ಮಂಗಳವಾರ, ಮೇ 18, 2021
28 °C
ಬೆಂಗಳೂರಿನಲ್ಲಿ ಬ್ಯಾಂಕ್‌ಗಳ ಜತೆ ನಾಳೆ ಮಾತುಕತೆ: ಮುನಿಯಪ್ಪ

`ಎಂಎಸ್‌ಎಂಇ'ಗೆ ಹೆಚ್ಚು ಸಾಲ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ(ಎಂಎಸ್‌ಎಂಇ) ಸಚಿವಾಲಯ ತನ್ನ ವ್ಯಾಪ್ತಿಗೆ ಬರುವ ಉದ್ಯಮ ವಲಯಕ್ಕೆ ಸುಲಭದಲ್ಲಿ ಮತ್ತು ಹೆಚ್ಚು ಬ್ಯಾಂಕ್ ಸಾಲ ಲಭಿಸುವಂತೆ ಮಾಡುವ ವಿಶೇಷ ಪ್ರಯತ್ನದಲ್ಲಿದೆ.`ಎಂಎಸ್‌ಎಂಇ' ವಲಯ ದೇಶದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ಇಂತಹ ಕ್ಷೇತ್ರಕ್ಕೆ ಬ್ಯಾಂಕ್‌ಗಳು ಹೆಚ್ಚು ಸಾಲದ ನೆರವು ನೀಡಬೇಕಿದೆ. ಈ ಸಂಬಂಧ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಷ್ಟೆ ಅಲ್ಲ, ಖಾಸಗಿ ಬ್ಯಾಂಕ್‌ಗಳ ಜತೆಗೂ ಸದ್ಯದಲ್ಲೇ ಮಾತುಕತೆ ನಡೆಸಲಾಗುವುದು ಎಂದು ಸಚಿವ ಕೆ.ಎಚ್.ಮುನಿಯಪ್ಪ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಇದೇ 21ರಂದು ಬೆಂಗಳೂರಿನಲ್ಲಿ ಕೆನರಾ ಬ್ಯಾಂಕ್ ಮತ್ತು ಯುನೈಟೆಡ್ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಮುಖ್ಯಸ್ಥರ ಜತೆ `ಎಂಎಸ್‌ಎಂಇ'ಗಳಿಗೆ ಸುಲಭದಲ್ಲಿ ಮತ್ತು ಹೆಚ್ಚು ಸಾಲ ವಿತರಿಸುವ ಬಗ್ಗೆ ಚರ್ಚಿಸಲಾಗುವುದು. ಮುಂದಿನ ದಿನಗಳಲ್ಲಿ ಇತರೆ ರಾಜ್ಯಗಳಲ್ಲಿನ ಉದ್ಯಮಗಳಿಗೆ ನೆರವಾಗುವಂತೆ  ಮಾತುಕತೆ ಮುಂದುವರಿಸಲಾಗುವುದು ಎಂದರು.ಈ ಉದ್ಯಮ ವಲಯಕ್ಕೆ ನೀಡಲಾಗುವ ಸಾಲ ಪ್ರಮಾಣವನ್ನು ವರ್ಷದಿಂದ ವರ್ಷದ ಶೇ 20ರಷ್ಟು ಹೆಚ್ಚಿಸಬೇಕು ಎಂದು `ಎಂಎಸ್‌ಎಂಇ'ಗೆ ಸಂಬಂಧಿಸಿದ ಪ್ರಧಾನಮಂತ್ರಿಗಳ ಉಸ್ತುವಾರಿಯ ಕಾರ್ಯಪಡೆ ಶಿಫಾರಸು ಮಾಡಿದೆ ಎಂದು ಅವರು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.