ಶನಿವಾರ, ಜನವರಿ 18, 2020
26 °C

ಎಪಿ ಕಲಾಪ ಜ.3ರ ವರೆಗೂ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಅವಕಾಶ ಕಲ್ಪಿಸುವ ನಿರ್ಣಾಯಕ ‘ಆಂಧ್ರ ಪ್ರದೇಶ ಪುನರ್ ರಚನೆ ಮಸೂದೆ –2013’ ಮೇಲೆ ಕನಿಷ್ಟ ಪಕ್ಷ ಚರ್ಚೆಯನ್ನೂ ಆರಂಭಿಸದ ಆಂಧ್ರ ಪ್ರದೇಶ ವಿಧಾನಸಭೆ ಕಲಾಪವನ್ನು 2014ರ ಜನವರಿ 3ರ ವರೆಗೂ ಗುರುವಾರ ಮುಂದೂಡಲಾಗಿದೆ.

ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಗದ್ದಲ ನಿಲ್ಲುವ ಲಕ್ಷಣಗಳು ಕಂಡು ಬಾರದ ಹಿನ್ನೆಲೆ, ವಿಧಾನಸಭಾಧ್ಯಕ್ಷ ನಾಂದೆಡ್ಲ್ ಮನೋಹರ್ ಅವರು ಗುರುವಾರ ಮಧ್ಯಾಹ್ನ ವಿಧಾನಸಭೆ ಕಲಾಪವನ್ನು ಮುಂದೂಡಿದರು.

ವಿಧಾನಸಭೆಯ ಮುಂದಿನ ಅಧಿವೇಶನ 2014 ಜನವರಿ 3ರ ರಿಂದ 23ರ ವರೆಗೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ ಜನವರಿ 3ರ ರಿಂದ 10 ಹಾಗೂ ಎರಡನೇ ಹಂತ ಜನವರಿ 16 ರಿಂದ 23ರ ವರೆಗೆ ಎಂದು ಸ್ಪೀಕರ್ ಪ್ರಕಟಿಸಿದರು. ಜೊತೆಗೆ ಈ ಸಂಬಂಧ ಸದಸ್ಯರಿಗೆ ಒಂದು ಸುತ್ತೋಲೆಯನ್ನು ಜಾರಿ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)