ಇರುವೆ ಮತ್ತು ಆನೆ

ಇರುವೆ ಮರಿಗೆ ರಾತ್ರಿ ಎಂಥೆಂಥದೋ ಕನಸು. ಬೆಳಿಗ್ಗೆ ಎದ್ದ ತಕ್ಷಣ ಅಮ್ಮನ ಹತ್ತಿರ ಹೋಗಿ `ಅಮ್ಮಾ, ಅಮ್ಮಾ, ರಾತ್ರಿ ನನ್ನ ಕನಸಲ್ಲಿ ಒಂದು ಆನೆ ಬಂದಿತ್ತು. ಎಷ್ಟು ದೊಡ್ಡಿತ್ತು ಅಂದ್ರೆ - ಒಂದು ಪರ್ವತದ ಹಾಗಿತ್ತು! ಅಮ್ಮಾ, ನಂಗೆ ಆನೆ ನೋಡ್ಬೇಕೂಂತ ತುಂಬ ಆಸೆ ಆಗ್ತಿದೆ...

ತೋರಿಸ್ತೀಯಾ, ಪ್ಲೀಸ್' ಅಂತ ಮುದ್ದುಮುದ್ದಾಗಿ ಕೇಳಿತು. `ಆಯ್ತು ಮರೀ, ಮೊದಲು ಹಲ್ಲುಜ್ಜಿ ಮುಖ ತೊಳೆದು, ಹಾಲು ಕುಡಿದು ರೆಡಿಯಾಗು... ಆಮೇಲೆ ಆನೆ ನೋಡೋಕೆ ಹೋಗೋಣ' ಎಂದಿತು ಅಮ್ಮ ಇರುವೆ'. ಮರಿ ಛಕ ಛಕಾ ಹಲ್ಲುಜ್ಜಿ, ಮುಖ ತೊಳೆದು, ಹಾಲು ಕುಡಿದು, ಹೊಸಾ ಬಟ್ಟೆ ಹಾಕ್ಕೊಂಡು - `ಅಮ್ಮಾ ನಾನು ರೆಡಿ; ನಿಂದೇ ತಡ!' ಎಂದು ಅವಸರಿಸಿತು. ಅಮ್ಮ ಇರುವೆ ಮರೀನ ಎತ್ತಿಕೊಂಡು, ಸರ್ಕಸ್ ಕಂಪೆನೀಲಿದ್ದ ಆನೆ ತೋರ್ಸೋದಕ್ಕೆ ಕರೆದುಕೊಂಡು ಹೋಯಿತು. ಆನೆ ನೋಡಿದ್ದೇ ಇರುವೆ ಮರಿ ಹಿ ಹ್ಹಿ ಹೀ... ಅಂತ ಜೋರಾಗಿ ನಗಲಿಕ್ಕೇ ಶುರು ಮಾಡಿತು. ಆನೆಗೋ ಕೆಂಡದಂಥ ಸಿಟ್ಟು! `ಯಾಕೆ ಹಾಗೆ ನನ್ನೋಡಿ ನಗ್ತೀಯಾ? ಹಲ್ಲುದ್ರಿಸ್ತೀನಿ ನೋಡು' ಅಂತ ಘೀಳಿಟ್ಟಿತು.

`ಅಯ್ಯೋ.. ನೀನೆಂಥಾ ಆನೆ! ನನ್ನ ಕನಸಲ್ಲಿ ಬಂದಿದ್ದ ಆನೆ ನಿಂಗಿಂತ ನೂರು ಪಟ್ಟು ದೊಡ್ಡ ಇತ್ತು, ಗೊತ್ತಾ? ನೀನು ಬರೀ ಪಿಳ್ಳಾರಿ... ಥು! ನಡಿ, ಹೋಗೋಣಾಮ್ಮ... ಈ ಆನೆ ನಂಗಿಷ್ಟ ಆಗಲ್ಲ' ಎನ್ನುತ್ತಾ ಇರುವೇ ಮರಿ ಅಮ್ಮನ ಮಡಿಲಲ್ಲಿ ಕುಳಿತುಕೊಂಡು ಹೊರಟೇ ಹೋಯಿತು.

