ಶುಕ್ರವಾರ, ಏಪ್ರಿಲ್ 16, 2021
32 °C

ಎಫ್‌ಐಆರ್ ದಾಖಲಿಸಿಯೇ ತನಿಖೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನ್ಯಾಯಾಲಯದಿಂದ ಬರುವ ಯಾವುದೇ ಪ್ರಕರಣವನ್ನು ಸಾಮಾನ್ಯವಾಗಿ ಎಫ್‌ಐಆರ್ ದಾಖಲಿಸಿಯೇ ತನಿಖೆ ಆರಂಭಿಸುವುದು. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ಈ ಪ್ರಕರಣದಲ್ಲಿಯೂ ಇದನ್ನೇ ಮಾಡಬೇಕಾಗುತ್ತದೆ’ ಎಂದು ಲೋಕಾಯುಕ್ತ ಎಡಿಜಿಪಿ ರೂಪಕ್ ಕುಮಾರ್ ದತ್ತ ಗುರುವಾರ ಇಲ್ಲಿ ಸ್ಪಷ್ಟಪಡಿಸಿದರು.

‘ಯಾವುದೇ ಪ್ರಕರಣ ತನಿಖೆಗಾಗಿ ಬಂದಾಗ ತಾಂತ್ರಿಕವಾಗಿ ಮೊಕದ್ದಮೆ ದಾಖಲಿಸಬೇಕಾಗುತ್ತದೆ.

 

ಪ್ರಕರಣಕ್ಕೊಂದು ಸಂಖ್ಯೆ ಕೂಡ ನೀಡಬೇಕಾಗುತ್ತದೆ. ಆ ನಂತರವೇ ತನಿಖೆ ನಡೆಯುವುದು. ಇದು ಸಹಜವಾಗಿ ನಡೆಯುವ ಪ್ರಕ್ರಿಯೆ’ ಎಂದು ದತ್ತ ಹೇಳಿದರು. ಈ ನಡುವೆ ವಿಶೇಷ ನ್ಯಾಯಾಲಯದ ಆದೇಶದ ಪ್ರತಿ ಲೋಕಾಯುಕ್ತ ಪೊಲೀಸರಿಗೆ ಗುರುವಾರ ಸಂಜೆಯೇ ಲಭ್ಯವಾಗಿದ್ದು, ಒಂದೆರಡು ದಿನಗಳಲ್ಲಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.