ಈಸ್ಟ್ಬೋರ್ನ್, ಇಂಗ್ಲೆಂಡ್ (ಪಿಟಿಐ): ಸಾನಿಯಾ ಮಿರ್ಜಾ ಹಾಗೂ ಲಿಜೆಲ್ ಹುಬೆರ್ ಅವರು ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಎಜೋನ್ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ನಲ್ಲಿ ದರಿಜಾ ಜುರಾಕ್ ಹಾಗೂ ಹಿಥೆರ್ ವಾಟ್ಸನ್ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.

ಒಂದು ಗಂಟೆ 36 ನಿಮಿಷಗಳ ಹೋರಾಟದಲ್ಲಿ ಎರಡನೇ ಶ್ರೇಯಾಂಕದ ಈ ಜೋಡಿ 7-6, 7-6ರಲ್ಲಿ ಶ್ರೇಯಾಂಕ ರಹಿತ ಕ್ರೊಯೇಷಿಯಾ ಮತ್ತು ಬ್ರಿಟಿಷ್ ಜೋಡಿಯನ್ನು ಸೋಲಿಸಿತು. ಮುಂದಿನ ಪಂದ್ಯದಲ್ಲಿ ಸಾನಿಯಾ ಹಾಗೂ ಹುಬೆರ್, ರುಮೇನಿಯಾದ ಮೊನಿಕಾ ನಿಕುಲೆಸ್ಕು ಹಾಗೂ ಚೆಕ್ ಗಣರಾಜ್ಯದ ಕ್ಲಾರಾ ಜಕೊಪಲೊವಾ ಅವರನ್ನು ಎದುರಿಸಲಿದ್ದಾರೆ.

ದಿವಿಜ್-ರಾಜಾ ಮುನ್ನಡೆ
ಲಂಡನ್ ವರದಿ: ಭಾರತದ ದಿವಿಜ್ ಶರಣ್ ಹಾಗೂ ಪುರವ್ ರಾಜಾ ಇಲ್ಲಿ ನಡೆಯುತ್ತಿರುವ ವಿಂಬಲ್ಡನ್ ಪುರುಷರ ಡಬಲ್ಸ್ನ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ನೇರ ಸೆಟ್ಗಳಿಂದ ಜಯ ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದ್ದಾರೆ.

ಮೊದಲ ಪಂದ್ಯದಲ್ಲಿ ದಿವಿಜ್-ರಾಜಾ 6-2, 6-4 ರಲ್ಲಿ ಇಟಲಿಯ ಫ್ಲಾವಿಯೊ ಸಿಪೊಲ್ಲಾ ಹಾಗೂ ಅಮೆರಿಕದ ವೇನ್ ಒದೆಸ್ನಿಕ್ ಅವರನ್ನು ಮಣಿಸಿದರು.
ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ದಿವಿಜ್-ರಾಜಾ ಜೋಡಿ ಆಸ್ಟ್ರಿಯಾದ ಆ್ಯಂಡ್ರೆಸ್ ಹೈದರ್ ಮೌರೆರ್ ಹಾಗೂ ಜೆಕ್ ಗಣರಾಜ್ಯದ ಜಿರಿ ವೆಸೆಲೀ ಅವರನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.