ಮೂಗಿನ ಕೋಪ
ಕೆಂಪು ಕೆಂಪಾಗಿತ್ತು ಮೂಗು, ಯಾಕೆ ಗೊತ್ತೇ? ಗೋಡೆ ಮೇಲಿದ್ದ ಕನ್ನಡಿ ಅದನ್ನು ನೋಡಿ `ಕಿಸಿಕಿಸಿ' ನಕ್ಕಿತ್ತು. ಮೂಗಿಗೆ ಅವಮಾನ ತಡ್ಕೊಳ್ಳೋಕೇ ಆಗಲಿಲ್ಲ, ಆದರೆ ಏನು ಮಾಡೋದು? ಕನ್ನಡಿಗೆ ಬುದ್ಧಿ ಕಲಿಸೋರು ಯಾರು? ಯೋಚನೆ ಮಾಡೀ ಮಾಡೀ, ಮೂಗು ತನ್ನ ಕೆಳಗಿದ್ದ ಮೀಸೆಯನ್ನು ಕೇಳಿತು. `ಮೀಸೆಯಣ್ಣಾ, ನೋಡು ನಿಂಗಿರೋಕೆ ನನ್ನ ಕೆಳಗೇ ಜಾಗ ಕೊಟ್ಟಿದ್ದೀನಿ, ಅಲ್ವಾ? ಈಗ ನೀನು ನಂಗೊಂದು ಸಹಾಯ ಮಾಡ್ಬೇಕು... ಆ ದರಿದ್ರ ಕನ್ನಡೀಗೆ ಬುದ್ಧಿ ಕಲಿಸು... ಪ್ಲೀಸ್' ಎಂದು ಗೋಗರೀತು. ಮೀಸೆಗೊ ಮೂಗಿಗೆ ಸಹಾಯ ಮಾಡುವ ಮನಸ್ಸೇನೋ ಇತ್ತು. ಕನ್ನಡೀನ ನೋಡುತ್ತಾ ಒಂದು ಕ್ಷಣ ಥರ ಥರ ಅಲುಗಿ ತನ್ನ ಕೋಪ ಹೊರಹಾಕಿತು. ಆದರೆ ಕನ್ನಡಿ ಹೆದರಲೇ ಇಲ್ಲ.

ಮೂಗು ಹಲ್ಲನ್ನು ಬೇಡಿಕೊಂಡಿತು. ಹಲ್ಲು ಸಿಟ್ಟಿನಿಂದ ಕನ್ನಡಿ ನೋಡುತ್ತಾ ಕರಕರ, ಕಟಕಟ ಅಂತ ಸದ್ದು ಮಾಡಿ ತೆಪ್ಪಗಾಯಿತು. ನಾಲಗೆಗೂ ಕನ್ನಡಿ ವಿರುದ್ಧ ಏನೂ ಮಾಡಲು ಸಾಧ್ಯವಾಗಲಿಲ್ಲ. ಆ ಕಡೆ ಈ ಕಡೆ ಹೊರಳಾಡಿ ಸುಮ್ಮನಾಯಿತು. ಕೊನೆಗೆ ಮೂಗು ಕೈಯನ್ನು - `ಅಣ್ಣಯ್ಯ, ನೀನಾದ್ರೂ ಕನ್ನಡಿಗೆ ಬುದ್ಧಿ ಕಲಿಸ್ತೀಯಾ?' ಅಂತ ಅಂಗಲಾಚಿತು. ಮೂಗಿನ ಮಾತು ಮುಗಿದಿದ್ದೇ ತಡ, ಕೈ `ರಪ್' ಅಂತ ಕನ್ನಡಿಗೆ ಹೊಡೀತು. ಕನ್ನಡಿ ಫಳ್ ಅಂತ ಚೂರು ಚೂರಾಯ್ತು. ಕೈಯಿಂದ ದಳದಳಾ ಅಂತ ರಕ್ತ ಸುರೀತು. ಕಣ್ಣಲ್ಲಿ ಫಳಕ್ಕನೇ ನೀರು ಬಂತು.

ನೆಲದ ಮೇಲೆ ಚೆಲಾಪಿಲ್ಲಿಯಾಗಿ ಬಿದ್ದಿದ್ದ ಕನ್ನಡಿಯ ಚೂರುಗಳನ್ನು ನೋಡಿ ಮೂಗಿಗೆ ಖುಷಿಯೋ ಖುಷಿ. ಆದರೆ ಅವುಗಳಲ್ಲಿ ತನ್ನ ಅಷ್ಟಾವಕ್ರ ರೂಪವನ್ನು ನೋಡಿ ಮೂಗು ಪೆಚ್ಚಾಯಿತು; ಇನ್ನಷ್ಟು ಕೆಂಪಾಯಿತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.