ಗುರುವಾರ , ಮೇ 19, 2022
20 °C

ಎಚ್‌ಎಎಲ್‌ಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್‌ಎಎಲ್‌ಗೆ ಸೋಲು

ಬೆಂಗಳೂರು: ಯುವ ಆಟಗಾರರನ್ನೊಳಗೊಂಡ ಎಚ್‌ಎಎಲ್ ತಂಡ ಐ-ಲೀಗ್ ಫುಟ್‌ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಚಿರಾಗ್ ಯುನೈಟೆಡ್ ಕೇರಳ ತಂಡ 1-0 ಗೋಲಿನಿಂದ ಎಚ್‌ಎಎಲ್ ವಿರುದ್ಧ ಜಯ ಪಡೆಯಿತು.ಎಚ್‌ಎಎಲ್ ತಂಡದ ಪ್ರಸಕ್ತ ಋತುವಿನ ಮೊದಲ ಪಂದ್ಯವನ್ನು ವೀಕ್ಷಿಸಲು ದೊಡ್ಡ ಸಂಖ್ಯೆಯ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ನೆರೆದಿದ್ದರು. ಆದರೆ ಅವರ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ತಂಡ ವಿಫಲವಾಯಿತು.ಮತ್ತೊಂದೆಡೆ ವೇಗ ಹಾಗೂ ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿದ ಚಿರಾಗ್ ಪೂರ್ಣ ಪಾಯಿಂಟ್ ಗಿಟ್ಟಿಸಿಕೊಂಡಿತು. ಪಂದ್ಯದ 14ನೇ ನಿಮಿಷದಲ್ಲಿ ಗೆಲುವಿನ ಗೋಲು ದಾಖಲಾಯಿತು. ಗೋಲು ತಂದಿತ್ತದ್ದು ಸಿ.ಕೆ. ವಿನೀತ್. ಚಿರಾಗ್ ತಂಡದ ಜಗದೀಪ್ ಸಿಂಗ್ ನೀಡಿದ ಲಾಂಗ್ ಪಾಸ್ ಈ ಗೋಲಿಗೆ ಹಾದಿಯೊದಗಿಸಿತು.ಜಗದೀಪ್ ಅವರ ಹೊಡೆತದಲ್ಲಿ ಚೆಂಡನ್ನು ಹಿಡಿತಕ್ಕೆ ಪಡೆಯುವಲ್ಲಿ ಎಚ್‌ಎಎಲ್ ಗೋಲ್‌ಕೀಪರ್ ಪ್ರಮೋದ್ ವಿಫಲರಾದರು. ಚೆಂಡನ್ನು ನಿಯಂತ್ರಣಕ್ಕೆ ಪಡೆದುಕೊಂಡ ವಿನೀತ್ ಸುಲಭವಾಗಿ ಗುರಿಮುಟ್ಟಿಸಿದರು.

ಆ ಬಳಿಕ ಎಚ್‌ಎಎಲ್ ಸಮಬಲದ ಗೋಲು ಗಳಿಸಲು ಪ್ರಯತ್ನ ನಡೆಸಿತು. ಅದೃಷ್ಟ ಈ ತಂಡದ ಪರ ಇರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.