ಮಂಗಳವಾರ, ಮೇ 18, 2021
28 °C

ಎಐಟಿಎ ಟೆನಿಸ್ ಚಾಂಪಿಯನ್‌ಷಿಪ್ : ಅಶೋಕ್, ಪ್ರೀತಿ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಅಶೋಕ್ ಕಶ್ಯಪ್ ಮತ್ತು ಪ್ರೀತಿ ಗೋಖಲೆ ಇಲ್ಲಿ ನಡೆದ `ಎಐಟಿಎ ಚಾಂಪಿಯನ್‌ಷಿಪ್ ಸೀರಿಸ್~ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 18 ವರ್ಷ ವಯಸ್ಸಿನೊಳಗಿನವರ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.ಜೆಐಆರ್‌ಎಸ್ ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಬಾಲಕರ ವಿಭಾಗದ ಫೈನಲ್‌ನಲ್ಲಿ ಅಶೋಕ್ 6-2, 6-1 ರಲ್ಲಿ ಆಂಧ್ರ ಪ್ರದೇಶದ ರೇಮಂಡ್ ಟಿಎಸ್ ಜೂಡ್ ಅವರನ್ನು ಮಣಿಸಿದರು. ಅಗ್ರ ಶ್ರೇಯಾಂಕದ ಅಶೋಕ್‌ಗೆ ಎದುರಾಳಿಯಿಂದ ಹೆಚ್ಚಿನ ಪ್ರತಿರೋಧ ಕಂಡುಬರಲಿಲ್ಲ.ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಪ್ರೀತಿ 6-4, 2-6, 6-2 ರಲ್ಲಿ ಕರ್ನಾಟಕದವರೇ ಆದ ಪ್ರಗತಿ ನಟರಾಜ್ ವಿರುದ್ಧ ಜಯ ಸಾಧಿಸಿದರು. ಸೋಲು ಅನುಭವಿಸುವ ಮುನ್ನ ಪ್ರಗತಿ ಎರಡನೇ ಶ್ರೇಯಾಂಕ ಹೊಂದಿದ್ದ ಪ್ರೀತಿ ಗೋಖಲೆಗೆ ಸಾಕಷ್ಟು ಪೈಪೋಟಿ ನೀಡಿದರು.ಆದರೆ ಪ್ರಗತಿ ನಟರಾಜ್ ಬಾಲಕಿಯರ 16 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾದರು. ಫೈನಲ್‌ನಲ್ಲಿ ಅವರು 6-3, 6-3 ರಲ್ಲಿ ತಮಿಳುನಾಡಿನ ತನುಶ್ರೀ ಪಳನಿವೇಲ್ ವಿರುದ್ಧ ಗೆದ್ದರು.ಬಾಲಕರ 16 ವರ್ಷ ವಯಸ್ಸಿನೊಳಗಿನವರ ವಿಭಾಗದ ಫೈನಲ್‌ನಲ್ಲಿ ತಮಿಳುನಾಡಿನ ಐ.ಬಿ. ಅಕ್ಷಯ್ 7-6, 6-4 ರಲ್ಲಿ ರಾಜಸ್ತಾನದ ಗಗನ್ ಶರ್ಮ ಅವರನ್ನು ಸೋಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.