ಬಳ್ಳಾರಿ: ಸೂರ್ಯ, ಚಂದ್ರ, ನಕ್ಷತ್ರ, ಭೂಮಿ, ಉಪಗ್ರಹಗಳು, ಧೂಮಕೇತು, ಗ್ರಹಣ ಮತ್ತಿತರ ವಿಸ್ಮಯಗಳ ಕೃತಕ ವೀಕ್ಷಣೆಗಾಗಿ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಸ್ಥಳೀಯ ಜಿಲ್ಲಾ ಕ್ರೀಡಾಂಗಣದ ಬಳಿಯ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನಿರ್ಮಾಣ ವಾಗಿರುವ ಸುಸಜ್ಜಿತ ತಾರಾಲಯ ಉದ್ಘಾಟನೆಗೆ ಅಣಿಯಾಗಿದೆ.

ಆರು ತಿಂಗಳ ಹಿಂದೆ ಆರಂಭವಾಗಿರುವ ಈ ವಿಜ್ಞಾನ ಕೆಂದ್ರದಲ್ಲಿ ಜೀವ ವೈವಿಧ್ಯದ ವಿಕಾಸ, ಅರಣ್ಯ ಸಂಪತ್ತು, ಪ್ರಾಣಿ ಸಂಕುಲ, ಜಲ ಚರಗಳು, ವಿನಾಶ ಹೊಂದಿರುವ ವಿವಿಧ ಪ್ರಭೇದದ ಪುರಾತನ ಪ್ರಾಣಿ, ಪಕ್ಷಿಗಳ ಕುರಿತು ಸಮಗ್ರ ಮಾಹಿತಿ ನೀಡಲಾ ಗುತ್ತಿದೆ. ಇದೀಗ ನಕ್ಷತ್ರ ಕುಂಜ, ಆಕಾಶ ಕಾಯಗಳು ಹಾಗೂ ನಭೋಮಂಡಲ ದಲ್ಲಿನ ವಿಸ್ಮಯ, ವೈವಿಧ್ಯತೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ತಾರಾ ಲಯ ಕಾರ್ಯ ನಿರ್ವಹಿಸಲಿದೆ.

ನವದೆಹಲಿಯಲ್ಲಿರುವ ಕೇಂದ್ರಿಯ ವಿಜ್ಞಾನ ಪ್ರತಿಷ್ಠಾನದ ನೆರವಿನೊಂದಿಗೆ ಕಾರ್ಯ ನಿರ್ವಹಿಸಲಿರುವ ಈ ಕೇಂದ್ರದ ಸ್ಥಾಪನೆಗೆ ತೋರಣಗಲ್ನಲ್ಲಿರುವ ಜೆಎಸ್ಡಬ್ಲೂ ಸ್ಟೀಲ್ ಸಂಸ್ಥೆ ಅಗತ್ಯ ಹಣಕಾಸಿನ ನೆರವು ನೀಡಿದ್ದು, ಜಿಲ್ಲೆಯ ವಿಜ್ಞಾನಾಸಕ್ತ ವಿದ್ಯಾರ್ಥಿಗಳ ಕುತೂಹ ಲವನ್ನು ತಣಿಸಲಿದೆ.

ನಾಲ್ಕು ಶತಮಾನಗಳ ಹಿಂದೆ ಟೆಲಿ ಸ್ಕೋಪ್ ಕಂಡುಹಿಡಿಯುವ ಮೂಲಕ ಆಕಾಶಕಾಯಗಳ ಕುರಿತು ಸಂಶೋಧನೆ ನಡೆಸಿದ ಗೆಲಿಲಿಯೊ ಅವರ ಸಾಧನೆಯನ್ನು ಪ್ರತಿಬಿಂಬಿಸುವ 45 ನಿಮಿಷಗಳ ಅವಧಿಯ ಸಾಕ್ಷ್ಯಚಿತ್ರ ಹಾಗೂ ಭೂಗ್ರಹದ ಕುರಿತು ವಿವರಣೆಯನ್ನು ಕತೆಯ ಮೂಲಕ ಪ್ರಸ್ತುತಪಡಿಸುವ ಚಂದಮಾಮನ ಸಾಕ್ಷ್ಯಚಿತ್ರಗಳು ವಿದ್ಯಾರ್ಥಿಗಳಿಗಾಗಿ ತಯಾ ರಾಗಿವೆ. 48 ಆಸನಗಳನ್ನು ಹೊಂದಿರುವ ಈ ತಾರಾಲಯವು ಹವಾನಿಯಂತ್ರಿತ ವ್ಯವಸ್ಥೆಯನ್ನೂ ಒಳಗೊಂಡಿದೆ.

ಹಗಲು ಹೊತ್ತಿನಲ್ಲೂ ರಾತ್ರಿಯನ್ನು ಸೃಷ್ಟಿಸಿ, ನೆತ್ತಿಯ ಮೆಲಿನ ಆಕಾಶದಲ್ಲಿ ಮಿನು ಗುವ ನಕ್ಷತ್ರಗಳು, ಸೂರ್ಯ, ಚಂದ್ರ, ಶನಿ, ಶುಕ್ರ, ಗುರು, ಮಂಗಳ ಮತ್ತಿತರ ಗ್ರಹಗಳನ್ನು ವಿಶೇಷ ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸುವ ವ್ಯವಸ್ಥೆ ಕಲ್ಪಿಸಿರುವುದು ಚಿಣ್ಣರ ಮನಸೂರೆ ಗೊಳ್ಳಲಿದೆ.

