ಬುಧವಾರ, ಮೇ 12, 2021
18 °C

ಎನ್.ಸಿ.ಸಿ ತರಬೇತಿಗೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದ ಏರ್ ಎನ್.ಸಿ.ಸಿ. ವಿಭಾಗವು ಯುವಜನತೆಗೆ ಅವರ ವ್ಯಕ್ತಿತ್ವದ ಗುಣವನ್ನು ಅಭಿವೃದ್ಧಿಪಡಿಸಲು ಒಂದು ಅವಕಾಶವನ್ನು ನೀಡುತ್ತಿದ್ದು, ಆಸಕ್ತಿ ಇರುವ ಯುವ ಜನತೆಗೆ ವಾಯುದಳದಲ್ಲಿ ಪೈಲಟ್ ಅಧಿಕಾರಿಯಾಗಲು ಏರ್ ಎನ್.ಸಿ.ಸಿ.ಯು ಪ್ರಮುಖ ಮೆಟ್ಟಿಲು.

ಈ ಹಿನ್ನೆಲೆಯಲ್ಲಿ 2013-14ನೇ ಸಾಲಿನ ಏರ್ ಎನ್.ಸಿ.ಸಿ. ತರಬೇತಿಗಾಗಿ ಪಿಯು ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೌಕಾದಳದಲ್ಲಿ ಅಧಿಕಾರಿಗಳ ಹುದ್ದೆಗೆ `ಸಿ' ಸರ್ಟಿಫಿಕೇಟ್ ಹೊಂದಿರುವ ವಿದ್ಯಾರ್ಥಿಗಳಿಗೆ ಶೇ 10ರಷ್ಟು ಮೀಸಲಾತಿ ಇದೆ.

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಲಘು ವಿಮಾನ ತರಬೇತಿ ನೀಡುವ ಮತ್ತು ಯುವಜನತೆಯ ವಿನಿಮಯ ಕಾರ್ಯಕ್ರಮಗಳ ಅಡಿ ಸಿಂಗಪುರ, ಅಮೆರಿಕ ಮತ್ತು ಕೆನಡಾ ಇತ್ಯಾದಿ ದೇಶಗಳಿಗೆ ಭೇಟಿ ನೀಡುವ ಹಾಗೂ ರಾಷ್ಟ್ರಮಟ್ಟದ ಎಲ್ಲ ಶಿಬಿರಗಳಲ್ಲಿ ಮತ್ತು 2014ರ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವದ ಕವಾಯತ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಅವಕಾಶ ಇರುತ್ತದೆ.ಆಸಕ್ತರು ಅರ್ಜಿಯನ್ನು 4ನೇ ಏರ್ ಸ್ಕ್ವಾಡ್ರನ್ ಎನ್.ಸಿ.ಸಿ., ಅಧ್ಯಯನ ಸ್ಕೂಲ್, ಸಿಎ-2, ಆದಿಶಕ್ತಿ ರಸ್ತೆ, ಶಕ್ತಿನಗರ, ಮೈಸೂರು-29 ಈ ಕಚೇರಿಯಿಂದ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪಡೆಯಬಹುದು. ವಿವರಗಳಿಗೆ 0821-2417927/ 76763 08418/ ಮೊ. 94825 10387 ಸಂಪರ್ಕಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.