ಮಂಗಳವಾರ, ಜನವರಿ 28, 2020
29 °C

ಉಚಿತ ಚರ್ಮವ್ಯಾಧಿ ತಪಾಸಣಾ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೂದಲು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರಿಗೆ ಉಚಿತ ತಪಾಸಣಾ ಶಿಬಿರವನ್ನು ಜೆ.ಪಿ.ನಗರದ ಮೆಡಿಕೇರ್ ಫೌಂಡೇಶನ್ ಆಶ್ರಯದಲ್ಲಿ ಡಿ.14ರಂದು ಹಮ್ಮಿಕೊಳ್ಳಲಾಗಿದೆ.ಡರ್ಮೆಟಾಲಜಿಸ್ಟ್ ಮತ್ತು ಕಾಸ್ಮೆಟಾಲಜಿಸ್ಟ್ ಆಗಿರುವ ಡಾ.ಸುಜಯ ಶಾಂತಕುಮಾರ್ ನೇತೃತ್ವದಲ್ಲಿ ಈ ಶಿಬಿರ ನಡೆಯಲಿದ್ದು, ಮೊಡವೆ, ಮೊಡವೆ ಕಲೆ, ದೇಹದ ಮೇಲಿನ ಯಾವುದೇ ರೀತಿಯ ಕಲೆ, ತೊನ್ನು ಮುಂತಾದ ವಿವಿಧ ಬಗೆಯ ಸಮಸ್ಯೆಗಳಿಂದ ಬಳಲುತ್ತಿರುವವರು ಶಿಬಿರದಲ್ಲಿ ಪಾಲ್ಗೊಳ್ಳಬಹುದು.ಚರ್ಮ ಕಳಾಹೀನಗೊಳ್ಳುವುದು, ಕೂದಲು ಉದುರುವಿಕೆ, ಕೂದಲಿನ ಟ್ರಾನ್ಸ್‌ಪ್ಲಾಂಟೇಶನ್, ಎಲೆಕ್ಟ್ರಾಲಿಸಿಸ್, ಚರ್ಮದ ಪಾಲಿಷಿಂಗ್ ಮುಂತಾದುವುಗಳ ಬಗ್ಗೆಯೂ ತಜ್ಞರು ಮಾಹಿತಿ ಮತ್ತು ಚಿಕಿತ್ಸಾ ವಿಧಾನವನ್ನು ತಿಳಿಸಲಿದ್ದಾರೆ. ಅಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧ರ ವರೆಗೆ ನಡೆಯಲಿದೆ. ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬೇಕು. ಸಂಪರ್ಕ ಸಂಖ್ಯೆ: ೯೨೪೨೮ ೫೫೭೦೭/ ೯೬೩೨೯ ೧೦೧೭೧. z

ಪ್ರತಿಕ್ರಿಯಿಸಿ (+)