ಗುರುವಾರ , ಮೇ 26, 2022
30 °C

ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನೈ(ಐಎಎನ್‌ಎಸ್): ಭಾರತದ ಹವಾಮಾನ ಹಾಗೂ ವಾತಾವರಣದಲ್ಲಾಗುವ ಬದಲಾವಣೆಯ ಕುರಿತ ಅಧ್ಯಯನಕ್ಕೆ ಅನೂಕೂಲವಾಗಲೆಂದು ಸಿದ್ಧಪಡಿಸಿರುವ ಉಪಗ್ರಹವು, ಬುಧವಾರ ಉಡಾವಣೆಗೆ ಸಜ್ಜಾಗಿದ್ದು ಅದರ  ಕ್ಷಣಗಣನೆ ಆರಂಭವಾಗಿದೆ.ಉಡಾವಣೆಯ ಕ್ಷಣಗಣನೆ ಸೋಮವಾರ ಬೆಳಿಗ್ಗೆ 9 ಗಂಟೆಗೆ ಶುರುವಾಗಿದ್ದು, ಉಪಗ್ರಹದ ತಾಂತ್ರಿಕ ಅಂಶಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಇಸ್ರೊ ಅಧಿಕಾರಿ ತಿಳಿಸಿದ್ದಾರೆ.ಈ ಉಪಗ್ರಹವು ಬುಧವಾರ ಬೆಳಿಗ್ಗೆ 11ಗಂಟೆಗೆ ಇಲ್ಲಿಂದ 80 ಕಿ.ಮಿ. ದೂರದಲ್ಲಿರುವ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ.ಭಾರತ ಮತ್ತು ಫ್ರಾನ್ಸ್ ಸಹಭಾಗಿತ್ವದಲ್ಲಿ ರೂಪಿಸಲಾಗಿರುವ ಈ ಉಪಗ್ರಹವು ವಾತಾವರಣದಲ್ಲಾಗುವ ಬದಲಾವಣೆಗಳ ಕುರಿತು ಅಧ್ಯಯನ ನಡೆಸಲು ನೆರವಾಗುತ್ತದೆ ಮತ್ತು ಅಂಥ ಉಪಗ್ರಹವನ್ನು ಉಡಾವಣೆ ಮಾಡುವಲ್ಲಿ ಪ್ರಪಂಚದಲ್ಲೇ ಭಾರತ ಎರಡನೇ ರಾಷ್ಟ್ರವಾಗಿದೆ.ಈ ಉಪಗ್ರಹದ ಉಡಾವಣೆಗೆ ಇಸ್ರೊ ಸಂಸ್ಥೆಯು 90 ಕೋಟಿ ರೂಪಾಯಿ ಭರಿಸಲಿದ್ದರೆ, ಫ್ರಾನ್ಸ್ ದೇಶದ ಸ್ಪೇಸ್ ಏಜೆನ್ಸಿಯು ಸಿಎನ್ಇಎಸ್ 300 ಕೋಟಿ ರೂಗಳನ್ನು ಭರಿಸಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.