ಎಂಡೆವರ್ ಯಾನ ಪೂರ್ಣ

7

ಎಂಡೆವರ್ ಯಾನ ಪೂರ್ಣ

Published:
Updated:
ಎಂಡೆವರ್ ಯಾನ ಪೂರ್ಣ

ಮಾಸ್ಕೊ (ಐಎಎನ್‌ಎಸ್/ ರಿಯಾ ನೊವೊಸ್ತಿ): ಅಮೆರಿಕದ `ಎಂಡೆವರ್~ ಬಾಹ್ಯಾಕಾಶ ನೌಕೆಯು ತನ್ನ 25ನೇ ಮತ್ತು ಅಂತಿಮ ಅಂತರಿಕ್ಷ ಯಾನವನ್ನು ಯಶಸ್ವಿಯಾಗಿ ಪೂರೈಸಿ 6 ಮಂದಿ ಗಗನಯಾನಿಗಳ ಸಮೇತ ಧರೆಗಿಳಿದಿದೆ. ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಎರಡು ದಿನಗಳ ಹಿಂದೆ ಭೂ ಕಕ್ಷೆಯ ಕಡೆಗೆ ಕೊನೆಯ ಯಾನ ಆರಂಭಿಸಿದ್ದ `ಎಂಡೆವರ್~ ಫ್ಲಾರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಸುರಕ್ಷಿತವಾಗಿ ಬಂದಿಳಿಯಿತು.ನಾಸಾದ 30 ವರ್ಷಗಳ ಯೋಜನೆಯನ್ನು ಪೂರೈಸಿ ಬುಧವಾರದ ನಸುಕಿನ ಕತ್ತಲಲ್ಲಿ ಭೂ ಸ್ಪರ್ಶ ಮಾಡಿದ ಈ ನೌಕೆಯನ್ನು, ಕೇಂದ್ರದಲ್ಲಿ ನೆರೆದಿದ್ದ ಸಾವಿರಾರು ಜನ ಕಣ್ತುಂಬಿಕೊಂಡರು.`ಎಂಡೆವರ್~ ನೆಲಕ್ಕೆ ಇಳಿಯುವವರೆಗಿನ ಎಲ್ಲ ಬೆಳವಣಿಗೆಗಳನ್ನೂ ನಾಸಾದ ವೆಬ್‌ಸೈಟಿನಲ್ಲಿ ನೇರ ಪ್ರಸಾರ ಮಾಡಲಾಯಿತು. `ಎಂಡೆವರ್~ ತನ್ನ ಇತಿಹಾಸದಲ್ಲಿ ಎಂಟು ತಾಸಿಗೂ ಹೆಚ್ಚು ಕಾಲದ ಬಾಹ್ಯಾಕಾಶ ನಡಿಗೆಯ ಹೆಗ್ಗಳಿಕೆ ಹೊಂದಿದೆ. ಇದು ಬಾಹ್ಯಾಕಾಶ ಇತಿಹಾಸದಲ್ಲೇ ಆರನೆಯ ಸುದೀರ್ಘ ನಡಿಗೆ ಎಂಬ ದಾಖಲೆ ಇದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry