ಭಟ್ಕಳ: ಉದ್ಯೋಗ ಸೃಷ್ಟಿಗೆ ಮತ್ತು ಲಭ್ಯತೆಗೆ ಸದ್ಯದ ಪರಿಸ್ಥಿತಿಯಲ್ಲಿ ಭಾರತ ದೇಶಕ್ಕಿಂತ ಸಂಪದ್ಬರಿತ ದೇಶ ಮತ್ತೊಂದಿಲ್ಲ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹ್ಮದ್ ಮೊಹ್ಸಿನ್ ಹೇಳಿದರು.

ಇಲ್ಲಿನ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಕಂಪ್ಯೂಟರ್ ಅಪ್ಲಿಕೇಶನ್ ಸಂಸ್ಥೆಯಲ್ಲಿ ಈಚೆಗೆ ನಡೆದ 16ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಯಶಸ್ಸು ಎನ್ನುವುದು ಶ್ರದ್ದೆ ಮತ್ತು ಪ್ರಾಮಾಣಕತೆ ಮೇಲೆ ನಿಂತಿದೆ ಎಂದು ಹೇಳಿದ ಅವರು ಯಾವುದೇ ಉದ್ಯೋಗವಿರಲಿ, ಅದನ್ನು ಮಾಡುವಲ್ಲಿ ಪ್ರೀತಿ, ಶ್ರದ್ಧೆ ಇರಲಿ ಎಂದರು.

ಬೆಳಗಾವಿ ಜಿಲ್ಲಾ ನ್ಯಾಯಾಧೀಶ ರವಿ ಎಂ.ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾನೂನಿನ ತಿಳುವಳಿಕೆ ಅತೀ ಅಗತ್ಯ. ಶಿಕ್ಷಣ ಸಂಸ್ಥೆಗಳು ಆಗಾಗ ಕಾನೂನು ತಿಳಿವಳಿಕೆ ಬಗ್ಗೆ ಕಾರ್ಯಾಗಾರ ಏರ್ಪಡಿಸುವಂತಾಗಬೇಕು ಎಂದರು.

ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಶೌಕತ್ ಅಜೀಮ್ ಮಾತನಾಡಿ, ಶಿಕ್ಷಣವು ಪ್ರತಿಯೋರ್ವರ ಬದುಕಿನಲ್ಲಿ ಶಿಸ್ತು, ಸಂಯಮವನ್ನು ಮೂಡಿಸುತ್ತದೆ, ಜಗತ್ತು ವಿಶಾಲವಾಗಿದ್ದು ವಿದ್ಯಾರ್ಥಿಗಳು ತಮಗೆ ಬೇಕಾದಂತೆ ಉತ್ತಮ ಭವಿಷ್ಯ ರೂಪಿಸಲು ವಿಪುಲ ಅವಕಾಶಗಳಿವೆ ಎಂದರು.

ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಕಾಶೀಂಜಿ ಅನ್ಸಾರ್ ಅಧ್ಯಕ್ಷತೆ ವಹಿಸಿದ್ದರು. ಇಸ್ಮಾಯಿಲ್ ಸಿದ್ದಿಕ್ಡಾ.ಸೈಯದ್ ಸಲೀಮ್ ಮುಂತಾದವರು ಉಪಸ್ಥಿತರಿದ್ದರು.

ಪ್ರಾಚಾರ್ಯ ಜಾಫ್ರುಲ್ಲಾ ಕೊಕಟ್ನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಮೊಹಸೀನ್ ಕೆ ಸ್ವಾಗತಿಸಿದರು. ಪ್ರೊ.ಅಫ್ತಾಬ್ ಕಮ್ರಿ ವಂದಿಸಿದರು. ಪಿ.ಡಿ.ಮೋಹನ ಮೇಸ್ತ ಬಹುಮಾನ ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.