ನವದೆಹಲಿ(ಪಿಟಿಐ): ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಜನ ವರಿಯಲ್ಲಿ ಶೇ 1.5ರಷ್ಟು ಹೆಚ್ಚಳವಾ ಗಿದ್ದು, 218 ಕೋಟಿ ಡಾಲರ್ಗಳಿಗೆ (ರೂ13,516 ಕೋಟಿ) ಏರಿಕೆ ಕಂಡಿದೆ ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆ ಹೇಳಿದೆ.

2013ನೇ ಸಾಲಿನ ಜನವರಿಯಲ್ಲಿ 215 ಕೋಟಿ ಡಾಲರ್ ( ರೂ13,330 ಕೋಟಿ) ‘ಎಫ್ಡಿಐ’ ಆಕರ್ಷಿಸಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಜನವರಿ ಅವಧಿಯಲ್ಲಿ ಒಟ್ಟಾರೆ ‘ಎಫ್ ಡಿಐ’ ಶೇ 2ರಷ್ಟು ಕುಸಿದಿದ್ದು, 1874 ಕೋಟಿ ಡಾಲರ್ಗಳಿಗೆ (ರೂ1.16 ಲಕ್ಷ ಕೋಟಿಗೆ) ತಗ್ಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1910 ಕೋಟಿ ಡಾಲರ್ (ರೂ1.18 ಲಕ್ಷ ಕೋಟಿ) ಹೂಡಿಕೆ ದಾಖಲಾಗಿತ್ತು.

ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ ಸೇವಾ ಕ್ಷೇತ್ರ ಹೆಚ್ಚಿನ ‘ಎಫ್ಡಿಐ’ ಆಕರ್ಷಿಸಿದೆ. ಒಟ್ಟು 180 ಕೋಟಿ ಡಾಲರ್ (ರೂ11,160 ಕೋಟಿ ) ಬಂಡವಾಳ ಆಕರ್ಷಿಸಿದಂತಾಗಿದೆ. ಔಷಧ ವಲಯ 126 ಕೋಟಿ ಡಾಲರ್ ( ರೂ7812 ಕೋಟಿ), ವಾಹನ ಉದ್ಯಮ 100 ಕೋಟಿ ಡಾಲರ್ (ರೂ6200 ಕೋಟಿ) ‘ಎಫ್ಡಿಐ’ ಆಕರ್ಷಿಸಿವೆ.

ಏಪ್ರಿಲ್–ಜನವರಿ ಅವಧಿಯಲ್ಲಿ ಮಾರಿಷಸ್ ಮೂಲದ ಕಂಪೆನಿಗಳು ಭಾರತದಲ್ಲಿ ಒಟ್ಟು 411 ಕೋಟಿ ಡಾಲರ್ (ರೂ25,482 ಕೋಟಿ) ಹೂಡಿಕೆ ಮಾಡಿವೆ.
ಸಿಂಗಪುರದಿಂದ 367 ಕೋಟಿ ಡಾಲರ್ (ರೂ22,754 ಕೋಟಿ), ಬ್ರಿಟನ್ನಿಂದ 318 ಕೋಟಿ ಡಾಲರ್ (19,716 ಕೋಟಿ) ಮತ್ತು ನೆದರ್ಲೆಂಡ್ನಿಂದ 170 ಕೋಟಿ (ರೂ10,540 ಕೋಟಿ) ಡಾಲರ್ ಬಂಡ ವಾಳ ಹರಿದು ಬಂದಿದೆ.

2012–13ನೇ ಸಾಲಿನಲ್ಲಿ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ದಶಕದ ಹಿಂದಿನ ಮಟ್ಟವಾದ ಶೇ 4.5ಕ್ಕೆ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿದೇಶಿ ಹೂಡಿಕೆ ಆಕರ್ಷಿಸಲು ‘ಎಫ್ ಡಿಐ’ ನೀತಿಯಲ್ಲಿ ಉದಾರೀಕರಣ ತರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.