ಮಂಗಳವಾರ, ಜೂನ್ 22, 2021
27 °C

ಉಪವಾಸ-ಯೋಗ, ನಮಾಜ್...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಕೇವಲ ಆಟ- ಸಾಮೂಹಿಕ ವಿವಾಹಗಳಿಗಷ್ಟೇ ಸೀಮಿತವಾಗಿದ್ದ ವಿದ್ಯಾದಾನ ಸಮಿತಿ ಮೈದಾನ ಕಳೆದ ಎರಡು ದಿನಗಳಿಂದ ಹೊಸದೊಂದು `ಪರ್ವ~ಕ್ಕೆ ವೇದಿಕೆಯಾಗಿತ್ತು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆಗ್ರಹಿಸಿ ಮಾಜಿ ಸಚಿವ ಬಿ.ಶ್ರೀರಾಮುಲು ಕೈಗೊಂಡಿದ್ದ ಉಪವಾಸ ಕೇವಲ ಉಪವಾಸವಾಗಿರಲಿಲ್ಲ. ಅಲ್ಲಿ ವಿವಿಧ ವಿಷಯಗಳು ಸಮ್ಮಿಳಿತಗೊಂಡಿದ್ದವು.ಯೋಗ ಪ್ರದರ್ಶನ

ಮುಂಜಾನೆ ಆರು ಗಂಟೆಗೆ ವೇದಿಕೆಯಲ್ಲಿ ಯೋಗಾ ಪ್ರದರ್ಶನ ಆರಂಭವಾಯಿತು. ಋಷಿಕೇಶದ ವಚನಾನಂದ ಸ್ವಾಮೀಜಿ ಅವರು ಅನೇಕ ಆಸನಗಳನ್ನು ಮಾಡಿ ತೋರಿಸಿದರು. ವೇದಿಕೆಯ ಮುಂಭಾಗದಲ್ಲಿ ನೆರೆದಿದ್ದ ಬಿ.ಶ್ರೀರಾಮುಲು ಅಭಿಮಾನಿಗಳು ಸ್ವಾಮೀಜಿ ಹೇಳಿಕೊಟ್ಟಂತೆ ಮಾಡಿ ತೋರಿಸಿದರು.ಮಧುಮೇಹ ಇರುವವರು ಯಾವ ರೀತಿ ಮುನ್ನಚ್ಚರಿಕೆ ಕ್ರಮ ಅನುಸರಿಸ ಬೇಕು. ವ್ಯಾಯಾಮ ಹೇಗೆ ಮಾಡ ಬೇಕು. ಆಹಾರ ಪದ್ಧತಿ, ಜೀವನಶೈಲಿ ಹೇಗಿರಬೇಕು ಎಂದು ಸ್ವಾಮೀಜಿ ತಿಳಿಸಿಕೊಟ್ಟರಲ್ಲದೇ ಮಧುಮೇಹಿಗಳಿಗೆ ಅನುಕೂಲವಾಗಿ ರುವ ಆಸನಗಳನ್ನು ಪ್ರದರ್ಶಿಸಿದರು.ಇದಲ್ಲದೇ ಅಸ್ತಮಾ ರೋಗಿಗಳು ಯಾವ ರೀತಿ ಜೀವನಶೈಲಿ- ಆಹಾರಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಹೇಳಿಕೊಟ್ಟರು. ಬಳಿಕ, ಮುಂಜಾನೆಯಿಂದಲೇ ಮನಸ್ಸು ಪ್ರಫುಲ್ಲವಾಗಿರಲು ನಮ್ಮ ಅಂಗಾಂಗಳಿಗೆ ಸಣ್ಣ ಪ್ರಮಾಣದ ವ್ಯಾಯಾಮ ನೀಡಬೇಕು ಎಂದು ಕಿವಿಮಾತನ್ನು ಹೇಳಿದರು.ಸುಮಾರು ಒಂದು ತಾಸಿಗೂ ಅಧಿಕ ಸಮಯ ಯೋಗಾಸನ ಸಾಂಗೋಪ ವಾಗಿ ನಡೆಯಿತು. ಇದಾದ ಬಳಿಕ ಬಳ್ಳಾರಿಯ ಕೆಲ ಮಹಿಳೆಯರು `ಹನುಮಾನ ಚಾಲೀಸ್~ಪಠಿಸಿದರು.ಮತ್ತೆ ಮಧ್ಯಾಹ್ನದವರೆಗೂ ವಿವಿಧ ಮುಖಂಡರ ಭಾಷಣ ನಡೆಯಿತು. ಮಧ್ಯ-ಮಧ್ಯ ಹಾಡು-ಕುಣಿತ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ವೇದಿಕೆಯಲ್ಲೇ ನಮಾಜ್

