ಕೊಪ್ಪಳ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಟಿ.ಬಿ. ಕಾಡಾ) ಪರವಾಗಿ ಭೂ ಪುನರ್ಸುಧಾರಣಾ ಕಾಮಗಾರಿಗಾಗಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಟೆಂಡರ್ ಕರೆದು, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿದ್ದಾರೆ ಎನ್ನಲಾದ ಇಬ್ಬರು ಎಂಜಿನಿಯರುಗಳ ನೇಮಕಾತಿ ಹಾಗೂ ಬಡ್ತಿ ಕುರಿತು ತನಿಖೆ ನಡೆಸುವಂತೆ ಆದೇಶಿಸಲಾಗಿದೆ.

ಈ ಕುರಿತು ಸಮಿತಿಯೊಂದನ್ನು ರಚನೆ ಮಾಡಿರುವ ಕಾಡಾ ಆಡಳಿತಾಧಿಕಾರಿ ಎನ್.ಸುದರ್ಶನ್, 15 ದಿನಗಳ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಕಾಡಾದ ಭೂ ಅಭಿವೃದ್ಧಿ ಅಧಿಕಾರಿ (ತಾಂತ್ರಿಕ) ವಿ.ಆರ್.ಮುರಳೀಧರ್ ಅಧ್ಯಕ್ಷರಾಗಿರುವ ಈ ಸಮಿತಿಯ ಸದಸ್ಯರನ್ನಾಗಿ ಟಿ. ರಾಜಶೇಖರ್ (ಭೂ ಅಭಿವೃದ್ಧಿ ಅಧಿಕಾರಿ- ಕೃಷಿ), ಸಿದ್ಧರಾಮೇಶ್ವರ ಉಕ್ಕಲಿ (ಮುಖ್ಯ ಲೆಕ್ಕಾಧಿಕಾರಿ) ಹಾಗೂ ಸದಸ್ಯ ಕಾರ್ಯದರ್ಶಿಯನ್ನಾಗಿ ಉಪ ಆಡಳಿತಾಧಿಕಾರಿ ಎಚ್.ಆರ್.ಗಂಗೂರ ಅವರನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯನಿರ್ವಾಹಕ ಎಂಜಿನಿಯರ್ ವಲಿಷಾ ಹಾಗೂ ಸಹಾಯಕ ಎಂಜಿನಿಯರ್ ಷಂಷಾಲಂ ಹುಸೇನಿ ಅವರ ನೇಮಕಾತಿ ಹಾಗೂ ಬಡ್ತಿ ನೀಡಿದ್ದು, ಈ ಇಬ್ಬರು ಎಂಜಿನಿಯರ್ಗಳು ಭೂ ಪುನರ್ಸುಧಾರಣಾ ಕಾಮಗಾರಿಗಾಗಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಟೆಂಡರ್ ಕರೆದ ಬಗ್ಗೆ ತುಂಗಭದ್ರಾ ಹಾಗೂ ಜಿಲ್ಲಾ ಬಚಾವೋ ಆಂದೋಲನ ಸಮಿತಿ ದೂರು ನೀಡಿತ್ತು. ಅಲ್ಲದೆ, ಈ ಇಬ್ಬರು ಎಂಜಿನಿಯರ್ಗಳ ನೇಮಕಾತಿ ಕುರಿತಂತೆ ತನಿಖೆ ನಡೆಸುವಂತೆ ಕಾಡಾ (ತುಂಗಭದ್ರಾ) ಅಧ್ಯಕ್ಷ ಬಸವನಗೌಡ ಬ್ಯಾಗವಾಟ್ ಸಹ ಪತ್ರ ಬರೆದು ಒತ್ತಾಯಿಸಿದ್ದರು.

ಟೆಂಡರ್ ಕರೆಯುವಲ್ಲಿನ ಲೋಪದೋಷ ಹಾಗೂ ಈ ಇಬ್ಬರು ಎಂಜಿನಿಯರ್ಗಳ ನೇಮಕಾತಿ ಅಕ್ರಮವಾಗಿದೆ ಎಂಬ ಬಗ್ಗೆ ‘ಪ್ರಜಾವಾಣಿ’ 26.9.2010ರಂದು ವಿಶೇಷ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

ಆಗ್ರಹ: ಕಾರ್ಯನಿರ್ವಾಹಕ ಎಂಜಿನಿಯರ್ ವಲಿಷಾ ಹಾಗೂ ಸಹಾಯಕ ಎಂಜಿನಿಯರ್ ಷಂಷಾಲಂ ಹುಸೇನಿ ಅವರ ನೇಮಕಾತಿ ಹಾಗೂ ಬಡ್ತಿ ಕುರಿತಂತೆ ತನಿಖೆ ನಡೆಸಲು ಸಮಿತಿ ರಚನೆ ಮಾಡಿರುವುದನ್ನು ತುಂಗಭದ್ರಾ ಹಾಗೂ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಅಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಪ್ರಧಾನ ಕಾರ್ಯದರ್ಶಿ ಎಂ.ಆರ್.ವೆಂಕಟೇಶ್ ಸ್ವಾಗತಿಸಿದ್ದಾರೆ. ಇಡೀ ಪ್ರಕರಣ ಕುರಿತಂತೆ ಪ್ರಾಮಾಣಿಕ ಹಾಗೂ ವಸ್ತುನಿಷ್ಠ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.