ಬೆಂಗಳೂರು: ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಉತ್ತರ ಕರ್ನಾಟಕ ಭಾಗ ಕಾದ ಬಾಣಲೆಯಂತಾಗುವುದು ಸಹಜ. ಆದರೆ, ಈ ವರ್ಷ ಮಾರ್ಚ್ ತಿಂಗಳಿನಲ್ಲೇ ರಾಜಧಾನಿ ಹಾಗೂ ಕರಾವಳಿಯಲ್ಲಿ ಕೆಂಡದಂತಹ ಬಿಸಿಲು ಕಾಣಿಸಿಕೊಂಡಿದೆ.

ಸಾಮಾನ್ಯವಾಗಿ ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಬಿಸಿಲಿನ ತಾಪ ಹೆಚ್ಚುತ್ತದೆ. ಆದರೆ, ಈ ಬಾರಿ ಮಾರ್ಚ್ ಮೊದಲನೇ ವಾರದಿಂದಲೇ ಏರುತ್ತಿರುವ ಬಿಸಿಲಿನ ಕಾವು ಸರಾಸರಿ ಉಷ್ಣಾಂಶವನ್ನೇ ಮೀರಿದೆ. ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ, ‘ಪ್ರಾಕೃತಿಕ ಅಸಮತೋಲನದಿಂದಾಗಿ ಬೇಸಿಗೆಯ ತಾಪಮಾನ ಈ ಬಾರಿ ಹೆಚ್ಚಾಗಿದ್ದು, ಮಹಾನಗರಗಳಲ್ಲಿ ಸರಾಸರಿಗಿಂತಲೂ ಹೆಚ್ಚಿನ ಉಷ್ಣಾಂಶ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ’ ಎಂದು ಮಾಹಿತಿ ನೀಡಿದರು.

‘ಭೂಮಟ್ಟದಿಂದಲೇ ಉಷ್ಣಾಂಶ ಏರಿಕೆಯಾಗುವುದರಿಂದ ತಾಪಮಾನ ಹೆಚ್ಚುತ್ತದೆ. ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವ ಮಾರುತಗಳಲ್ಲಿ ವಾಯುಭಾರ ಕುಸಿತ ಉಂಟಾದಾಗ ಉಷ್ಣಾಂಶವು ಇಳಿಕೆಯಾಗುವ ಸಾಧ್ಯತೆಯಿದೆ’ ಎಂದು ಹೇಳಿದರು.

ಏಪ್ರಿಲ್ ಮಧ್ಯಭಾಗದಲ್ಲಿ ಹೆಚ್ಚಾಗುವ ಸಾಧ್ಯತೆ: ‘ಏಪ್ರಿಲ್ ತಿಂಗಳಿನ ಮಧ್ಯಭಾಗದಲ್ಲಿ ಉತ್ತರ ಕರ್ನಾಟಕದ ಬೀದರ್, ಯಾದಗಿರಿ, ಗುಲ್ಬರ್ಗ, ರಾಯಚೂರು, ಬೆಳಗಾವಿ ಸೇರಿದಂತೆ ಹಲವೆಡೆ ಉಷ್ಣಮಾರುತದ ಪ್ರಭಾವ ಹೆಚ್ಚಾಗಬಹುದು’ ಎಂದು ಅವರು ಎಚ್ಚರಿಸಿದರು.

‘ಸಾಮಾನ್ಯವಾಗಿ ಈ ಭಾಗಗಳಲ್ಲಿ ಸರಾಸರಿ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್. ಆದರೆ, ಇದಕ್ಕಿಂತ 5 ರಿಂದ 6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಏರಿಕೆಯಾದಾಗ ಉಷ್ಣಗಾಳಿ ಬೀಸುತ್ತದೆ. ಅತಿಯಾದ ಬಿಸಿಗಾಳಿ ಬೀಸುವುದರಿಂದ ಸಾವು–ನೋವುಗಳಾಗಬಹುದು’ ಎಂದು ವಿಶ್ಲೇಷಿಸಿದರು.

‘ಪ್ರತಿ ಬಾರಿಯೂ ಉಷ್ಣ ಮಾರುತಗಳ ಪ್ರಭಾವವಿರುತ್ತದೆ. ಈ ಸಂದರ್ಭಗಳಲ್ಲಿ ಇಲಾಖೆಯು ಮುನ್ನಚ್ಚರಿಕೆಯ ಕ್ರಮಗಳನ್ನು ಅನುಸರಿಸುವಂತೆ ಸೂಚಿಸುತ್ತದೆ. ಈ ಬಾರಿ ಬೀಸುವ ಉಷ್ಣಾಂಶದ ಗಾಳಿ ಕಳೆದ ಬಾರಿಗಿಂತಲೂ ಪ್ರಭಾವಶಾಲಿ ಯಾಗಿರಲಿದೆ’ ಎಂದು ತಿಳಿಸಿದರು.

ಬಿಸಿಲು ಕಾದರೆ ಮಾತ್ರ ಉತ್ತಮ ಮಳೆ: ‘ಈಗ ಉಷ್ಣಾಂಶದಲ್ಲಿ ಏರಿಕೆಯಾಗಿದ್ದರೂ, ಇದು ಅನೈಸರ್ಗಿಕವಲ್ಲ. ಹತ್ತು ವರ್ಷಗಳಿಂದೀಚೆಗೆ ತಾಪಮಾನದಲ್ಲಿ ಸತತ ಏರಿಕೆ ಕಂಡುಬಂದಿದೆ. ಬೇಸಿಗೆಯಲ್ಲಿ ಭೂಮಿ ಚೆನ್ನಾಗಿ ಕಾದರೆ ಮಾತ್ರ ಉತ್ತಮ ಮಳೆಯನ್ನು ನಿರೀಕ್ಷಿಸಬಹುದು. ಬಿಸಿಲ ಝಳಕ್ಕೂ, ಉತ್ತಮ ಮಳೆಗೂ ಸಂಬಂಧವಿದೆ’ ಎಂದರು.

ಕಡಿಮೆಗೊಳ್ಳಲಿದೆ ಬಿಸಿಲ ಧಗೆ: ಕೃಷಿ ವಿಶ್ವವಿದ್ಯಾಲಯದ ಹವಾಮಾನ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಬಿ.ರಾಜೇಗೌಡ, ‘ಬೇಸಿಗೆ ಮಳೆಯು ಅವಧಿಗೆ ಮುನ್ನವೇ ಬಂದಿರುವುದರಿಂದ ಏರುತ್ತಿರುವ ಬಿಸಿಲಿನ ಕಾವು ಕುಸಿಯುವ ಸಾಧ್ಯತೆಯಿದೆ’ ಎಂದು ಅಭಿಪ್ರಾಯಪಟ್ಟರು.

‘ಸಾಮಾನ್ಯವಾಗಿ ಮಾರ್ಚ್ 15 ರಿಂದ ಮೇ ತಿಂಗಳ ಕೊನೆಯವರೆಗೆ ಬೇಸಿಗೆ ಮಳೆಯ (ಪೂರ್ವ ಮುಂಗಾರು) ಅವಧಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ಬಾರಿ ಫೆಬ್ರುವರಿ ಕೊನೆಯ ವಾರದಲ್ಲಿಯೇ ಬೇಸಿಗೆ ಮಳೆ ಆರಂಭಗೊಂಡಿರುವುದರಿಂದ ವಾತಾವರಣದಲ್ಲಿ ಉಷ್ಣಾಂಶ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.