ಮೂಡಬಾಗಿಲು(ಎನ್.ಆರ್.ಪುರ): ತಾಲ್ಲೂಕಿನ ಬಾಳೆ ಗ್ರಾಮ ಪಂಚಾಯಿತಿ ಹಾಗೂ ಹೊನ್ನೆಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಬೀಸಿದ ಭಾರಿ ಗಾಳಿ ಹಾಗೂ ಮಳೆಗೆ ಲಕ್ಷಾಂತರ ನಷ್ಟ ಸಂಭವಿಸಿದೆ.

ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆ, ಚಿನ್ನಕೂಡಿಗೆ ಕಾಲೊನಿ ಹಾಗೂ ಮೂಡಬಾಗಿಲು ಗ್ರಾಮಗಳಲ್ಲಿ ಭಾರಿ ನಷ್ಟ ಸಂಭವಿಸಿದೆ. ಪ್ರಮುಖವಾಗಿ ಬಾಳೆ ಗ್ರಾಮ ವ್ಯಾಪ್ತಿಯ ಸೋಮಶೇಖರ್ ಎಂಬು ವರಿಗೆ ಸೇರಿದ ಕೂಯ್ಲಿಗೆ ಬಂದಿದ್ದ 500 ನೇಂದ್ರೆ ಬಾಳೆ ನೆಲಕ್ಕುರುಳಿದೆ. ದನದ ಕೊಟ್ಟಿಗೆ ಹೆಂಚು ಪುಡಿ ಯಾಗಿದ್ದು ಅಂದಾಜು ರೂ. 50,000 ಹಾನಿ ಯಾಗಿದೆ.

ಬಿ.ಎಂ.ಕೃಷ್ಣಮೂರ್ತಿ ಅವರಿಗೆ ಸೇರಿದ 250 ಬಾಳೆಗಿಡ ಹಾಗೂ ಮನೆಯ ಹೆಂಚು, ರಾಜಶೆಟ್ಟರು, ಸತೀಶ್, ದಿವಾಕರ, ನಾಗರಾಜ್, ನರಸಿಂಹಶೆಟ್ರು, ಚೆನ್ನಕೇಶವ, ವಾಸುದೇವ ಎಂಬುವರ ಮನೆಯ ಹೆಂಚುಗಳು ಗಾಳಿಗೆ ಹಾರಿ ಹೋಗಿವೆ.

ಮೂಡ ಬಾಗಿಲು ಗ್ರಾಮದ ವಸಂತಕುಮಾರ್ ಎಂಬುವರಿಗೆ ಸೇರಿದ 1,000 ಬಾಳೆ ಕೊಯ್ಲಿಗೆ ಬಂದಿದ್ದ ನೆಂದ್ರ ಬಾಳೆ ನೆಲಕ್ಕುರುಳಿದ್ದು ಅಂದಾಜು ರೂ.1.50ಲಕ್ಷಕ್ಕೂ ಅಧಿಕ ಹಾನಿಯಾಗಿದೆ.

ಭಾರಿ ಗಾಳಿಗೆ ಎತ್ತಿನಗಾಡಿಯೊಂದು ಎರಡು ಮೂರು ಪಲ್ಟಿಯಾಗಿದೆ. ಹಂತುವಾನಿ, ಬಸರಗಳಲೆ, ಹೊನ್ನೆಕೊಡಿಗೆ ಗ್ರಾಮದ ವ್ಯಾಪ್ತಿಯಲ್ಲೂ ಮತ್ತು ವರಕಟ್ಟೆ, ಸಿಗುವಾನಿ ಗ್ರಾಮದ ವ್ಯಾಪ್ತಿಯಲ್ಲೂ ಬಾಳೆ ನೆಲಕ್ಕುರುಳಿದ್ದು ಮನೆಯ ಹೆಂಚುಗಳು ಸಹ ಹಾರಿ ಹೋಗಿದ್ದು ಸಾಕಷ್ಟು ನಷ್ಟವುಂಟಾಗಿದೆ.ಅಲ್ಲದೆ ಅಡಿಕೆ ಹಾಗೂ ರಬ್ಬರ್ ಗಿಡಗಳು ಸಹ ದರೆಗುರುಳಿವೆ.

ಅರ್ಧಗಂಟೆಗೂ ಹೆಚ್ಚು ಮಳೆ
ಚಿಕ್ಕಮಗಳೂರು: ನಗರದಲ್ಲಿ ಗುರುವಾರ ಮಧ್ಯಾಹ್ನ ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಮಳೆ ಸುರಿಯಿತು. ಇದ್ದಕ್ಕಿದ್ದಂತೆ ಮೋಡಕವಿದ ವಾತಾ ವರಣ ಉಂಟಾಯಿತು. ಗುಡುಗಿನಿಂದ ಕೂಡಿದ ಮಳೆಯೂ ಬಿತ್ತು.

ಬಿಸಿಲ ಬೇಗೆಯಿಂದ ಚಡಪಡಿಸುತ್ತಿದ್ದ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ಈ ಮಳೆ ಹರ್ಷತಂದಿತು. ಮಧ್ಯಾಹ್ನ ಉಂಟಾದ ಮೋಡ ಕವಿದ ವಾತಾವರಣ ಸಂಜೆವರೆಗೂ ಮುಂದು ವರೆದಿತ್ತು. ಶುಕ್ರವಾರವೂ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.