ಶನಿವಾರ, ಮೇ 28, 2022
31 °C

ಎಜುಕಾಂಪ್ ರ್ಯಾಫ್ಲಸ್‌ನಿಂದ ಎಂಬಿಎ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಜುಕಾಂಪ್ ರ್ಯಾಫ್ಲಸ್ ಹೈಯರ್ ಎಜ್ಯುಕೇಷನ್‌ಗೆ ಸೇರಿದ ಎಂಎಪಿಎಸ್ (ಮಿಲೇನಿಯಂ ಅಕಾಡೆಮಿ ಆಫ್ ಪ್ರೊಫೆಷನಲ್ ಸ್ಟಡೀಸ್), ಬೆಂಗಳೂರು ಕ್ಯಾಂಪಸ್‌ನಲ್ಲಿ ಎರಡು ವರ್ಷದ ಎಂಬಿಎ ಕೋರ್ಸ್ ಆರಂಭಿಸುತ್ತಿದೆ.ಇದು ಮಾರ್ಕೆಟಿಂಗ್, ಹಣಕಾಸು ಮತ್ತು ಮಾನವ ಸಂಪನ್ಮೂಲ ಎಂಬ ಮೂರು ಕೋರ್ಸ್‌ಗಳನ್ನು ಒಳಗೊಂಡಿದ್ದು, ಯುಜಿಸಿಯಿಂದ ಮಾನ್ಯತೆ ಪಡೆದಿರುವ ಎನ್‌ಎಎಸಿ ‘ಎ’ ದರ್ಜೆ ವಿವಿಯ ಪದವಿ ನೀಡಲಾಗುತ್ತದೆ.‘ಈ ಕೋರ್ಸ್ ವಿದ್ಯಾರ್ಥಿಗಳಿಗೆ ಪ್ರಮುಖ ಕಂಪೆನಿಗಳ ಮೂಲಕ ತರಬೇತಿ ಪಡೆದುಕೊಳ್ಳುವ ಅವಕಾಶ ನೀಡುತ್ತದೆ. ಕಲಿಕಾ ಮತ್ತು ಪ್ರಾಯೋಗಿಕ ಅನುಭವ ಪಡೆದುಕೊಳ್ಳಲು ಪ್ರಮುಖ ಕಾರ್ಪೊರೇಟ್ ವೃತ್ತಿಪರರೊಂದಿಗೆ ಸಂವಾದದ ಅವಕಾಶವನ್ನೂ ಕಲ್ಪಿಸಲಾಗುತ್ತದೆ’ ಎಂದು ಎಜುಕಾಂಪ್ ರ್ಯಾಫ್ಲಸ್ ಹೈಯರ್ ಎಜ್ಯುಕೇಷನ್‌ನ  ಕಾರ್ಯನಿರ್ವಾಹಕ ನಿರ್ದೇಶಕ ಹರ್‌ಪ್ರೀತ್ ಸಿಂಗ್ ಹೇಳುತ್ತಾರೆ.ಎಂಎಪಿಎಸ್ ಆಪ್ಟಿಟ್ಯೂಡ್ ಟೆಸ್ಟ್ ಅಂಕದ ಆಧಾರದಲ್ಲಿ ಎಂಎಪಿಎಸ್ ಎಂಬಿಎಗೆ ಆಯ್ಕೆ ಮಾಡಲಾಗುತ್ತದೆ. ಇದರೊಂದಿಗೆ, ಕಳೆದ ಶೈಕ್ಷಣಿಕ ಸಾಧನೆ, ಲಿಖಿತ ಪರೀಕ್ಷೆ, ಸಮೂಹ ಚರ್ಚೆ ಹಾಗೂ ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ. ಶೇ 80ಕ್ಕಿಂತ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು ಆಪ್ಟಿಟ್ಯೂಡ್ ಟೆಸ್ಟ್‌ನಲ್ಲಿ ಭಾಗವಹಿಸುವ ಅಗತ್ಯವಿಲ್ಲ. ಕೋರ್ಸ್ ಜುಲೈಯಿಂದ. ಆದರೆ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.  www.maps.edu.in ವೆಬ್‌ಸೈಟ್‌ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.                           

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.