ಧಾರವಾಡ: ಯೋಗಗುರು ಬಾಬಾ ರಾಮದೇವ್ ಅವರು ನಡೆಸುತ್ತಿರುವ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಬೆಂಬಲವಾಗಿ ಇಲ್ಲಿನ ಕೋರ್ಟ್ ಸರ್ಕಲ್ ಸಮೀಪ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನಿ ಟ್ರಸ್ಟ್ ಸದಸ್ಯರು ನಡೆಸಿರುವ ಆಮರಣ ಉಪವಾಸ ಸತ್ಯಾಗ್ರಹ ಮುಂದುವರಿದೆ.

ಬಾಬಾ ರಾಮದೇವ್ ಅವರ ಮೇಲೆ ದೆಹಲಿಯ ರಾಮಲೀಲಾ ಮೈದಾನ ದಲ್ಲಿ ಪೊಲೀಸರು ನಡೆಸಿದ ದೌರ್ಜನ್ಯ ಖಂಡಿಸಿ ಸಮಿತಿ ನೇತೃತ್ವದಲ್ಲಿ ಸೋಮವಾರ ಕರಾಳ ದಿನವನ್ನು ಆಚರಿಸಲಾಯಿತು. ಸಮಿತಿ ಸಂಯೋಜಕ ಬಿ.ಡಿ. ಹಿರೇಮಠ, ಶಂಕರ ದೊಡಮನಿ, ಪರಬತ್ ಸಿಂಗ್, ಎಸ್.ಜಿ.ಚಿಕ್ಕಮಠ ಅವರು ಕೈಗೊಂಡಿ ರುವ ಆಮರಣ ಉಪವಾಸ ಸತ್ಯಾಗ್ರಹ ಸ್ಥಳದಿಂದ ಪಾದಯಾತ್ರೆ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಎಂ.ಡಿ.ಪಾಟೀಲ, ಪಾಲಿಕೆ ಸದಸ್ಯ ಶಿವು ಹಿರೇಮಠ, ಎಸ್.ಎಂ.ಕಬ್ಬಿನಕಂತಿಮಠ, ತಾ.ಭ.ಚವ್ಹಾಣ ಪಾದಯಾತ್ರೆ ನೇತೃತ್ವ ವಹಿಸಿದ್ದರು. ಕಲಾವಿದ ಮಂಜುನಾಥ ಹಿರೇಮಠ ಬಾಬಾ ರಾಮದೇವ ಅವರ ವೇಷಧಾರಿಯಾಗಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಸಂಭಾಜಿರಾವ್ ಘೋಡಸೆ, ಎ.ಬಿ.ಇಟಗಿ, ಎಫ್.ಬಿ.ಹಬೀಬ, ಚಂದ್ರಶೇಖರ ಉಳ್ಳೇಗಡ್ಡಿ, ಗುರು ಹಿರೇಮಠ, ನಿತಿನ ರಾಮದುರ್ಗ, ಬಸವರಾಜ ಸೀರಿ, ರಾಘವೇಂದ್ರ ಗುತ್ತೇದಾರ, ಗುರುರಾಜ ಕೊಪ್ಪದ, ಹನುಮಂತ ಕೊಡಬಾಳ ಮತ್ತಿತರರು ಭಾಗವಹಿಸಿದ್ದರು.

ಜಾತ್ಯತೀತ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಚ್.ಕೋನರಡ್ಡಿ, ರಾಜಣ್ಣ ಕೊರವಿ, ಅಲ್ತಾಫ್ ಕಿತ್ತೂರ, ವಿಜಯಲಕ್ಷ್ಮೀ ಲೂತಿಮಠ, ಸರೋಜಾ ಪಾಟೀಲ, ಸುರೇಶ ಹಿರೇಮಠ, ಸಂಯುಕ್ತ ಜನತಾದಳದ ಕಾರ್ಯಕರ್ತರು ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು.

ಬಿಜೆಪಿ ಪ್ರತಿಭಟನೆ
ಬಿಜೆಪಿ ಭಾನುವಾರ ರಾತ್ರಿಯಿಂದ ನಡೆಸಿದ ಆಹೋರಾತ್ರಿ ಪ್ರತಿಭಟನೆ ಸೋಮವಾರ ಮುಕ್ತಾಯವಾಯಿತು. ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಷಣ್ಮುಖಪ್ಪ ಗುರಿಕಾರ ನೇತೃತ್ವದಲ್ಲಿ ವಿವೇಕಾನಂದ ವೃತ್ತದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಮಂತ್ರಿಗಳ ಪ್ರತಿಕೃತಿ ದಹನ ಮಾಡಲಾಯಿತು.

ಮೇಯರ್ ಪೂರ್ಣಾ ಪಾಟೀಲ, ಉಪಮೇಯರ್ ನಾರಾಯಣ ಜರತಾರ ಘರ, ಸುರೇಶ ಬೇದರೆ, ಶಿವು ಹಿರೇಮಠ, ಸಂಜಯ ಕಪಟಕರ, ಪ್ರಕಾಶ ಗೋಡ ಬೋಲೆ, ವಿಜಯಾನಂದ ಶೆಟ್ಟಿ, ಅಶೋಕ ನಿಡವಣಿ, ಗಾಯತ್ರಿ ಕನವಳ್ಳಿ, ರಾಜೇಶ್ವರಿ ಜಡಿ, ಶಿವಾನಂದ ಮುತ್ತಣ್ಣ ವರ, ಈರಣ್ಣ ಹಪ್ಪಳಿ, ಮೋಹನ ರಾಮ ದುರ್ಗ, ಚಂದ್ರು ನೀಲಗಾರ, ಸಿದ್ದು ಕಲ್ಯಾಣಶೆಟ್ಟಿ, ಈರೇಶ ಅಂಚಟಗೇರಿ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.