ಕೈಗಾರಿಕೆಯ ಬೆಳವಣಿಗೆ, ಅಗತ್ಯ, ಅವಲಂಬನೆಯ ಕುರಿತು ಮಾಹಿತಿ ಒದಗಿಸುವ ಕೈಗಾರಿಕಾ ಕೇಂದ್ರವನ್ನೂ ಇಲ್ಲಿಯೇ ಸ್ಥಾಪಿಸ ಲಾಗಿದ್ದು, ವೀಕ್ಷಣೆಗೆ ಆಗಮಿಸುವ ಮಕ್ಕಳಿಗಾಗಿ ಕಂಪ್ಯೂಟರ್ ಗೇಮ್ ವ್ಯವಸ್ಥೆ ಮಾಡಲಾಗಿದೆ.

ಮಕ್ಕಳನ್ನು ಬಾಹ್ಯಾಕಾಶಕ್ಕೆ ಲೋಕಕ್ಕೆ ಕೊಂಡೊಯ್ಯಲು ಎಲ್ಲ ಸಿದ್ಧತೆಗಳು ನಡೆದಿದ್ದು, ಸದ್ಯದಲ್ಲೇ ಇದನ್ನು ನಾಗರಿ ಕರ ವೀಕ್ಷಣೆಗೆ ಸಮರ್ಪಿಸಲಾಗುವುದು. ಎಂದು ಜಿಲ್ಲಾಧಿಕಾರಿ ಎ.ಎ.ಬಿಸ್ವಾಸ್ ಹಾಗೂ ಕೇಂದ್ರದ ಯೋಜನಾ ನಿರ್ದೇಶಕ ಶ್ರೀನಿವಾಸ ಕುಲಕರ್ಣಿ ಪ್ರಜಾವಾಣಿಗೆ ತಿಳಿಸಿದ್ದಾರೆ.

ಈ ಕೇಂದ್ರವು ಕೇವಲ ಅಧ್ಯಯನಶೀಲರಿಗೆ ಮಾತ್ರ ನೆರವಾಗದೆ, ಜಿಲ್ಲೆಯ ಜನರಿಗೆ ಪ್ರೇಕ್ಷಣೀಯ ಸ್ಥಳವಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದ್ದಾರೆ. ಆದಿಮಾನವನ ವಿವರ: ಕೇಂದ್ರದ 8 ಎಕರೆ ವಿಶಾಲ ಬಯಲು ಪ್ರದೇಶದಲ್ಲಿ ಗಿಡ, ಮರಗಳ ಅಡಿಯಲ್ಲಿ ಸ್ಥಾಪಿಸಿ ರುವ ಆದಿ ಮಾನವರ ಪ್ರತಿಕೃತಿಗಳು ನಯನ ಮನೋಹರ ವಾಗಿದ್ದು, ಮಾನವನ ವಿಕಸನದ ಸಮಗ್ರ ಮಾಹಿತಿಯು ಧ್ವನಿಮುದ್ರಿಕೆಯೊಂದಿಗೆ ಪ್ರಸಾರವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಪ್ರತಿಮೆಯ ರೂಪದಲ್ಲಿರುವ ಇವರನ್ನು ನೋಡಲು ಮತ್ತು ಮಾನ ವನ ಸೃಷ್ಠಿಯಿಂದ ಇಂದಿನ ವರೆಗಿನ ಬೆಳವಣಿಗೆ ಕುರಿತು ತಿಳಿಯಲು ಬಳ್ಳಾರಿಯ ಈ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಆಗಮಿಸಬೇಕು. ವಿಜ್ಞಾನದ ಅವಲಂಬನೆ, ವಿಕಾಸ ವಾದವನ್ನು ಸಾರುವ ವಿಜ್ಞಾನದ ಉಪಯು ಕ್ತತೆಗೆ ಮಾರುಹೋಗಿ, ಅದ ರತ್ತ ವಾಲಿದ ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿರುವ ತಂತ್ರಜ್ಞಾನದ ಉಪಯೋಗದ ಕುರಿತು ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ತಿಳಿಸಲೆಂದೇ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಬೆಂಗಳೂರಿನಲ್ಲಿರುವ ನೆಹರೂ ತಾರಾಲಯ ಹೊರತುಪಡಿಸಿದರೆ, ಬಳ್ಳಾರಿಯಲ್ಲಿ ಮತ್ತೊಂದು ತಾರಾಲಯ ಸ್ಥಾಪಿಸಲಾಗಿದ್ದು, ಹೈದರಾಬಾದ್ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ವಿಜ್ಞಾನಾಸಕ್ತ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ದೊರೆಯುವು ದರೊಂದಿಗೆ ಎಲ್ಲ ವರ್ಗದ ಜನರ ಮನ ರಂಜನೆಯ ಮೂಲವಾಗಿ ಹೊರಹೊಮ್ಮಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.