ಎರಡನೇ ಮಹಾಯುದ್ಧ ಕಾಲದ ಬಾಂಬ್ ನಿಷ್ಕ್ರಿಯ

7

ಎರಡನೇ ಮಹಾಯುದ್ಧ ಕಾಲದ ಬಾಂಬ್ ನಿಷ್ಕ್ರಿಯ

Published:
Updated:

ಮುಂಬೈ (ಪಿಟಿಐ): ಇಲ್ಲಿನ ಸಮುದ್ರದ ದಡದಲ್ಲಿ ಹತ್ತು ದಿನಗಳ ಹಿಂದೆ ಹೂಳೆತ್ತುವ ಸಂದರ್ಭದಲ್ಲಿ ದೊರೆತಿದ್ದ, ಎರಡನೇ ಜಾಗತಿಕ ಮಹಾಯುದ್ಧದ ಕಾಲದ ಫಿರಂಗಿ ಗುಂಡನ್ನು ಭಾನುವಾರ ರಾಯಗಡ ಜಿಲ್ಲೆಯ ಕಾರಂಜಾ ನೌಕಾನೆಲೆಯಲ್ಲಿ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಯಿತು.ಸುಮಾರು 45 ಕೆ.ಜಿ ಸ್ಫೋಟಕವನ್ನು ಹೊಂದಿದ್ದ ಈ ಗುಂಡನ್ನು ನಿಷ್ಕ್ರಿಯಗೊಳಿಸುವ ತಜ್ಞರು ಪೊಲೀಸ್ ಇಲಾಖೆಯಲ್ಲಿ ಇಲ್ಲದ ಕಾರಣ ಮುಂಬೈ ಬಂದರು ಕಚೇರಿಯ ಆವರಣದಲ್ಲಿ ಅದನ್ನು ಇಡಲಾಗಿತ್ತು. ತಜ್ಞರು ಪರಿಶೀಲಿಸಿದ ನಂತರ ಅದನ್ನು ಕಾರಂಜಾ ನೌಕಾನೆಲೆಗೆ ಕಳುಹಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry