ಶನಿವಾರ, ಮೇ 15, 2021
24 °C

ಉನ್ನತ ಹುದ್ದೆಗಳಿಗೂ ಹೋರಾಡಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತ್ತೀಚಿಗೆ ಕನ್ನಡ ಪ್ರಾಧಿಕಾರ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, ಎಚ್.ಎ.ಎಲ್. `ಸಿ~ ದರ್ಜೆ ಮತ್ತು `ಡಿ~ ದರ್ಜೆ ನೌಕರಿಗೆ ಕನ್ನಡಿಗರನ್ನೇ ಹೆಚ್ಚಾಗಿ ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಬೇಕೆಂದು ತೀರ್ಮಾನ ಕೈಗೊಂಡಿರುವುದು ಸಂತಸ. ಇದರಿಂದ ಕನ್ನಡಿಗರು ಕೇಂದ್ರ ಸರ್ಕಾರದ ಆಡಳಿತದಲ್ಲಿ ಉದ್ಯೋಗಾವಕಾಶ ಪಡೆದಂತಾಗಿರುತ್ತದೆ.ಆದರೆ ಕನ್ನಡಿಗರು `ಸಿ~ ಮತ್ತು `ಡಿ~ ದರ್ಜೆ ನೌಕರಿಗೆ ಮಾತ್ರ ಸೀಮಿತವೇ? ಖಾಸಗಿ ಕಂಪೆನಿಗಳಲ್ಲಿ ಮತ್ತು ಇತರೆ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿ ವರ್ಗಕ್ಕೆ ನೇಮಕಾತಿ ಹೊಂದಲು ಕನ್ನಡಿಗರಿಗೆ ಅರ್ಹತೆ ಇಲ್ಲವೆ? `ಮುಖ್ಯಮಂತ್ರಿ~ ಚಂದ್ರು ಅವರು ಇತರೆ ಇಲಾಖೆಗಳಿಗೂ ಪತ್ರ ಬರೆದು ಕನ್ನಡಿಗರ ಪರವಾಗಿ ಧ್ವನಿ ಎತ್ತಬೇಕು.ಆದರೆ, ಭಾರತೀಯ ರೈಲ್ವೆ, ರಾಷ್ಟ್ರೀಕೃತ ಬ್ಯಾಂಕ್‌ಗಳಾದ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಭಾರತೀಯ ಸ್ಟೇಟ್ ಬ್ಯಾಂಕ್-ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ನಮ್ಮ ನೆಲದಲ್ಲಿರುವ ಪ್ರಮುಖ ಕೈಗಾರಿಕೆಗಳಾದ ಬಿ.ಇ.ಎಲ್, ಎಚ್.ಎ.ಎಲ್, ಬಿ.ಇ.ಎಂ.ಎಲ್, ಎಚ್.ಎಂ.ಟಿ, ಬಿ.ಎಚ್.ಇ.ಎಲ್, ಎನ್.ಎ.ಎಲ್, ಇಸ್ರೋಗಳಲ್ಲಿಯೂ ಉನ್ನತ ಅಧಿಕಾರಿಗಳ ಮತ್ತು ಪರೀಕ್ಷಾ ದೆಸೆಯಲ್ಲಿರುವ ಅಧಿಕಾರಿಗಳ ಹುದ್ದೆಗಳಲ್ಲಿಯೂ ಸಹ ಕನ್ನಡಿಗರನ್ನು ಏಕೆ ಪರಿಗಣಿಸಬಾರದು?

 

ಈ ಬಗ್ಗೆ ಕನ್ನಡಪರ ಸಂಘಟನೆಗಳು ಮತ್ತು ಕನ್ನಡ ಪ್ರಾಧಿಕಾರ ತಮ್ಮ ಹೋರಾಟ ಹಾಗೂ ಬೇಡಿಕೆಗಳನ್ನು ಮುಂದಿಟ್ಟು ಕನ್ನಡಿಗರಿಗೆ ಎಲ್ಲ ಕಡೆಗಳಲ್ಲಿಯೂ ಉದ್ಯೋಗಕ್ಕೆ ನೇಮಕಾತಿ ಹೊಂದಲು ಅರ್ಹತೆಯನ್ನು ದೊರಕಿಸಿಕೊಡುವ ಪ್ರಯತ್ನ ಮಾಡಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.