ಶುಕ್ರವಾರ, ಆಗಸ್ಟ್ 7, 2020
23 °C

ಉದ್ಯೋಗಕ್ಕೆ ಆಗ್ರಹಿಸಿ ಮಹಿಳೆಯರಿಂದ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದ್ಯೋಗಕ್ಕೆ ಆಗ್ರಹಿಸಿ ಮಹಿಳೆಯರಿಂದ ಮುತ್ತಿಗೆ

ಕಂಪ್ಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಿನಗೂಲಿ ಕೆಲಸ ನೀಡುವಂತೆ ಆಗ್ರಹಿಸಿ ಮಹಿಳೆಯರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಇಲ್ಲಿಗೆ ಸಮೀಪದ ದೇವಲಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.ಕಳೆದ ಎರಡು ದಿನಗಳಿಂದ ಸುಮಾರು 50ರಿಂದ 60 ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿಗೆ ಕೂಲಿ ಕೆಲಸ ನೀಡುವಂತೆ ಅಲೆಯುತ್ತಿದ್ದು, ಚುನಾ ಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ಗಳು ಸ್ಪಂದಿಸಿದ ಕಾರಣ ಅನಿವಾರ್ಯ ವಾಗಿ ಪ್ರತಿಭಟನಾ ಅಸ್ತ್ರ ಬಳಸಿದ್ದಾಗಿ ಮಹಿಳೆಯರು ಹೇಳಿದರು.ಕಾರಿಗನೂರು ನೀಲಮ್ಮ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಲ್ಲ ಮಹಿಳೆಯರು ಸಲಿಕೆ, ಕಬ್ಬಿಣ ಹಾರೆ, ಪುಟ್ಟಿ, ಗುದ್ದಲಿ, ಬುತ್ತಿ ಗಂಟು ಮತ್ತು ನೀರಿನ ಬಾಟಲಿಯೊಂದಿಗೆ ಆಗಮಿ ಸಿದ್ದರು.ಮಳೆ ಇಲ್ಲದೇ ಬರ ಬಂದಿದ್ದು, ಕೂಲಿ ಕೆಲಸ ಇಲ್ಲದಂತಾಗಿ ನಿತ್ಯದ ಬದುಕು ದುಸ್ತರವಾಗಿದೆ. ಇಂಥ ಪರಿಸ್ಥಿತಿಯಲ್ಲಿ ಕೂಲಿ ಕೆಲಸ ಕೊಡದೇ ಕಡೆಗಣಿಸು ತ್ತಿದ್ದಾರೆ ಎಂದು ಮಹಿಳೆಯರು ದೂರಿದರು.ಕೂಲಿ ಕೆಲಸ ಕೊಡುತ್ತಿಲ್ಲ ಎಂದು ಈಗಾಗಲೇ ಹೊಸಪೇಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ಎರಡು ಮೂರು ಬಾರಿ ಭೇಟಿ ಮಾಡಿದಾಗ ಪಂಚಾಯಿತಿ ಅಧಿಕಾರಿಗಳಿಗೆ ಕೂಲಿ ಕೆಲಸ ನೀಡುವಂತೆ ಸೂಚಿಸಿದ್ದರು.ಆದರೆ ಪಂಚಾಯಿತಿ ಯಲ್ಲಿ ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅನಸೂಯಮ್ಮ, ಗಂಗಮ್ಮ, ಹೊನ್ನೂರಮ್ಮ, ಮಾರೆಮ್ಮ ಆರೋಪಿಸಿದರು.ಪ್ರತಿಭಟನಾ ಸ್ಥಳಕ್ಕೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಆಗಮಿಸದೇ ಇರುವುದರ ಬಗ್ಗೆ ಇನ್ನು ಕೆಲ ಮಹಿಳೆ ಯರು ಆಕ್ರೋಶ ವ್ಯಕ್ತಪಡಿಸಿದರು.ಕಳೆದ ತಿಂಗಳು 17 ದಿನಗಳ ಪರ್ಯಂತ ಮಾಡಿದ ಕೂಲಿ ಕೆಲಸದ ಬಾಕಿ ಜೊತೆಗೆ ಶೀಘ್ರ ಕೂಲಿ ಕೆಲಸವನ್ನೂ ಕೊಡಬೇಕು ಮತ್ತು ಕಳೆದ ವರ್ಷದಲ್ಲಿ ಕೆಲವರ ಕೂಲಿ ಬಾಕಿ ಇದ್ದು ಅದನ್ನೂ ಪಾವತಿಸುವಂತೆ ಮಹಿಳೆಯರು ಆಗ್ರಹಿಸಿದರು.ಉದ್ಯೋಗ ಖಾತ್ರಿ ಅಡಿ ಗ್ರಾಮದಲ್ಲಿ ಅರಣ್ಯೀಕರಣಕ್ಕಾಗಿ ನಾಲ್ಕು ಸ್ಥಳಗಳನ್ನು ಗುರುತಿಸಿ ರೂ. 9.88ಲಕ್ಷ ಮೀಸಲಿ ರಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಆಗಮಿಸಲಿದ್ದು, ಅಂದಾಜು ಪಟ್ಟಿಯಂತೆ ಅಳತೆ ನಿಗದಿಪಡಿಸುತ್ತಾರೆ. ಇದಾದ ನಂತರ ಎಲ್ಲರಿಗೂ ಕೂಲಿ ಕೆಲಸ ಕೊಡಲಾಗುವುದು ಎಂದು ಪ್ರಭಾರಿ ಪಿಡಿಒ ಜಿ. ಆಂಜನೇಯಲು ತಿಳಿಸಿದರು.17 ದಿನಗಳ ಬಾಕಿ ಕೂಲಿಯನ್ನೂ ಎಲ್ಲರಿಗೂ ಶೀಘ್ರ ಪಾವತಿಸುವ ವ್ಯವಸ್ಥೆ ಮಾಡಲಾಗುವುದು. ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ 100 ದಿನ ಕೂಲಿ ನೀಡಬೇಕು ಎನ್ನುವ ನಿಯಮ ವನ್ನೂ ಕಡ್ಡಾಯವಾಗಿ ಪಾಲಿಸಲಾಗು ವುದು ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.