ಬೆಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಮಹಿಳಾ ಕೂಲಿ ಕಾರ್ಮಿಕರ ಹೆಸರಿನಲ್ಲೇ ಬ್ಯಾಂಕ್ ಖಾತೆ ತೆರೆಯಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ತಿಳಿಸಿದರು.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ಗ್ರಾಮೀಣಾಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಮೇಶ್, ಮನೆಯ ಮುಖ್ಯಸ್ಥನ ಹೆಸರಿನಲ್ಲಿ ಖಾತೆ ತೆರೆದು, ಕುಟುಂಬದ ಎಲ್ಲ ಕೂಲಿ ಕಾರ್ಮಿಕರ ಹಣವನ್ನು ಆ ಖಾತೆಗೆ ಜಮಾ ಮಾಡಲು ಇನ್ನು ಮುಂದೆ ಅವಕಾಶ ಇಲ್ಲ ಎಂದರು.

2013-14ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯಕ್ಕೆ ರೂ. 2,133 ಕೋಟಿ ಅನುದಾನ ಒದಗಿಸಲಾಗುವುದು. ಮೊದಲ ಹಂತದಲ್ಲಿ ರೂ. 774.50 ಕೋಟಿ ಬಿಡುಗಡೆ ಮಾಡಲಾಗಿದೆ. ಹಿಂದಿನ ವರ್ಷಗಳಲ್ಲಿ ಖರ್ಚಾಗದ ರೂ. 345 ಕೋಟಿ ಹಾಗೆ ಇದೆ. ಅದೂ ಸೇರಿದಂತೆ ಒಟ್ಟು ರೂ. 1,100 ಕೋಟಿ ಸದ್ಯಕ್ಕೆ ಲಭ್ಯವಿದೆ ಎಂದರು.

ಪ್ರಧಾನಮಂತ್ರಿ ಗ್ರಾಮೀಣ ಸಡಕ್, ಇಂದಿರಾ ಆವಾಸ್ ಹಾಗೂ ಜಲಾನಯನ ಅಭಿವೃದ್ಧಿ ಯೋಜನೆಗಳಡಿ ಈ ವರ್ಷ ಕರ್ನಾಟಕಕ್ಕೆ ಒಟ್ಟು ರೂ. 1,305 ಕೋಟಿ ಅನುದಾನ ನೀಡಲಾಗುವುದು ಎಂದ ಅವರು, ಕಳೆದ 4-5 ವರ್ಷಗಳಿಂದ ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ಸರಿಯಾಗಿ ಅನುಷ್ಠಾನವಾಗಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

2245 ಕಿ.ಮೀ. ರಸ್ತೆ: ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಪ್ರಧಾನಮಂತ್ರಿಗಳ ಗ್ರಾಮೀಣ ಸಡಕ್ ಯೋಜನೆ ಈ ವರ್ಷ ಪುನರಾರಂಭವಾಗಲಿದೆ. ರಾಜ್ಯದಲ್ಲಿ 2,245 ಕಿ.ಮೀ. ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗುವುದು. ಒಂದು ಕಿ.ಮೀ.ಗೆ ರೂ. 40 ಲಕ್ಷ ವೆಚ್ಚವಾಗಲಿದ್ದು, ಒಟ್ಟು ಒಂದು ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ. ಜುಲೈ ಒಳಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಆಗಸ್ಟ್ನಲ್ಲಿ ಅನುಮೋದನೆ ನೀಡಲಾಗುವುದು ಎಂದು ರಮೇಶ್ ತಿಳಿಸಿದರು.

ಇಂದಿರಾ ಆವಾಸ್: ಕೇಂದ್ರ ಸರ್ಕಾರ ಈ ವರ್ಷ ಇಂದಿರಾ ಆವಾಸ್ ಯೋಜನೆಯಡಿ ರಾಜ್ಯದಲ್ಲಿ 87,816 ಮನೆಗಳನ್ನು ನಿರ್ಮಿಸಲು ರೂ. 27 ಕೋಟಿ ನೆರವು ನೀಡಲಿದೆ. ದೇವದಾಸಿಯರು, ಎಚ್ಐವಿ ಪೀಡಿತರು, ವಿಧವೆಯರು, ದುರ್ಬಲ ವರ್ಗದವರಿಗೆ ಮನೆಗಳ ಅಗತ್ಯವಿದೆ. ಹೀಗಾಗಿ ಹೆಚ್ಚುವರಿಯಾಗಿ 50 ಸಾವಿರ ಮನೆಗಳನ್ನು ಮಂಜೂರು ಮಾಡಬೇಕು ಎಂದು ಸಿದ್ದರಾಮಯ್ಯ ಕೋರಿದ್ದಾರೆ. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿರುವುದಾಗಿ ಹೇಳಿದರು.

2013-14ನೇ ಸಾಲಿನಲ್ಲಿ 17 ಜಿಲ್ಲೆಗಳಲ್ಲಿ ಮಾತ್ರ ಇಂದಿರಾ ಅವಾಸ್ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗುತ್ತದೆ. ಉಳಿದ 13 ಜಿಲ್ಲೆಗಳಲ್ಲಿ ಈ ಹಿಂದೆ ವೆಚ್ಚ ಮಾಡಿರುವ ಬಳಕೆ ಪ್ರಮಾಣ ಪತ್ರವನ್ನು ಹಿಂದಿನ ಸರ್ಕಾರ ನೀಡಿಲ್ಲ. ಹೀಗಾಗಿ ಮೊದಲ ಕಂತಿನಲ್ಲಿ ಆ ಜಿಲ್ಲೆಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ ಎಂದರು.

