ಬುಧವಾರ, ಜೂನ್ 23, 2021
28 °C

ಉಪಚುನಾವಣೆ ಪ್ರಚಾರ: ಮುಖ್ಯಮಂತ್ರಿ ಸದಾನಂದಗೌಡ ಇಂಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಪಚುನಾವಣೆ ಪ್ರಚಾರ: ಮುಖ್ಯಮಂತ್ರಿ ಸದಾನಂದಗೌಡ ಇಂಗಿತ

ಉಡುಪಿ: `ನಮಗೆ ದೊಡ್ಡ ಸಚಿವರ, ನಾಯಕರ ಪ್ರಚಾರ ಬೇಕಿಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿದರು.ಉಡುಪಿ-ಚಿಕ್ಕಮಗಳೂರು ಉಪ ಚುನಾವಣೆ ಪ್ರಚಾರ ನಿಮಿತ್ತ ಉಡುಪಿಗೆ ಆಗಮಿಸಿದ ಅವರು ಪಕ್ಷದ ಕಚೇರಿ ಬಳಿ ಗುರುವಾರ ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು.`ಈಗ ಪ್ರಚಾರಕ್ಕೆ ಬಂದಿರುವವರು, ಉಡುಪಿ-ಚಿಕ್ಕಮಗಳೂರು ಸರಿಯಾಗಿ ಗೊತ್ತಿರುವ ಕಾರ್ಯಕರ್ತರೇ ಚುನಾವಣೆ ಗೆಲ್ಲಿಸಿಕೊಡಲು ಸಾಕು~ ಎಂದು ಯಡಿಯೂರಪ್ಪ ಬಾರದೇ ಇರುವ ಬಗ್ಗೆ ಪ್ರತಿಕ್ರಿಯಿಸಿದರು.`ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಕೇಂದ್ರ ಸಚಿವರು, ಕಾಂಗ್ರೆಸ್ಸಿಗರು ಬಂದಿದ್ದಾರೆ ನಿಜ. ಆದರೆ ಚಿಕ್ಕಮಗಳೂರು-ಉಡುಪಿ ಅಂದರೆ ಏನೆಂದೇ ಗೊತ್ತಿಲ್ಲದವರು ಬಂದು ಮಾಡುವುದಾದರೂ ಏನು? ನಮ್ಮ ಕಾರ್ಯಕರ್ತರಿಗೆ ಈ ಕ್ಷೇತ್ರದ ಎಲ್ಲ ವಿಚಾರ ಗೊತ್ತಿದೆ~ ಎಂದು ಕಾಂಗ್ರೆಸ್ ಪ್ರಚಾರ ವೈಖರಿಗೆ ತಿರುಗೇಟು ನೀಡಿದರು.`ಯಡಿಯೂರಪ್ಪ ಅವರು ಈವರೆಗೂ ಪ್ರಚಾರಕ್ಕೆ ಬಂದಿಲ್ಲ. ಚುನಾವಣೆ ಮೇಲೆ ಏನಾದರೂ ಪರಿಣಾಮವಾಗುವುದೇ?~ ಎಂಬ ಪ್ರಶ್ನೆಗೆ, `ಇನ್ನೂ ಎರಡು ದಿನ ಸಮಯವಿದೆ. ಕಾದು ನೋಡಿ~ ಎಂದು ಚುಟುಕಾಗಿ ಅವರು ಪ್ರತಿಕ್ರಿಯಿಸಿದರು.`ಕಳೆದ ಚುನಾವಣೆಯಲ್ಲಿ ನಾನು 27 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆ. ಈ ಬಾರಿಯ ಸುನೀಲ್ ಕುಮಾರ್ ಅದಕ್ಕಿಂತ 4 ಪಟ್ಟು ಹೆಚ್ಚು ಅಂತರದಿಂದ ಗೆಲ್ಲುತ್ತಾರೆ~ ಎಂದು ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.ಇನ್ನೊಂದೆಡೆ ಸುದ್ದಿಗಾರರ ಜೊತೆ ಮಾತನಾಡಿದ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು, `ಯಡಿಯೂರಪ್ಪ ಬಾರದೇ ಇದ್ದರೂ ನಾವು ಅಪೇಕ್ಷೆಪಟ್ಟ ಸಚಿವರು, ಶಾಸಕರು ಪ್ರಚಾರ ನಡೆಸಿದ್ದಾರೆ. ಪ್ರಚಾರಕ್ಕೆ ಬರಲು ಆಗುವುದಿಲ್ಲವೆಂದು ಮೊದಲೇ ಯಡಿಯೂರಪ್ಪ ತಿಳಿಸಿದ್ದರು~ ಎಂದು ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.