸುರಕ್ಷಾ ಮೆಡಿಕಲ್ ಕೇರ್ ಸಹಯೋಗದೊಂದಿಗೆ ಆಯೋಜಿ ಸಲಾಗಿದೆ~ ಎಂದರು.

ಶಿಬಿರವನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ್ ಉದ್ಘಾಟಿಸಿದರು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ನೂರಾರು ಮಂದಿ ತಪಾಸಣೆಗೆ ಒಳಗಾದರು. ರೋಟರಿ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ನೇತ್ರ ಪರೀಕ್ಷಕ ಹಾಗೂ ರೋಟರಿ ಸದಸ್ಯ ಆರ್. ಉಮೇಶ್ಕುಮಾರ್, ಕಿಯೋನಿಕ್ಸ್ ಎಂ.ಮಂಜುನಾಥ್, ವ್ಯಾಸರಾಜಪುರದ ಚೈತನ್ಯ ಟ್ರಸ್ಟ್ನ ಕಾರ್ಯಕರ್ತೆಯರು ಹಾಗೂ ಕಾವೇರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.