ಭಾನುವಾರ, ಜೂಲೈ 5, 2020
22 °C

ಎಂವಿಜೆ ಕಾಲೇಜಿನಲ್ಲಿ ಹಳಬರ ಸಮ್ಮಿಲನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಸಂದ್ರದಲ್ಲಿನ ಎಂವಿಜೆ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮೇಳನ  ಸಡಗರ ಸಂಭ್ರಮದಿಂದ ನಡೆಯಿತು.

ವಿಶ್ವದ ವಿವಿಧೆಡೆಯಿಂದ ಬಂದ 1982-85 ತಂಡದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಂ.ಗಿರೀಶ್ ವಹಿಸಿದ್ದರು.ಈ ಸಮ್ಮೇಳನ ಹಳೇ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಿತ್ತು. ಇವರೆಲ್ಲ ಕಾಲೇಜು ದಿನಗಳ ನೆನಪನ್ನು ಮೆಲುಕು ಹಾಕಿದರು. ತಮ್ಮ  ಅನುಭವಗಳು ಮತ್ತು ಅವು ತಮ್ಮ ವೃತ್ತಿ ಜೀವನದ ಮೇಲೆ ಬೀರಿದ ಪರಿಣಾಮಗಳನ್ನು ಹಂಚಿಕೊಂಡರು.1982 ತಂಡದ ರಾಬರ್ಟ್ ಅವರಿಗಂತೂ ಬಹಳ ಖುಷಿಯಾಗಿತ್ತು. ಸಮ್ಮೇಳನದ ಸೂತ್ರಧಾರಿ, ಸಿವಿಲ್ ಎಂಜಿನಿಯರ್ ನಾಗಾರ್ಜುನ ಅವರು, ಬದುಕಿನಲ್ಲಿ ಮುಂದೆ ಬರಲು ಕಾಲೇಜು ನೀಡಿದ ಸಹಕಾರ ಸ್ಮರಿಸಿಕೊಂಡರು.ಈ ಕಾಲೇಜಿನಿಂದ ಪದವಿ ಪಡೆದು ಹೊರ ಬರುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಎಲ್ಲ ಬಗೆಯಿಂದ ಸಹಕರಿಸುವುದಾಗಿ ಹಳೆ ವಿದ್ಯಾರ್ಥಿಗಳು ವಾಗ್ದಾನ ಮಾಡಿದರು.ಕಾಲೇಜಿನ ಅಧ್ಯಕ್ಷ ಬಾಲಚಂದರ್ ಮಾತನಾಡಿ, ಪ್ರತಿ ವರ್ಷ ಈ ರೀತಿಯ ಸಮ್ಮೇಳನವನ್ನು ದೊಡ್ಡ ಮಟ್ಟದಲ್ಲಿ ಅಯೋಜಿಸಲು ಯೋಜಿಸಿದ್ದೇವೆ. ಹಳೆ ವಿದ್ಯಾರ್ಥಿಗಳು ಕಾಲೇಜಿನ ಬಗ್ಗೆ ಇಟ್ಟುಕೊಂಡ ಗೌರವ, ಆದರ ಅನುಕರಣೀಯ ಎಂದರು.ಮುಂದಿನ ಸಲ ಹಳೆ ವಿದ್ಯಾರ್ಥಿಗಳ ಸಮ್ಮೇಳನವನ್ನು ಮೇ 14 ರಂದು ಆಯೋಜಿಸಿದ್ದು, 1200ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ತಮ್ಮ ಕುಟುಂಬಗಳೊಂದಿಗೆ ಭಾಗವಹಿಸುವ ನಿರೀಕ್ಷೆಯಿದೆ ಎಂದು ಪ್ರಾಚಾರ್ಯ ಗಿರೀಶ್ ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.