ಶ್ರೀರಾಮುಲುವಿಗೆ ಬೆಂಬಲ ನೀಡಿ ಉಪವಾಸ ಕಾರ್ಯಕ್ರಮದಲ್ಲಿ ಭಾಗವ ಹಿಸಿದ್ದ ಮುಸ್ಲಿಂ ಬಾಂಧವರು ವೇದಿಕೆ ಮುಂಭಾಗದಲ್ಲಿಯೇ ಮಧ್ಯಾಹ್ನ ದ ಪ್ರಾರ್ಥನೆ ಸಲ್ಲಿಸಿದರು.ಕೊಲ್ಕತ್ತಾದಿಂದ ಬಂದಿದ್ದ ಉಲ್ಮಾ ಫೆಡರೇಶನ್ ಅಧ್ಯಕ್ಷ ಅಬು ತಾಲಿಬ್-ಎ-ರೆಹಮಾನಿ ನೇತೃತ್ವದಲ್ಲಿ  ಅನೇಕ ಮುಸ್ಲಿಂ ಬಾಂಧವರು ಪ್ರಾರ್ಥನೆ ಮಾಡಿದರು.ಕುತೂಹಲ ಮೂಡಿಸಿದ ಹೊರಟ್ಟಿ ಆಗಮನ

ಶ್ರೀರಾಮುಲು ಅವರ ಉಪವಾಸಕ್ಕೆ ಬೆಂಬಲ ವ್ಯಕ್ತಪಡಿಸಲು ದೂರದ ಬೆಂಗಳೂರಿನಿಂದ ನೇರವಾಗಿ ಗದುಗಿಗೆ ಬಂದ ಮಾಜಿ ಶಿಕ್ಷಣ ಸಚಿವ ಬಸವರಾಜಹೊರಟ್ಟಿಯ ನಡೆ ನೆರೆದಿದ್ದ ಸಭಿಕರು ಹಾಗೂ ಶ್ರೀರಾಮುಲು ಬೆಂಬಲಿಗರಲ್ಲಿ ಕುತೂಹಲ ಹಾಗೂ ಆಶ್ವರ್ಯ ಮೂಡಿಸಿತು.ಪ್ರಾದೇಶಿಕ ಪಕ್ಷಗಳು ಒಂದಾಗಿ ರಾಷ್ಟ್ರೀಯ ಪಕ್ಷಗಳನ್ನು ಎದುರಿಸೋಣ ಎನ್ನುವ ಸಂದೇಶವನ್ನು `ಗೌಡ~ರಿಂದ ಹೊತ್ತು ತಂದಿದ್ದರೋ? ಅಥವಾ ಶ್ರೀರಾಮುಲು ಅವರನ್ನು ಜೆಡಿಎಸ್‌ಗೆ ಆಹ್ವಾನಿಸಲು `ರಾಯಭಾರ~ ಕೆಲಸ ಮಾಡಿದ್ದರೋ? ಎನ್ನುವ ವಿಷಯ ಅಲ್ಲಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿ- ಹರಿದಾಡಿ ಕೆಲ ಹೊತ್ತು ಸಂಚಲನ ಮೂಡಿಸಿತುಸುಮಾರು ಅರ್ಧತಾಸು ವೇದಿಕೆಯ ಮೇಲೆ ಕುಳಿತ್ತಿದ್ದ ಹೊರಟ್ಟಿ  ಅವರು ಶ್ರೀರಾಮುಲು ಅವರ ಹೆಗಲಮೇಲೆ ಕೈ ಹಾಕಿಕೊಂಡು ಬಹಳ ಖುಷಿಯಿಂದಲೇ ಮಾತನಾಡುತ್ತಿದ್ದ ದೃಶ್ಯವೂ ಕಂಡು ಬಂತು.`ಬೆಂಬಲ ನೀಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯವಾಗಿ ಹೋರಾಟ ನಡೆಸುತ್ತಿರುವುದಿಂದ ಶ್ರೀರಾಮುಲು ಅವರಿಗೆ ಬೆಂಬಲ ನೀಡಿದ್ದೇನೆ~ ಎಂದು ಹೊರಟ್ಟಿ ಸ್ಪಷ್ಟನೆಯನ್ನೂ ನೀಡಿದರು.ದುನಿಯಾ ರಶ್ಮಿಗೆ ಉಧೋ-ಉಧೋ

ಮಂಗಳವಾರ ರಕ್ಷಿತಾ ಅವರ ಕ್ರೇಜಿಗೆ ಒಳಗಾಗಿದ್ದ ಜನರು ಬುಧವಾರ `ದುನಿಯಾ~ ರಶ್ಮಿಗೆ ಉಧೋ-ಉಧೋ ಎಂದರು.ಬಸವರಾಜ ಹೊರಟ್ಟಿ ಅವರ ಜೊತೆಯಲ್ಲಿ ಬಂದ ರಶ್ಮಿಯನ್ನು ಕಂಡದ್ದೆ ಜನರು ಸಂಭ್ರಮದಿಂದ ಕೇಕೆ ಹಾಕಿದ್ದರು.  ಎಲ್ಲರೂ ಕೈ ಬೀಸ ತೊಡಗಿದರು. ಜನರಿಂದ ಈ ಪರಿ ಬೆಂಬಲ ಸಿಕ್ಕುತ್ತಿ ರುವುದನ್ನು ಕಂಡ ರಶ್ಮಿ ಕೂಡ ಜನರತ್ತ ಕೈ ಬೀಸಿ ತಾವು ಸಂಭ್ರಮಿಸಿದ್ದು ಕಾರ್ಯಕ್ರಮದಲ್ಲಿ ಕಂಡು ಬಂತು. ಇದರಿಂದ ಎಲ್ಲರಿಗೂ ಖುಷಿ ಆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.