ಬುಧವಾರ, ಜನವರಿ 22, 2020
28 °C

ಎಂ.ಎಫ್. ಹುಸೇನರ 'ಗಜಗಾಮಿನಿ' ಒಂದು ಸೋಲು: ನಾಸಿರುದ್ದೀನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): 'ದಂತಕತೆಯಾಗಿದ್ದ ಕಲಾವಿದ ದಿವಂಗತ ಎಂ.ಎಫ್. ಹುಸೇನ್ ಅವರ 'ಗಜಗಾಮಿನಿ' ಚಿತ್ರವನ್ನು ಅರ್ಥ ಮಾಡಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ, ಅದನ್ನು ನಿರ್ಮಿಸುತ್ತಿದ್ದಾಗ ತಬ್ಬಿಬ್ಬುಗೊಂಡ ಅನುಭವ ನನ್ನದಾಗಿತ್ತು' ಎಂದು ಗಜ ಗಾಮಿನಿ ಚಿತ್ರದ ಭಾಗವಾಗಿದ್ದ ಬಾಲಿವುಡ್ ನಟ ನಾಸಿರುದ್ದೀನ್ ಷಾ ಹೇಳಿದ್ದಾರೆ.'ಈ ಚಿತ್ರವನ್ನು ನೋಡುವಂತೆ ನಾನು ಯಾರಿಗೂ ಶಿಫಾರಸು ಮಾಡಲಾರೆ. ಹುಸೇನ್ ಸರ್ ಅವರು ಈ ಚಿತ್ರವನ್ನು ಮಾಡಬಹುದೇ ಎಂದು ಕೇಳಲು ನನ್ನ ಮನೆಗೆ ಬಂದಿದ್ದರು. ಇಲ್ಲ ಎಂದು ನಾನು ಹೇಗೆ ಹೇಳಲಿ? ಅವರು ಏನೇ ಮಾಡಿದರೂ ಅದು ಪಾಲ್ಗೊಳ್ಳಲು ಯೋಗ್ಯವಾದಂತಹುದೇ ಏನಾದರೂ ಆಗಿರುತ್ತದೆ ಎಂದು ನಾನು ಯೋಚಿಸಿದ್ದೆ. ಆದರೆ ನನ್ನ ಎಣಿಕೆ ತಪ್ಪಾಗಿತ್ತು. ಇದು ತಮಾಷೆಯಲ್ಲ' ಎಂದು ನಾಸಿರುದ್ದೀನ್ ಹೇಳಿದರು.'ಗಜಗಾಮಿನಿ'ಯು ಸ್ತ್ರೀತ್ವ ಅಥವಾ ಹೆಣ್ತನ ಬಗೆಗಿನ ಹುಸೇನ್ ಅವರ ಪ್ರಗಾಥವಾಗಿತ್ತು. ಮಾಧುರಿ ದೀಕ್ಷಿತ್ ಸಿನಿಮಾದಲ್ಲಿ ಮುಖ್ಯಪಾತ್ರ ವಹಿಸಿದ್ದರು. ಶಾರುಖ್ ಖಾನ್, ನಾಸಿರುದ್ದೀನ್ ಷಾ, ಶಬಾನಾ ಅಜ್ಮಿ ಮತ್ತಿತರರು ನಟಿಸಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋಲು ಉಂಡಿತ್ತು.'ನನಗೆ ಚಿತ್ರವನ್ನು ಅರ್ಥ ಮಾಡಿಕೊಳ್ಳಲು ಅದರ ಚೌಕಟ್ಟನ್ನು ಅರಿಯಲು ಸಾಧ್ಯವಾಗಿರಲಿಲ್ಲ. ಅವರು (ಎಂ.ಎಫ್. ಹುಸೇನ್)  ಪ್ರಬುದ್ಧರು ಎಂಬುದಷ್ಟೇ ನನ್ನ ತೀರ್ಮಾನವಾಗಿತ್ತು... ಅಗಣಿತ ಸಂಖ್ಯೆಯ ಬಿಂಬಗಳನ್ನು ಸೃಷ್ಟಿಸಲು ಅವರು ಬಯಸಿದ್ದರು. ಚೌಕಟ್ಟುಗಳೆಲ್ಲ ವರ್ಣಚಿತ್ರಗಳಂತೆ ಇದ್ದವು. ಸಿನಿಮಾವು ಸಂಪೂರ್ಣವಾಗಿ ವರ್ಣಚಿತ್ರಕ್ಕೆ ಸಂಬಂಧಿಸಿದ್ದು ಎಂದು ನಾನು ಎಣಿಸಿರಲಿಲ್ಲ. ಅದು ಸಾಹಿತ್ಯ ರಚನೆಗೆ ಸಂಬಂಧಿದ್ದಾಗಿರಲೇ ಇಲ್ಲ' ಎಂದು ನಟ ಹೇಳಿದರು.'ಗಜ ಗಾಮಿನಿ'ಯನ್ನು ವಿವರಿಸಲು ಮತ್ತು  ಇಂತಹ ಚಿತ್ರ ನಿರ್ಮಿಸಲು ಹುಸೇನ್ ಅವರಿಗೆ ಸ್ಫೂರ್ತಿ ನೀಡಿದವರು ಯಾರು' ಎಂಬುದಾಗಿ ಮಾಧುರಿ ದೀಕ್ಷಿತ್ ಅವರನ್ನು ಪ್ರಶ್ನಿಸಿದಾಗ ಅವರು ಕಿಲಕಿಲನೆ ನಕ್ಕು ಬಿಟ್ಟರಷ್ಟೆ ಎಂದು ನಾಸಿರುದ್ದೀನ್ ನುಡಿದರು.

ಪ್ರತಿಕ್ರಿಯಿಸಿ (+)