ಜಲಾನಯನ ಕಾರ್ಯಕ್ರಮ: ಈ ವರ್ಷ ಜಲಾನಯನ ಕಾರ್ಯಕ್ರಮದಡಿ ರೂ. 278 ಕೋಟಿ ಅನುದಾನ ನೀಡಲಾಗುವುದು. ತುಮಕೂರು, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಮೂರು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯಲು, ಇಳುವರಿ ಹೆಚ್ಚಿಸಿಕೊಳ್ಳುವ ಕಾರ್ಯಕ್ಕೆ ಈ ಹಣ ಬಳಸಿಕೊಳ್ಳಬಹುದು ಎಂದರು.

ರಾಷ್ಟ್ರೀಯ ಗ್ರಾಮೀಣ ಅಕಾಡೆಮಿ: ಸ್ವಯಂ ಉದ್ಯೋಗ ಕಾರ್ಯಕ್ರಮವನ್ನು ರಾಷ್ಟ್ರಮಟ್ಟದಲ್ಲಿ ಜಾರಿ ಮಾಡಲಾಗುತ್ತಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ನಡೆಸುತ್ತಿರುವ ರೂಡ್ಸೆಟ್ ಮಾದರಿಯ ಕೇಂದ್ರಗಳನ್ನು ಪ್ರತಿ ಜಿಲ್ಲೆಯಲ್ಲಿ ತೆರೆಯಲಾಗುವುದು. ಪ್ರತಿ ಕೇಂದ್ರಕ್ಕೆ ಒಂದು ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು. ಪ್ರತಿ ಕೇಂದ್ರಕ್ಕೆ 1.5 ಎಕರೆ ಜಾಗವನ್ನು ರಾಜ್ಯ ಸರ್ಕಾರವೇ ನೀಡಲಿದೆ ಎಂದರು.

ಈ ಕೇಂದ್ರಗಳ ಸಿಬ್ಬಂದಿಗೆ ತರಬೇತಿ ನೀಡುವುದಕ್ಕಾಗಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಗ್ರಾಮೀಣ ಅಕಾಡೆಮಿ ತೆರೆಯಲಾಗುತ್ತದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ಕೇಂದ್ರ ತಂಡ ಭೇಟಿ
ರಾಜ್ಯದಲ್ಲಿನ 1103 ಕುಗ್ರಾಮಗಳಿಗೆ ರಸ್ತೆ ಸಂಪರ್ಕ ಇಲ್ಲ. ಅವುಗಳಿಗೆ ರಸ್ತೆ ನಿರ್ಮಿಸಲು ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಜೈರಾಮ್ ರಮೇಶ್, ನಮ್ಮಲ್ಲಿರುವ ದಾಖಲೆಗಳ ಪ್ರಕಾರ ರಸ್ತೆ ಸಂಪರ್ಕ ಇಲ್ಲದ ಕುಗ್ರಾಮಗಳು ಇಲ್ಲ. ಈ ಬಗ್ಗೆ ವಸ್ತುಸ್ಥಿತಿ ಅರಿಯಲು ಕೇಂದ್ರ ಸರ್ಕಾರ ತಾಂತ್ರಿಕ ತಂಡವನ್ನು ರಾಜ್ಯಕ್ಕೆ ಕಳುಹಿಸಲಿದೆ. ತಂಡ ನೀಡುವ ವರದಿ ಆಧರಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

ರಸ್ತೆ ಸಂಪರ್ಕ ಇಲ್ಲದ ಕುಗ್ರಾಮಗಳು ಇಲ್ಲ ಎಂದು 2002ರಲ್ಲಿ ರಾಜ್ಯ ಸರ್ಕಾರವೇ ವರದಿ ನೀಡಿದೆ. ಹೀಗಾಗಿ ವಾಸ್ತವ ಸ್ಥಿತಿಯನ್ನು ತಿಳಿಯಲು ತಂಡ ಕಳುಹಿಸಲಾಗುವುದು. ಪಶ್ವಿಮ ಘಟ್ಟಗಳ 11 ಜಿಲ್ಲೆಗಳಲ್ಲಿ 250 ಮನೆಗಳು ಇರುವ ಕುಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಈ ಬಗ್ಗೆ ಯೋಜನಾ ಆಯೋಗ ಹಾಗೂ ಹಣಕಾಸು ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಯಾವ ಯೋಜನೆಗೆ ಎಷ್ಟು ಅನುದಾನ
ಪ್ರಧಾನಮಂತ್ರಿಗ್ರಾಮೀಣ ಸಡಕ್ ಯೋಜನೆ ರೂ.1,000 ಕೋಟಿ
ಉದ್ಯೋಗ ಖಾತ್ರಿ ಯೋಜನೆ ರೂ.2,133 ಕೋಟಿ
ಇಂದಿರಾ ಆವಾಸ್ ಯೋಜನೆ ರೂ.27 ಕೋಟಿ
ಜಲಾನಯನ ಅಭಿವೃದ್ಧಿ ಯೋಜನೆ ರೂ.278 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.