ಭಾನುವಾರ, ಜೂನ್ 13, 2021
26 °C

ಉಪ ಪ್ರಧಾನಿ ಆಕಾಂಕ್ಷಿ ಅಲ್ಲ: ಜೇಟ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ‘ಎನ್ ಡಿಎ ಅಧಿಕಾರಕ್ಕೆ ಬಂದರೆ ಅರುಣ್ ಜೇಟ್ಲಿ ಉಪ ಪ್ರಧಾನಿಯಾಗುವ ರು' ಎಂಬುದಾಗಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ನೀಡಿರುವ ಹೇಳಿಕೆಯನ್ನು ತಳ್ಳಿ ಹಾಕಿರುವ ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರು, ತಾನು ಯಾವುದೇ ಸ್ಥಾನಕ್ಕಾಗಿ ಕಾದಿಲ್ಲ ಎಂದು ಶನಿವಾರ ಸ್ಪಷ್ಟಪಡಿಸಿದರು.ಪ್ರಚಾರಕಾಲದಲ್ಲಿ ಆರೋಪ, ಟೀಕೆಗಳು ಕೇಳಿ ಬಂದಿವೆ. ನಾನು ಆ ಯಾವುದೇ ಸ್ಥಾನದ ನಿರೀಕ್ಷೆಯಲ್ಲಿಲ್ಲ. ಈ ಬಗ್ಗೆ ಭರವಸೆ ನೀಡುತ್ತೇನೆ ಎಂದು ಜೇಟ್ಲಿ ತಿಳಿಸಿದರು.ಅಮೃತಸರದಲ್ಲಿ ಶುಕ್ರವಾರ ನಡೆದ ರ‍್ಯಾಲಿಯಲ್ಲಿ ಪ್ರಕಾಶ್ ಸಿಂಗ್ ಬಾದಲ್ ಅವರು, ‘ಎನ್ ಡಿಎ ಅಧಿಕಾರಕ್ಕೆ ಬಂದರೆ ಜೇಟ್ಲಿ ಅವರು ಉಪ ಪ್ರಧಾನಿ ಅಥವಾ ಹಣಕಾಸು ಸಚಿವರಾಗಲಿದ್ದಾರೆ’ ಎಂದು ಹೇಳಿಕೆ ನೀಡಿದ್ದರು.ಪ್ರಕಾಶ್ ಸಿಂಗ್ ಬಾದಲ್ ಅವರ ಆಲೋಚನೆಯಲ್ಲಿರುವುದು ನ್ಯಾಯ ಸಮ್ಮತ ಇರಬಹುದು. ಆದರೆ, ನಾನು ಆ ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಅಮೃತಸರ ಮತ್ತು ಪಂಜಾಬ್ ನಲ್ಲಿ ಉತ್ತಮ ಧ್ವನಿಯ ಅಗತ್ಯವನ್ನು ಅಲ್ಲಿನ ಜನರು ನಿರೀಕ್ಷಿಸಿದ್ದಾರೆ ಎಂದು ಜೇಟ್ಲಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.