ಶನಿವಾರ, ಏಪ್ರಿಲ್ 17, 2021
27 °C

ಉತ್ತಮ ಮಳೆ: ಕೃಷಿ ಕ್ಷೇತ್ರದ ಅಭಿವೃದ್ಧಿ ದರ ಹೆಚ್ಚಳ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಈ ಬಾರಿ ಉತ್ತಮ ಮುಂಗಾರು ನಿರೀಕ್ಷಿಸಲಾಗಿದ್ದು, ಕೃಷಿ ಕ್ಷೇತ್ರದಲ್ಲಿ ಶೇ 4ರಷ್ಟು ಬೆಳವಣಿಗೆಯ ಗುರಿ ಇಟ್ಟುಕೊಳ್ಳುವ ಅಗತ್ಯ ಇದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿ ಸಲಹೆ ಮಾಡಿದೆ. ಈ ವರ್ಷ ಸಹಜ ಮುಂಗಾರು ಆದ ಪಕ್ಷದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿ ದರವನ್ನು ವೃದ್ಧಿಸುವತ್ತಲೂ ಗಮನ ಹರಿಸಬೇಕು ಎಂದು ಆರ್ಥಿಕ ಸಲಹಾ ಮಂಡಳಿ  ಅಧ್ಯಕ್ಷ ಸಿ.ರಂಗರಾಜನ್ ಸುದ್ದಿಗಾರರಿಗೆ ತಿಳಿಸಿದರು.ಭೂ ವಿಜ್ಞಾನ ಸಚಿವಾಲಯ ಹಮ್ಮಿಕೊಂಡಿದ್ದ ಎರಡು ದಿನಗಳ ಸಮ್ಮೇಳನದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿ ದೇಶಾದ್ಯಂತ ಉತ್ತಮ ಮುಂಗಾರು ನಿರೀಕ್ಷಿಸಲಾಗಿದೆ ಎಂದರು.ಬೆಲೆ ಏರಿಕೆ ಬಗ್ಗೆ ಮಾತನಾಡಿದ ಅವರು, ಮಾರ್ಚ್ ತಿಂಗಳಿನಲ್ಲಿ ಹಣದುಬ್ಬರ ಅನಿರೀಕ್ಷಿತ. ಮುಂಬರುವ ದಿನಗಳಲ್ಲಿ ಶೇ 6ಕ್ಕೆ ಇಳಿಯಲಿದೆ ಎನ್ನುವ ನಿರೀಕ್ಷೆ ಇದೆ ಎಂದರು.ಅಹಾರ ಪದಾರ್ಥಗಳ ಬೆಲೆಯಲ್ಲಿ ಇಳಿಕೆ ಕಂಡಿರುವುದರಿಂದ ಹಣದುಬ್ಬರ ಸಹ ಇಳಿಮುಖವಾಗಲಿದೆ. ಜತೆಗೆ ಉತ್ಪಾದನಾ ರಂಗದಲ್ಲಿಯೂ ಹೆಚ್ಚಿನ ಉತ್ಪಾದನೆಗೆ ಒತ್ತು ನೀಡಿರುವುದರಿಂದ ಸಹಜವಾಗಿ ಹಣದುಬ್ಬರ ಇಳಿಮುಖವಾಗಲಿದೆ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.