ಗುರುವಾರ , ಜೂನ್ 24, 2021
23 °C

ಎನ್‌ಎಸ್‌ಇ ಹೂಡಿಕೆಯಲ್ಲಿ ಅವ್ಯವಹಾರ: ಸಿಬಿಐ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ನ್ಯಾಷನಲ್‌ ಸ್ಪಾಟ್‌ ಎಕ್ಸ್‌ಚೇಂಜ್‌ನಲ್ಲಿ ಸರ್ಕಾರಿ ಸ್ವಾಮ್ಯದ ಟ್ರೇಡಿಂಗ್‌ ಸಂಸ್ಥೆ ‘ಪಿಇಎಸ್‌’­ನ ಹೂಡಿಕೆಯಲ್ಲಿ ನಡೆದ ಅವ್ಯವಹಾ­ರಕ್ಕೆ ಸಂಬಂಧಿಸಿದಂತೆ ಸಿಬಿಐ ಗುರು­ವಾರ ದೇಶದಾದ್ಯಂತ 15 ಕಡೆ  ಶೋಧ ನಡೆಸಿದೆ.



ಈ ಅವ್ಯವಹಾರದಿಂದ ಕೇಂದ್ರದ ಬೊಕ್ಕಸಕ್ಕೆ ₨ 120 ಕೋಟಿ ನಷ್ಟ ಆಗಿದೆ.  ಭ್ರಷ್ಟಾಚಾರ ನಿಗ್ರಹ ಕಾಯ್ದೆ­ಯ­ಡಿಯಲ್ಲಿ  ಅಪರಾಧ ಸಂಚು, ನಕಲಿ ದಾಖಲೆ ಪ್ರಕರಣ ದಾಖಲಿಸ­ಲಾಗಿದೆ. ಮುಂಬೈನಲ್ಲಿ ನಾಲ್ಕು, ಹರಿಯಾ­ಣದ ಕರ್ನಲ್‌ನಲ್ಲಿ ಎರಡು ಹಾಗೂ ದೆಹಲಿಯ ಒಂಬತ್ತು ಪ್ರದೇಶಗಳಲ್ಲಿ ಸಿಬಿಐ ಶೋಧ ನಡೆಸಿದೆ.



ಹೂಡಿಕೆದಾರರಿಗೆ ವಂಚನೆ: ಹಲವು ಬಗೆಯ ಸರಕುಗಳಿಗೆ ಸಂಬಂಧಿಸಿ ವಾಯಿದಾ ವಹಿವಾಟನ್ನು ವಿದ್ಯುನ್ಮಾನ ಸ್ವರೂ­ಪದ ಪದ್ಧತಿಯಲ್ಲಿ ನಡೆಸುವ ನ್ಯಾಷ­ನಲ್‌ ಸ್ಪಾಟ್‌ ಎಕ್ಸ್‌ಚೇಂಜ್‌, ಸಾಮಾ­ನ್ಯರೂ ಸೇರಿದಂತೆ ಒಟ್ಟು 13 ಸಾವಿರ ಹೂಡಿಕೆದಾರರಿಗೆ ₨ 5,600 ಕೋಟಿ ವಂಚಿಸಿದ ಆರೋಪಕ್ಕೆ ಗುರಿ­ಯಾಗಿದೆ. ಇದೇ ಕಾರಣಕ್ಕೆ,  ಧಾನ್ಯ, ಬೆಳೆ, ಚಿನ್ನ, ಬೆಳ್ಳಿ, ತಾಮ್ರ ಮುಂತಾದ ಅಮೂಲ್ಯ ಲೋಹಗಳ ಇ-–ಟ್ರೇಡಿಂಗ್ ನಡೆಸುವ ಸಂಸ್ಥೆಯ ವಹಿವಾಟನ್ನು ಕೇಂದ್ರ ಸರ್ಕಾರ  ಕಳೆದ ವರ್ಷದ ಜುಲೈನಲ್ಲಿಯೇ ಸ್ಥಗಿತಗೊಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.